Rice water : ಅಕ್ಕಿ ನೀರಿನ (Rice water) ಪ್ರಯೋಜನಗಳು (Benefits) ಅಪಾವಾಗಿದ್ದು, ನೈಸರ್ಗಿಕ ಪರಿಹಾರವು ಚರ್ಮದ ಆರೈಕೆ, ಕೂದಲ ರಕ್ಷಣೆಯ ಜೊತೆಗೆ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ.
ಅಕ್ಕಿ ನೀರಿನಿಂದ ಚರ್ಮದ ಆರೈಕೆ (Skin care with rice water)
ಅಕ್ಕಿ ತೊಳೆದ ನೀರಿನಲ್ಲಿ ಫೆರೂಲಿಕ್ ಆಸಿಡ್ ಮತ್ತು ಇನೊಸಿಟೋಲ್ ಎಂಬ ಅಂಶಗಳು ಇರುತ್ತವೆ. ಇವು ಚರ್ಮವನ್ನು ಕಾಂತಿಮಯವಾಗಿಸಲು ಮತ್ತು ನೈಸರ್ಗಿಕವಾಗಿ ಬಿಳಿಯಾಗಿಸಲು ಸಹಾಯ ಮಾಡುತ್ತವೆ. ಈ ನೀರನ್ನು ಮುಖ ತೊಳೆಯಲು ಅಥವಾ ಟೋನರ್‌ನಂತೆ ಬಳಸಬಹುದು. ಈ ನೀರನ್ನು ಕಣ್ಣಿನ ಕೆಳಗಿನ ಭಾಗಕ್ಕೆ ಹಚ್ಚಿದರೆ ಡಾರ್ಕ್ ಸರ್ಕಲ್‌ಗಳನ್ನೂ ಕಡಿಮೆ ಮಾಡಬಹುದು.
ಇದನ್ನೂ ಓದಿ: Periods : ಪಿರಿಯಡ್ಸ್ ಸರಿಯಾದ ಸಮಯಕ್ಕೆ ಆಗಲು ಈ ಆಹಾರಗಳನ್ನು ಸೇವಿಸಿ
ಅಕ್ಕಿ ನೀರಿನಿಂದ ಕೇಶದ ಆರೈಕೆ (Hair care with rice water)
ಅಕ್ಕಿ ತೊಳೆದ ನೀರಿನಲ್ಲಿರುವ ಅಮಿನೋ ಆಸಿಡ್‌ಗಳು ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲನ್ನು ದಪ್ಪವಾಗಿಸುತ್ತದೆ. ಇದು ನೈಸರ್ಗಿಕ ಕಂಡೀಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಈ ನೀರನ್ನು ಕೂದಲಿಗೆ ಹಚ್ಚಿ ಕೆಲವು ನಿಮಿಷಗಳ ನಂತರ ತೊಳೆದರೆ, ಕೂದಲು ಮೃದುವಾಗುತ್ತದೆ ಮತ್ತು ಹೊಳೆಯುತ್ತದೆ.
ಹೈಡೇಶನ್‌ಗೆ ಸಹಕಾರಿ (Helps in hydration)
ಅಕ್ಕಿ ತೊಳೆದ ನೀರು ವಿಟಮಿನ್ ಬಿ, ಸಕ್ಕರೆ ಮತ್ತು ಖನಿಜಗಳಾದ ಪೊಟಾಶಿಯಂ ಮತ್ತು ಮ್ಯಾಗ್ನೆಷಿಯಂ`ಹೊಂದಿರುತ್ತದೆ, ಇದು ದೇಹಕ್ಕೆ ಶಕ್ತಿಯನ್ನು ತ್ವರಿತವಾಗಿ ಪೂರೈಸುತ್ತದೆ. ಈ ನೀರನ್ನು ಕುಡಿಯುವುದರಿಂದ ದೇಹದ ಹೈಡೇಶನ್ ಮಟ್ಟ ಸುಧಾರಿಸುತ್ತದೆ.
ಇದನ್ನೂ ಓದಿ: Rainy season : ಮಳೆಗಾಲದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಪಚನ ಕ್ರಿಯೆ ಸುಧಾರಣೆ (Improves digestion)
ಅಕ್ಕಿ ತೊಳೆದ ನೀರು ಪಚನಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಸಂಬಂಧಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಅತಿಸಾರ ಮತ್ತು ಡೈರಿಯಾದಂತಹ ಸಮಸ್ಯೆಯಿದ್ದಾಗ, ಈ ನೀರನ್ನು ಕುಡಿದರೆ ಅತ್ಯಂತ ಸಹಕಾರಿಯಾಗುತ್ತದೆ.
ಸಸ್ಯಗಳಿಗೆ ಸಹಕಾರಿ (Helpful for plants)
ಅಕ್ಕಿ ತೊಳೆದ ನೀರನ್ನು ಸಸ್ಯಗಳಿಗೆ ಹಾಕಿದರೆ ಅವುಗಳ ಬೆಳವಣಿಗೆಯಲ್ಲಿ ಸಹಾಯವಾಗುತ್ತದೆ. ಇದು ಸಸ್ಯಗಳಿಗೆ ಅಗತ್ಯವಿರುವ ಖನಿಜಗಳನ್ನು ಪೂರೈಸುತ್ತದೆ. ಈಗಾಗಲೇ ಪ್ರಾಚೀನ ಕಾಲದಿಂದಲೂ ಅಕ್ಕಿ ತೊಳೆದ ನೀರನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತಿದೆ.