Sinusitis disease | ಏನಿದು ಸೈನಸೈಟಿಸ್ ಖಾಯಿಲೆ? ಹೇಗೆ ಉಂಟಾಗುತ್ತದೆ? ತೀವ್ರವಾದ ಸೈನಸೈಟಿಸ್ ಖಾಯಿಲೆಗೆ ಕಾರಣಗಳು ಯಾವುವು?

Sinusitis disease : ಸೈನಸ್ ಎಂಬುದು ಮೂಗಿನ ಒಂದು ಜಾಗ. ಮೂಗಿನ ಮೂಳೆ ಮೃದುವಾಗಿದ್ದು ಈ ಮೂಳೆಯ ಹಿಂದೆ, ಎರಡೂ ಕಣ್ಣುಗಳ ನಡುವೆ ಮತ್ತು ಹಣೆಭಾಗದ ಕೊಂಚ ಅಡಿಯಲ್ಲಿ ಟೊಳ್ಳು ಭಾಗವೊಂದಿದೆ. ಇದೇ ಕುಹರ…

Sinusitis disease

Sinusitis disease : ಸೈನಸ್ ಎಂಬುದು ಮೂಗಿನ ಒಂದು ಜಾಗ. ಮೂಗಿನ ಮೂಳೆ ಮೃದುವಾಗಿದ್ದು ಈ ಮೂಳೆಯ ಹಿಂದೆ, ಎರಡೂ ಕಣ್ಣುಗಳ ನಡುವೆ ಮತ್ತು ಹಣೆಭಾಗದ ಕೊಂಚ ಅಡಿಯಲ್ಲಿ ಟೊಳ್ಳು ಭಾಗವೊಂದಿದೆ. ಇದೇ ಕುಹರ ಅಥವಾ ಸೈನಸೈಟಿಸ್ (Sinusitis disease) . ನಾವು ಉಸಿರಾಡುವುದು ಇದರ ಮೂಲಕವೇ. ಯಾವುದೇ ಒಂದು ಸೈನಸ್‌ನಲ್ಲಿ ಇನ್ಫೆಕ್ಷನ್ ಆದರೆ ಅದಕ್ಕೆ ಸೈನಸೈಟಿಸ್ ಎನ್ನುತ್ತಾರೆ.

ಇದು ಸಾಮನ್ಯವಾಗಿ ಶೀತದ ವಾತಾವರಣದಲ್ಲಿ ಅಗಲಿದ್ದು, ಚಳಿಗಾಲ ಹಾಗೂ ಮಳೆಗಾಲದ ಸಂದರ್ಭದಲ್ಲಿ ಸೈನಸ್ನಲ್ಲಿ ಇನ್ಫೆಕ್ಷನ್ ಆದರೆ ಅದು ಸೈನಸ್‌ನಲ್ಲಿ ಸೋಂಕು ಹರಡಿದೆ ಎಂದರ್ಥ

ಇದನ್ನೂ ಓದಿ: Papaya fruit | ಪೋಷಕಾಂಶಗಳಗಳಿಂದ ಸಮೃದ್ಧವಾಗಿರುವ ಪಪ್ಪಾಯಿ ಹಣ್ಣಿನಿಂದ ಆರೋಗ್ಯಕ್ಕೆ ಸಿಗುತ್ತೆ ನೂರಾರು ಪ್ರಯೋಜನ

Vijayaprabha Mobile App free

ತೀವ್ರವಾದ ಸೈನಸೈಟಿಸ್ ಖಾಯಿಲೆಗೆ (Sinusitis disease) ಕಾರಣಗಳು ಯಾವುವು?

Sinusitis disease

ತೀವ್ರವಾದ ಸೈನಸೈಟಿಸ್ ಉಂಟಾಗಲು ವೈರಸ್ ಸೋಂಕುಗಳು ಕಾರಣವಾಗುತ್ತವೆ. ಸೂಕ್ಷ್ಮಾಣುಗಳಿಂದ ಕೂಡಿದ ಬ್ಯಾಕ್ಟೀರಿಯಾಗಳು ಹಾಗೂ ನಾನಾ ರೀತಿಯ ವೈರಸ್‌ನಿಂದ ಆರೋಗ್ಯ ಹದಗೆಡುವುದೇ ಸಾಧಾರಣ ಶೀತವಾಗಿದ್ದು, ಇದು ಸೈನಸ್ ನಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಅಲರ್ಜಿಯ ಪ್ರತಿಕ್ರಿಯೆಗಳು ಮೂಗಿನ ಮಾರ್ಗಗಳು ಮತ್ತು ಸೈನಸ್‌ಗಳ ಊತವನ್ನು ಉಂಟುಮಾಡಿ ತೀವ್ರವಾದ ಸೈನಸೈಟಿಸ್‌ಗೆ ಕಾರಣವಾಗುತ್ತದೆ. ಮಾಲಿನ್ಯಕಾರಕಗಳು, ಹೊಗೆ ಮತ್ತು ಇತರ ಉದ್ರೇಕಕಾರಿಗಳಿಗೆ ಒಡ್ಡಿಕೊಳ್ಳುವುದರಿಂದ ಸಹ ಸೈನಸ್‌ಗಳ ಉರಿಯೂತಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Kidney Stone | ಕಿಡ್ನಿ ಸ್ಟೋನ್ ಉಂಟಾಗುವುದು ಹೇಗೆ..? ಕಿಡ್ನಿ ಸ್ಟೋನ್ ಸಮಸ್ಯೆಗೆ ಈ ನೀರು ಹೇಳಿ ಮಾಡಿಸಿದ ಮನೆಮದ್ದು..!

ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಮೂಲಕ ಸೈನಸ್ ಸೋಂಕು ಕಾಣಿಸಿಕೊಳ್ಳುತ್ತದೆ

ಸೈನಸ್ ಸೋಂಕು ತಗಲುವ ಮೊದಲು ಸಾಮಾನ್ಯ ಶೀತ ಕಾಣಿಸಿಕೊಳ್ಳುತ್ತದೆ. ನಂತರ ಟಿಶ್ಯೂಗಳು ಬೆಳೆದು ಪೂರ್ಣವಾಗಿ ಸೈನಸ್ ಸೋಂಕಾಗುತ್ತದೆ. ಶೀತದ ನಂತರವೂ ಸೈನಸ್ ಮುಂದುವರೆಯುತ್ತವೆ. ಬೇಡವಾದವುಗಳು ಮೂಗಿನ ಕೊಳವೆಯಲ್ಲಿ ಕುಳಿತು ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದು ಅಲರ್ಜಿಯಾಗಿ ಮೂಗಿನಲ್ಲಿ ಬ್ಯಾಕ್ಟೀರಿಯ ಉಂಟಾಗಿ ಫಂಗಸ್ ಬೆಳೆಯುತ್ತದೆ. ವೈರಸ್‌ನಿಂದ ಸೋಂಕು ಕಾಣಿಸಿಕೊಂಡರೆ ಅದು ಇನ್ನೊಬ್ಬರಿಗೆ ಹರಡುವುದಿಲ್ಲ. ಬದಲಾಗಿ ಶೀತ ಹರಡಬಹುದಾಗಿದ್ದು, ಶೀತ ತಗುಲಿದವರಿಗೆ ನಂತರದ ದಿನಗಳಲ್ಲಿ ಸೈನಸ್ ಸೋಂಕು ಎದುರಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Alcohol | ಮದ್ಯಪಾನಿಗಳೇ ಎಚ್ಚರ…ಮದ್ಯಪಾನ ಸೇವನೆಯಿಂದ ದೇಹದ ಈ ಭಾಗಗಳಿಗೆ ಹಾನಿ!

ಸೈನಸೈಟಿಸ್‌ನಿಂದ (Sinusitis disease) ಬಳಲುತ್ತಿರುವವರು ಯಾವ ಆಹಾರ ಸೇವಿಸಬೇಕು?

ದೀರ್ಘಕಾಲದ ಅಲರ್ಜಿಯಾಗಿರುವ ಸೈನಸೈಟಿಸ್ ಗೆ ಬೆಳಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಅರಿಶಿನ ಮತ್ತು ಕಾಳು ಮೆಣಸಿನ ಪುಡಿ ಬೆರೆಸಿ ಕುಡಿಯುವುದರಿಂದ ಪರಿಹಾರ ಸಿಗುತ್ತದೆ. ಒಂದು ಬಟ್ಟಲು ಚಿಕನ್ ಸೂಪ್ ಗೆ ಒಂದು ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ ಬೆರೆಸಿ ಕುಡಿದರೆ ಶೀತದಿಂದ ಉಂಟಾಗಿರುವ ಸಮಸ್ಯೆ ದೂರವಾಗುತ್ತದೆ. ಹಾಲನ್ನು ಬಿಸಿ ಮಾಡಿ ಅದಕ್ಕೆ ಚಿಟಿಕೆ ಅರಿಶಿನ ಹಾಕಿ ಕುಡಿಯಬೇಕು. ಕುದಿಯುವ ನೀರಿಗೆ  ಕಾಳು ಮೆಣಸು, ಲವಂಗ, ತುಳಸಿ ದಳ, ಶುಂಠಿ, ಟೀ ಪುಡಿ  ಹಾಕಿ ಗಿಡಮೂಲಿಕೆ ಚಹಾ ಕುಡಿಯಬೇಕು.

ಇದನ್ನೂ ಓದಿ: Iodine deficiency | ಅಯೋಡಿನ್ ಕೊರೆತೆಯನ್ನು ನೀಗಿಸಲು ಸೇವಿಸಬೇಕಾದ ಆಹಾರಗಳು

ಸೈನಸೈಟಿಸ್‌ ಸೋಂಕನ್ನು (Sinusitis disease) ಪರಿಹರಿಸಲು ಈ ಸಲಹೆಗಳನ್ನು ಅನುಸರಿಸಿ

ಸೈನಸೈಟಿಸ್‌ ಅಂದಾಜು 134 ಮಿಲಿಯನ್ ಭಾರತೀಯರ ಮೇಲೆ ಪರಿಣಾಮ ಬೀರುತ್ತದೆ. ಸೈನಸೈಟಿಸ್‌ ಅನ್ನು ಸಾಮಾನ್ಯವಾಗಿ ನೋವು ನಿವಾರಕ ಔಷಧಿಗಳು, ಮೂಗಿನ ಡಿಕಂಜೆಸ್ಟೆಂಟ್‌ಗಳು ಮತ್ತು ಮೂಗಿನ ಸಲೈನ್ ತೊಳೆಯುವಿಕೆಯೊಂದಿಗೆ ಪರಿಹರಿಸಬಹುದು. ಇನ್ನು ದೀರ್ಘಕಾಲದ ಸೈನುಸಿಟಿಸ್‌ಗೆ ಪ್ರತಿಜೀವಕಗಳ ಅಗತ್ಯವಿರಬಹುದು. ಸೈನಸೈಟಿಸ್‌ ಸೋಂಕನ್ನು ಪರಿಹರಿಸಲು ನೀಡಿರುವ ಸಲಹೆಗಳನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: Vistara Health

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.