Cough and cold | ಕೆಮ್ಮು, ನೆಗಡಿ ಗುಣಪಡಿಸುವ ಪರಿಣಾಮಕಾರಿ ಮನೆಮದ್ದುಗಳು

Cough and cold : ಕೆಮ್ಮು (Cough) ಮತ್ತು ನೆಗಡಿ (Cold) ಎರಡು ಸಾಮಾನ್ಯ ವೈದ್ಯಕೀಯ ದೂರುಗಳಾಗಿದ್ದು, ಇದು ಸಾಮಾನ್ಯವಾಗಿ ಗಂಭೀರವಾದ ಯಾವುದರ ಸಂಕೇತವಲ್ಲ.  ದೀರ್ಘಕಾಲದ ಕೆಮ್ಮು ಹಲವಾರು ಪರಿಸ್ಥಿತಿಗಳ ಲಕ್ಷಣವಾಗಿದೆ. ಇದು ಹಠಾತ್…

Cough and cold

Cough and cold : ಕೆಮ್ಮು (Cough) ಮತ್ತು ನೆಗಡಿ (Cold) ಎರಡು ಸಾಮಾನ್ಯ ವೈದ್ಯಕೀಯ ದೂರುಗಳಾಗಿದ್ದು, ಇದು ಸಾಮಾನ್ಯವಾಗಿ ಗಂಭೀರವಾದ ಯಾವುದರ ಸಂಕೇತವಲ್ಲ. 

ದೀರ್ಘಕಾಲದ ಕೆಮ್ಮು ಹಲವಾರು ಪರಿಸ್ಥಿತಿಗಳ ಲಕ್ಷಣವಾಗಿದೆ. ಇದು ಹಠಾತ್ ಮತ್ತು ಆಗಾಗ್ಗೆ ಪುನರಾವರ್ತಿತ ಪ್ರಕ್ರಿಯೆಯಾಗಿದ್ದು, ದೀರ್ಘಕಾಲದ ಕೆಮ್ಮು ಕೇವಲ ಕಿರಿಕಿರಿಗಿಂತ ಹೆಚ್ಚಾಗಿರುತ್ತದೆ. ಇದು ನಿದ್ರೆಯನ್ನು ಅಡ್ಡಿಪಡಿಸಬಹುದು, ಅಸ್ವಸ್ಥತೆಯನ್ನು ಉಂಟುಮಾಡಬಹುದು, ಕೆಲಸ ಮತ್ತು ಸಾಮಾಜಿಕ ಸಂವಹನಗಳಲ್ಲಿ ಕಿರಿಕಿರಿ ಉಂಟು ಮಾಡಬಹುದು

ಇದನ್ನೂ ಓದಿ: Rice water | ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನ ಈ ಉಪಯೋಗಗಳನ್ನು ತಿಳಿದುಕೊಳ್ಳಿ

Vijayaprabha Mobile App free

ಕೆಮ್ಮು, ನೆಗಡಿಗೆ ಅನೇಕ ನೈಸರ್ಗಿಕ ಪರಿಹಾರಗಳು ಶಮನಗೊಳಿಸಲು ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ಕೆಮ್ಮು, ನೆಗಡಿ (Cough and cold) ನಿಲ್ಲಿಸಲು ಕೆಲವು ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ.

Cough and cold : ಕೆಮ್ಮು, ನೆಗಡಿ ಗುಣಪಡಿಸುವ ಮನೆಮದ್ದುಗಳು

  1. ಶುಂಠಿ ಚಹಾ
  2. ಹಾಲು & ಅರಿಶಿನ
  3. ಉಗುರು ಬೆಚ್ಚನೆಯ ನೀರು
  4. ನಿಂಬೆ, ದಾಲ್ಟಿನ್ನಿ & ಜೇನುತುಪ್ಪದ ಮಿಶ್ರಣ
  5. ಬೆಳ್ಳುಳ್ಳಿ
  6. ಮಸಾಲೆ ಚಹಾ

1. ಶುಂಠಿ ಚಹಾ (Ginger tea)

ಶುಂಠಿ ಚಹಾ ಕುಡಿಯುವುದರಿಂದ ಮೂಗಿನಲ್ಲಿರುವ ನೀರಿನಾಂಶ ಒಣಗಿ, ಕಫ ಹೊರಹಾಕುತ್ತದೆ. ಶೀಘ್ರಗತಿಯಲ್ಲಿ ನೆಗಡಿ ಶಮನಗೊ೦ಡು, ಬಹುಬೇಗ ಚೇತರಿಕೆ ಕಾಣಬಹುದು. ಅಲ್ಲದೇ ಇದರಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಂ, ಮೆಗ್ನಿಷಿಯಂ & ಕಬ್ಬಿಣಾಂಶ ಇದೆ

2. ಹಾಲು & ಅರಿಶಿನ (Milk & Turmeric)

ಅರಿಶಿನ ಆಂಟಿ ಆಕ್ಸಿಡೆಂಟ್ (ಉತ್ಕರ್ಷಣ ನಿರೋಧಕ) ಗುಣವನ್ನು ಹೊಂದಿದೆ. ರಾತ್ರಿ ಮಲಗುವ ಮುನ್ನ ಒ೦ದು ಲೋಟ ಬೆಚ್ಚಗಿನ ಅರಿಶಿನದ ಹಾಲನ್ನು ಕುಡಿಯುವುದು ಶೀತ ಮತ್ತು ಕೆಮ್ಮಿನಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

3. ಉಗುರು ಬೆಚ್ಚನೆಯ ನೀರು (lukewarm water)

ನೆಗಡಿ, ಕೆಮ್ಮಿನ ಜೊತೆಗೆ ಗಂಟಲು ನೋಯುತ್ತಿದ್ದರೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಮತ್ತು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಮುಕ್ಕಳಿಸುವುದರಿಂದ ಗಂಟಲು ನೋವು ಕಡಿಮೆಯಾಗುವುದು. ಇದನ್ನು ಹಳೇ ಕಾಲದ ಥೆರಪಿ ಎಂದೇ ಕರೆಯುತ್ತಾರೆ.

ಇದನ್ನೂ ಓದಿ: Periods : ಪಿರಿಯಡ್ಸ್ ಸರಿಯಾದ ಸಮಯಕ್ಕೆ ಆಗಲು ಈ ಆಹಾರಗಳನ್ನು ಸೇವಿಸಿ

4. ನಿಂಬೆ, ದಾಲ್ಟಿನ್ನಿ & ಜೇನುತುಪ್ಪದ ಮಿಶ್ರಣ (Blend of lemon, cinnamon & honey)

ನಿಂಬೆ, ದಾಲ್ಟಿನ್ನಿ & ಜೇನುತುಪ್ಪದ ಮಿಶ್ರಣವು ಶೀತ, ಕೆಮ್ಮನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ. ಅರ್ಧ ಚಮಚ ಜೇನುತುಪ್ಪಕ್ಕೆ ಕೆಲವು ಹನಿ ನಿಂಬೆ ರಸ, ಒಂದು ಚಿಟಿಕೆ ದಾಲ್ಟಿನ್ನಿ ಸೇರಿಸಿ, ದಿನಕ್ಕೆ ಎರಡು ಬಾರಿ ಸೇವಿಸಿ.

5. ಬೆಳ್ಳುಳ್ಳಿ (Garlic)

ತುಪ್ಪದಲ್ಲಿ ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಹುರಿಯಿರಿ. ಇದು ಬೆಚ್ಚಗಿರುವಾಗಲೇ ಸೇವಿಸಿ. ಇದು ಕಹಿಯಾಗಿದ್ದರೂ, ನೆಗಡಿ ಮತ್ತು ಕೆಮ್ಮಿಗೆ ಹಿತವಾದ ಪರಿಣಾಮ ಬೀರುತ್ತದೆ.

6. ಮಸಾಲೆ ಚಹಾ (Masala Tea)

ತುಳಸಿ, ಶುಂಠಿ ಮತ್ತು ಕರಿಮೆಣಸು ಮೂರನ್ನು ಸೇರಿಸಿ ಮಾಡಿದ ಮಸಾಲೆಯುಕ್ತ ಚಹಾ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಕೆಮ್ಮಿನ ವಿರುದ್ಧ ಹೋರಾಡುವಲ್ಲಿ ಈ ಮೂರು ಪದಾರ್ಥಗಳು ಪ್ರಮುಖ ಪಾತ್ರವಹಿಸುತ್ತವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.