Yogurt : ನೀವು ದುರ್ಬಲ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿದ್ದರೆ ರಾತ್ರಿಯಲ್ಲಿ ಮೊಸರು (Yogurt) ಸೇವಿಸಿದರೆ ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸಬಹುದು. “ಆಮ್ಲತೆ, ಆಮ್ಲೀಯತೆ ಅಥವಾ ಅಜೀರ್ಣದಂತಹ ಜೀರ್ಣಕ್ರಿಯೆಯ ಸಮಸ್ಯೆಗಳಿರುವ ಜನರು ರಾತ್ರಿಯಲ್ಲಿ ಮೊಸರು ಅಥವಾ ಮೊಸರನ್ನು ಸೇವಿಸಬಾರದು ಏಕೆಂದರೆ ಅದು ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗಿದ್ದಾಗ ಮತ್ತು ನಿದ್ರೆಗೆ ಸಿದ್ಧವಾಗಿದ್ದಾಗ ಮಲಬದ್ಧತೆಗೆ ಕಾರಣವಾಗಬಹುದು.
ಇದನ್ನೂ ಓದಿ: Vomiting while travelling | ಪ್ರಯಾಣ ಮಾಡುವಾಗ ಪದೇ-ಪದೇ ವಾಂತಿ ಆಗುತ್ತಾ? ಇಲ್ಲಿದೆ ಸುಲಭ ಪರಿಹಾರ
ರಾತ್ರಿ ಮೊಸರು ಸೇವನೆಯಿಂದ ಆಗುವ ಆರೋಗ್ಯ ಸಮಸ್ಯೆಗಳು (Health problems caused by consumption of yogurt at night)
- ಅಜೀರ್ಣದ ಸಮಸ್ಯೆ
- ನಿದ್ರಾಹೀನತೆ
- ಕಫ ದೋಷ
- ತೂಕ ಹೆಚ್ಚಳ
1. ಅಜೀರ್ಣದ ಸಮಸ್ಯೆ
ರಾತ್ರಿಯಲ್ಲಿ ಮೊಸರು ತಿಂದರೆ ಜೀರ್ಣಕಾರಿ ಸಮಸ್ಯೆ ಎದುರಾಗುತ್ತದೆ. ಇದನ್ನು ಜೀರ್ಣಿಸಿಕೊಳ್ಳಲು ಕರುಳಿಗೆ ತುಂಬಾ ಕಷ್ಟವಾಗುತ್ತದೆ. ರಾತ್ರಿ ಮೊಸರು ಸೇವಿಸದರೆ ಬೆಳಗ್ಗೆ ಗ್ಯಾಸ್, ಸೆಳೆತ ಮತ್ತು ಹೊಟ್ಟೆ ನೋವು ಉಂಟಾಗಬಹುದು.
2. ನಿದ್ರಾಹೀನತೆ
- ಮೊಸರು ಬಹಳಷ್ಟು ಪ್ರೋಟೀನ್ ಮತ್ತು ಲ್ಯಾಕ್ಟೋಸ್ ಅನ್ನು ಹೊಂದಿರುತ್ತದೆ.
- ರಾತ್ರಿಯಲ್ಲಿ ಇದನ್ನು ತಿನ್ನುವುದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.
- ಮೊಸರು ತಿಂದ ನಂತರ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಾರೆ.
ಇದನ್ನೂ ಓದಿ: Ajwain water | ಓಮದ ನೀರು ಸೇವಿಸಿದರೆ ಆಗುವ ಆರೋಗ್ಯ ಲಾಭಗಳು
3. ಕಫ ದೋಷ
ಆಯುರ್ವೇದದ ಪ್ರಕಾರ, ಮೊಸರು ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುತ್ತದೆ. ರಾತ್ರಿಯಲ್ಲಿ ದೇಹದಲ್ಲಿ ಕಫದ ಪ್ರಮಾಣವು ಸ್ವಾಭಾವಿಕವಾಗಿ ಹೆಚ್ಚಿರುವುದರಿಂದ ಮೊಸರು ಸೇವನೆ ಮಾಡಿದರೆ ಅಸ್ತಮಾ, ಕೆಮ್ಮು ಮತ್ತು ಶೀತ ಉಂಟಾಗಬಹುದು.
4. ತೂಕ ಹೆಚ್ಚಳ
ರಾತ್ರಿ ಮೊಸರು ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಮೊಸರನ್ನು ಸೇವಿಸುವವರ ದೇಹದಲ್ಲಿ ಮೊಸರು ಕೊಬ್ಬು ಹೆಚ್ಚಿಸಿದರೆ, ಅನ್ನ ಗ್ಲಕೋಸ್ ಮಟ್ಟ ಹೆಚ್ಚಿಸುತ್ತದೆ. ಹೀಗಾಗಿ ತೂಕ ಹೆಚ್ಚುತ್ತದೆ.
ಮೊಸರು ಬದಲಿಗೆ ರಾತ್ರಿ ಮಜ್ಜಿಗೆ ಬಳಸಬಹುದು.
ಮೊಸರು ಬದಲಿಗೆ ರಾತ್ರಿ ಮಜ್ಜಿಗೆ ಬಳಸಬಹುದು. ಮಜ್ಜಿಗೆ ಸೇವಿಸುವಾಗ ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ ಹಾಕಿದರೆ ಒಳ್ಳೆಯದು. ಅಥವಾ ಇಂಗು ಮತ್ತು ಉಪ್ಪು ಹಾಕಿಯೂ ಮಜ್ಜಿಗೆ ಸೇವಿಸಬಹುದು.
ಇದನ್ನೂ ಓದಿ: Insomnia | ನಿದ್ರಾಹೀನತೆಯಿಂದ ದೂರವಿರಲು ಸುಲಭ ಮನೆಮದ್ದುಗಳು