Fenugreek : ಮೆಂತ್ಯವು ಪರ್ಯಾಯ ಔಷಧದಲ್ಲಿ ದೀರ್ಘಕಾಲ ಬಳಸಲಾಗುವ ಮೂಲಿಕೆಯಾಗಿದ್ದು, ಇದು ಭಾರತೀಯ ಭಕ್ಷ್ಯಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಬಳಸಲಾಗುತ್ತದೆ.
ಮೆಂತ್ಯವು ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು, ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಮೂಲಿಕೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಇದನ್ನೂ ಓದಿ: Stroke | ಪಾರ್ಶ್ವವಾಯು ಬರದಂತೆ ತಡೆಯಲು ಟಾಪ್ 5 ಸಲಹೆಗಳು
ಮೆಂತ್ಯ ಸೊಪ್ಪಿನ ಆರೋಗ್ಯ ಪ್ರಯೋಜನಗಳು (Fenugreek Health benefits)
- ಮೂತ್ರಪಿಂಡಗಳ ಆರೋಗ್ಯ
- ಸಕ್ಕರೆ ಮಟ್ಟ ನಿಯಂತ್ರಣ
- ಹೃದಯದ ಆರೋಗ್ಯ
- ತೂಕ ನಿಯಂತ್ರಣ
- ಕೂದಲು & ಚರ್ಮದ ಆರೋಗ್ಯ
1. ಮೂತ್ರಪಿಂಡಗಳ ಆರೋಗ್ಯ (Kidney health with fenugreek)
ಮೆಂತ್ಯ ಸೊಪ್ಪು ದೇಹವನ್ನು ಶುದ್ದೀಕರಿಸುವ ಸ್ವಭಾವ ಹೊಂದಿದ್ದು, ಟಾಕ್ಸಿನ್ಸ್‌ಗಳನ್ನು ಹೊರಹಾಕಲು ನೆರವಾಗುತ್ತದೆ. ಇದು ಮೂತ್ರಪಿಂಡಗಳಿಗೆ ಹೆಚ್ಚಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
2. ಸಕ್ಕರೆ ಮಟ್ಟ ನಿಯಂತ್ರಣ (Fenugreek helps control sugar levels)
ಮೆಂತ್ಯ ಸೊಪ್ಪಿನಲ್ಲಿರುವ ಆಮ್ಲಗಳು ಮತ್ತು ನೈಸರ್ಗಿಕ ಫೈಬರ್ ಶುದ್ಧಕಾರಕವಾಗಿದ್ದು, ರಕ್ತದಲ್ಲಿ ಗೂಕೋಸ್ ಮಟ್ಟವನ್ನು ಇದು ನಿಯಂತ್ರಿಸುತ್ತದೆ. ಹಾಗಾಗಿ ಡಯಬೆಟಿಸ್ ಇರುವವರಿಗೆ ಇದರ ಸೇವನೆ ತುಂಬಾ ಸಹಾಯಕ.
ಇದನ್ನೂ ಓದಿ: Sinusitis disease | ಏನಿದು ಸೈನಸೈಟಿಸ್ ಖಾಯಿಲೆ? ಹೇಗೆ ಉಂಟಾಗುತ್ತದೆ? ತೀವ್ರವಾದ ಸೈನಸೈಟಿಸ್ ಖಾಯಿಲೆಗೆ ಕಾರಣಗಳು ಯಾವುವು?
3. ಹೃದಯದ ಆರೋಗ್ಯ (Heart health)
ಮೆಂತ್ಯ ಸೊಪ್ಪಿನಲ್ಲಿ ಇರುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯ ಸಂಬಂಧಿತ ರೋಗಗಳನ್ನು ತಡೆಗಟ್ಟಲು ನೆರವಾಗುತ್ತದೆ. ಜೊತೆಗೆ ಮೆಂತ್ಯ ಸೊಪ್ಪು ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಹೊಟ್ಟೆಯಲ್ಲಿ ಉಂಟಾಗುವ ಉರಿಯೂತ ಮತ್ತು ಅಜೀರ್ಣವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.
4. ತೂಕ ನಿಯಂತ್ರಣ (Weight control)
ಮೆಂತ್ಯ ಸೊಪ್ಪಿನಲ್ಲಿ ಹೆಚ್ಚಿನ ಡೈಟರಿ ಫೈಬರ್ ಇರುವುದರಿಂದ ಇದನ್ನು ತಿಂದ ಬಳಿಕ ಹೊಟ್ಟೆ ತುಂಬಿದ ಅನುಭವ ಇರುತ್ತದೆ. ಇದು ಹೆಚ್ಚಿನ ಮತ್ತು ಪದೇ ಪದೇ ಆಹಾರ ಸೇವನೆ ತಡೆಯಲು ಸಹಕಾರಿಯಾಗಿದೆ.
ಇದನ್ನೂ ಓದಿ: Papaya fruit | ಪೋಷಕಾಂಶಗಳಗಳಿಂದ ಸಮೃದ್ಧವಾಗಿರುವ ಪಪ್ಪಾಯಿ ಹಣ್ಣಿನಿಂದ ಆರೋಗ್ಯಕ್ಕೆ ಸಿಗುತ್ತೆ ನೂರಾರು ಪ್ರಯೋಜನ
5. ಕೂದಲು & ಚರ್ಮದ ಆರೋಗ್ಯ (Hair & Skin Health)
ಮೆಂತ್ಯ ಸೊಪ್ಪಿನಿಂದ ತಯಾರಿಸಿದ ಪೇಸ್ಟ್ ಅಥವಾ ರಸವನ್ನು ಚರ್ಮದ ಮೇಲೆ ಬಳಸಿದರೆ, ಚರ್ಮದಲ್ಲಿ ಉಂಟಾಗುವ ಮೊಡವೆ, ಉರಿ ಮತ್ತು ಕಲೆಗಳು ಕಡಿಮೆಯಾಗುತ್ತವೆ. ಜೊತೆಗೆ ಮೆಂತ್ಯ ಸೊಪ್ಪಿನ ಪೇಸ್ಟ್ ಕೂದಲಿಗೆ ಹಚ್ಚುವುದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.