Mango Fruit | ಮಾವು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಗೊತ್ತಾ?

Mango Fruit : ಮಾವಿನ ಹಣ್ಣುಗಳು ವಿಟಮಿನ್ ಎ, ಸಿ ಮತ್ತು ಇ ಮತ್ತು ಪೊಟ್ಯಾಸಿಯಮ್ ಹಾಗು ಮೆಗ್ನೀಸಿಯಮ್‌ನಂತಹ ಖನಿಜಗಳ ಸಮೃದ್ಧ ಮೂಲವಾಗಿದ್ದು, ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಹೌದು, ಈ ಪೋಷಕಾಂಶಗಳು ಪ್ರತಿರಕ್ಷಣಾ…

Mango Fruit

Mango Fruit : ಮಾವಿನ ಹಣ್ಣುಗಳು ವಿಟಮಿನ್ ಎ, ಸಿ ಮತ್ತು ಇ ಮತ್ತು ಪೊಟ್ಯಾಸಿಯಮ್ ಹಾಗು ಮೆಗ್ನೀಸಿಯಮ್‌ನಂತಹ ಖನಿಜಗಳ ಸಮೃದ್ಧ ಮೂಲವಾಗಿದ್ದು, ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಹೌದು, ಈ ಪೋಷಕಾಂಶಗಳು ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುವುದಲ್ಲದೆ, ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ ಮತ್ತು ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೆ, ಮಾವು ದೇಹದ ಮೇಲೆ ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Thyroid | ಥೈರಾಯ್ಡ್ ಎಂದರೇನು? ಥೈರಾಯ್ಡ್ ಸಮಸ್ಯೆ ಬರುವುದಕ್ಕೆ ಮೂಲ ಕಾರಣ ಏನು ಗೊತ್ತಾ? ಈ ಸಮಸ್ಯೆಗೆ ಪರಿಹಾರ

Vijayaprabha Mobile App free

ತೂಕ ಇಳಿಸಲು ಸಹಕಾರಿ ಮಾವಿನ ಹಣ್ಣು (Mango Fruit Helps in Weight Loss)

ತೂಕ ಇಳಿಸಲು ಸಹಕಾರಿ ಮಾವಿನ ಹಣ್ಣಿನಲ್ಲಿ ಪೈಥೋಕೆಮಿಕಲ್ ಅತ್ಯಧಿಕ ಮಟ್ಟದಲ್ಲಿದ್ದು, ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟರೆ, ಅದು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು. ಇದು ಕೊಬ್ಬಿನ ಅಂಗಾಂಶಗಳನ್ನು ವಿಘಟಿಸುವುದರಿಂದ ನೆನೆಸಿ ಬಳಿಕ ಹಣ್ಣು ತಿಂದರೆ ತೂಕ ಇಳಿಸಲು ಸಹಕಾರಿ ಆಗುವುದು.

ರಕ್ತದೊತ್ತಡ, ಬಾಯಾರಿಕೆ ನಿಯಂತ್ರಣ ಮಾವಿನ ಎಲೆಗಳ ರಸವನ್ನು ನಿಯಮಿತವಾಗಿ ಕುಡಿದರೆ, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಾವಿನ ಬೀಜದ ಒಳ ಭಾಗವನ್ನು ತೆಗೆದುಕೊಂಡು ಅದರಿಂದ ಕಷಾಯ ತಯಾರಿಸಿ 5ರಿಂದ 10 ಗ್ರಾಂ ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ಬಾಯಾರಿಕೆ ಕಡಿಮೆಯಾಗುತ್ತದೆ.

ಇದನ್ನೂ ಓದಿ: Cough and cold | ಕೆಮ್ಮು, ನೆಗಡಿ ಗುಣಪಡಿಸುವ ಪರಿಣಾಮಕಾರಿ ಮನೆಮದ್ದುಗಳು

ಮೊಡವೆಗಳಿಗೆ ರಾಮಬಾಣ (Mango Fruit Helps in Acne)

ಮುಖದ ಮೇಲೆ ಅತಿಯಾದ ಮೊಡವೆ ಸಮಸ್ಯೆಗಳು ಮತ್ತು ಮೊಡವೆ ಕಲೆಗಳಿದ್ದರೆ ಮಾವಿನಕಾಯಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಪ್ರತಿರಾತ್ರಿ ಮಲಗುವಾಗ ಅದನ್ನು ಮುಖಕ್ಕೆ ಹಚ್ಚಬೇಕು. ನಿರಂತರವಾಗಿ ನಾಲೈದು ದಿನಗಳ ಕಾಲ ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳು ಕ೦ಡುಬರುತ್ತವೆ.

ಮೂತ್ರ ಪಿಂಡದಲ್ಲಿ ಕಲ್ಲಿನ ಸಮಸ್ಯೆ (Mango Fruit Helps in Kidney Stones)

ಮೂತ್ರ ಪಿಂಡದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಲೋಟದಲ್ಲಿ ಒಂದು ಚಮಚ ಮಾವಿನ ಎಲೆಗಳ ಪುಡಿಯನ್ನು ಹಾಕಿ ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಎದ್ದು ಈ ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿರುವ ಕಲ್ಲು ಮೂತ್ರದ ಮೂಲಕ ಹೊರ ಬರುತ್ತದೆ.

ಒಣ ಕೆಮ್ಮು, ಬಿಕ್ಕಳಿಕೆ ನಿವಾರಣೆ ಮಾವಿನ ಹಣ್ಣನ್ನು ಚೆನ್ನಾಗಿ ನೀರಿನಲ್ಲಿ ಬೇಯಿಸಿ. ಅದು ತಣ್ಣಗಾದ ಮೇಲೆ ಮಾವಿನ ಹಣ್ಣಿನ ರಸವನ್ನು ಸೇವಿಸಿದರೆ ಒಣ ಕೆಮ್ಮು ಕಡಿಮೆಯಾಗುತ್ತದೆ. ಇದಕ್ಕೆ, ಮಾವಿನ ಎಲೆಯ ರಸ 1/4 ಚಮಚ, 1/4 ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಿದರೆ ಅತಿಯಾದ ಬಿಕ್ಕಳಿಕೆ ಕೂಡ ನಿವಾರಣೆಯಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.