Solar eclipses in 2025 | 2025ರಲ್ಲಿ ಸಂಭವಿಸಲಿರುವ ಸೂರ್ಯ ಗ್ರಹಣಗಳ ಸಮಯ, ದಿನಾಂಕ

Solar eclipses in 2025 : 2025ರಲ್ಲಿ ಸಂಭವಿಸಲಿರುವ ಸೂರ್ಯ ಗ್ರಹಣಗಳ (Solar eclipses) ಸಮಯ, ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ Solar eclipses in 2025 : ಮೊದಲ ಸೂರ್ಯಗ್ರಹಣ 2025…

Solar eclipses in 2025

Solar eclipses in 2025 : 2025ರಲ್ಲಿ ಸಂಭವಿಸಲಿರುವ ಸೂರ್ಯ ಗ್ರಹಣಗಳ (Solar eclipses) ಸಮಯ, ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Solar eclipses in 2025 : ಮೊದಲ ಸೂರ್ಯಗ್ರಹಣ

2025 ರ ಮೊದಲ ಸೂರ್ಯಗ್ರಹಣವು ಮಾರ್ಚ್ 29 ರಂದು ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಲಿದೆ. ಅಂದು ಬೆಳಿಗ್ಗೆ 08:50 ರಿಂದ ಮಧ್ಯಾಹ್ನ 12:43 ರ ಸಮಯದಲ್ಲಿ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಬದಲಾಗಿ ಯುರೋಪ್, ಏಷ್ಯಾ, ಆಫ್ರಿಕಾ, ಅಮೆರಿಕ ಮಹಾಸಾಗರದಲ್ಲಿ ಗೋಚರಿಸಲಿದೆ.

ಇದನ್ನೂ ಓದಿ: Mauni Amavasya 2025 | ಮೌನಿ ಅಮಾವಾಸ್ಯೆ ಏನು ಮಾಡಬೇಕು & ಏನು ಮಾಡಬಾರದು

Vijayaprabha Mobile App free

Solar eclipses in 2025 : 2ನೇ ಸೂರ್ಯಗ್ರಹಣ

2025ರ ಸೆಪ್ಟೆಂಬರ್ 21 ರಂದು ಎರಡನೇ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿದ್ದು, ಅ೦ದು ಬೆಳಿಗ್ಗೆ 5:29 ರಿಂದ 9:53 ರವರೆಗೆ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿಯೂ ಗೋಚರಿಸುವುದಿಲ್ಲ. ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರದಲ್ಲಿ ಸೂರ್ಯ ಗ್ರಹಣ

ಸರ್ವ ಪಿತೃ ಅಮಾವಾಸ್ಯೆ

ಪಂಚಾಂಗದ ಪ್ರಕಾರ, ಮೊದಲ ಗ್ರಹಣವು ಚೈತ್ರ ಅಮಾವಾಸ್ಯೆಯ ದಿನದ೦ದು ಮತ್ತು ಎರಡನೇ ಸೂರ್ಯಗ್ರಹಣವು ಪಿತೃಪಕ್ಷದ ಸರ್ವ ಪಿತೃ ಅಮಾವಾಸ್ಯೆಯ ದಿನದಂದು ಸಂಭವಿಸುತ್ತಿದೆ. ಎರಡೂ ದಿನಾಂಕಗಳು ತು೦ಬಾ ವಿಶೇಷ, ಚೈತ್ರ ನವರಾತ್ರಿಯು ಚೈತ್ರ ಅಮಾವಾಸ್ಯೆಯ ನಂತರ ಪ್ರಾರ೦ಭವಾಗುತ್ತದೆ.

ಇದನ್ನೂ ಓದಿ: Mauni Amavasya | ಮೌನಿ ಅಮಾವಾಸ್ಯೆಯ ಶುಭ ಮುಹೂರ್ತ, ಪೂಜೆ ವಿಧಾನ

ಶನಿಯ ಸಂಚಾರ

ಮೊದಲ ಸೂರ್ಯಗ್ರಹಣದ ದಿನದಂದು ಶನಿ ಅಮಾವಾಸ್ಯೆಯೂ ಇದೆ. ಈ ದಿನ ಶನಿ ಕು೦ಭರಾಶಿಯಿ೦ದ ಮೀನ ರಾಶಿಗೆ ಸಂಚರಿಸುತ್ತಾನೆ. ಶನಿಯ ಸಂಚಾರವು ತುಂಬಾ ವಿಶೇಷವಾಗಿರುತ್ತದೆ, ಏಕೆ೦ದರೆ ಶನಿ ಸ್ವರಾಶಿಯನ್ನು ತೊರೆದು ಗುರುವಿನ ರಾಶಿಚಕ್ರ ಚಿಹ್ನೆಯನ್ನು ಪ್ರವೇಶಿಸುತ್ತಿದ್ದಾನೆ, ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.

ದಾನದ ಫಲ

ಶನಿ ಅಮಾವಾಸ್ಯೆ, ಚೈತ್ರ ಅಮಾವಾಸ್ಯೆಯ ದಿನದಂದು, ಸೂರ್ಯಗ್ರಹಣ ಸಂಭವಿಸಿದಾಗ ದಾನದ ಫಲ ಹೆಚ್ಚಾಗಲಿದ್ದು, ಈ ದಿನ ಸ್ನಾನ ಮಾಡಿ ದಾನ ಮಾಡಬೇಕು. ಪ್ರತಿಯೊಂದು ದಾನವು ಸಾಕಷ್ಟು ಫಲವನ್ನು ನೀಡುತ್ತವೆ ಎ೦ದು ಹೇಳಲಾಗುತ್ತದೆ. ಆದ್ದರಿಂದ, ಎರಡೂ ದಿನಗಳಲ್ಲಿ ಸೂರ್ಯ ಗ್ರಹಣದ ಜೊತೆಗೆ ಬಡವರಿಗೆ ದಾನ ಮಾಡಬೇಕು.

ಇದನ್ನೂ ಓದಿ: Rashi bhavishya | ಮೌನಿ ಅಮಾವಾಸ್ಯೆ ನಂತರ ಈ 5 ರಾಶಿಗೆ ಬಂಪ‌ರ್ ಲಾಟರಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply