Iodine deficiency | ಅಯೋಡಿನ್ ಕೊರೆತೆಯನ್ನು ನೀಗಿಸಲು ಸೇವಿಸಬೇಕಾದ ಆಹಾರಗಳು

Iodine deficiency : ಅಯೋಡಿನ್ ನಮ್ಮ ದೇಹದಲ್ಲಿ ಅನೇಕ ಪಾತ್ರಗಳನ್ನು ಹೊಂದಿರುವ ಪ್ರಮುಖ ಖನಿಜವಾಗಿದೆ. ಇದು ನೈಸರ್ಗಿಕವಾಗಿ ಮೊಟ್ಟೆ, ಸಮುದ್ರ ಆಹಾರ ಮತ್ತು ಮಾಂಸದಂತಹ ಆಹಾರಗಳಲ್ಲಿ ಕಂಡುಬರಲಿದ್ದು, ಇದು ಅಯೋಡಿಕರಿಸಿದ ಉಪ್ಪಿನಲ್ಲಿ ಕಂಡುಬರುತ್ತದೆ. ಅಯೋಡಿನ್…

Iodine deficiency

Iodine deficiency : ಅಯೋಡಿನ್ ನಮ್ಮ ದೇಹದಲ್ಲಿ ಅನೇಕ ಪಾತ್ರಗಳನ್ನು ಹೊಂದಿರುವ ಪ್ರಮುಖ ಖನಿಜವಾಗಿದೆ. ಇದು ನೈಸರ್ಗಿಕವಾಗಿ ಮೊಟ್ಟೆ, ಸಮುದ್ರ ಆಹಾರ ಮತ್ತು ಮಾಂಸದಂತಹ ಆಹಾರಗಳಲ್ಲಿ ಕಂಡುಬರಲಿದ್ದು, ಇದು ಅಯೋಡಿಕರಿಸಿದ ಉಪ್ಪಿನಲ್ಲಿ ಕಂಡುಬರುತ್ತದೆ.

ಅಯೋಡಿನ್ ಕೊರತೆಯು (odine Deficiency) ಥೈರಾಯ್ಡ್ ಕಾಯಿಲೆಗೆ ಸಾಮಾನ್ಯ ಕಾರಣವಾಗಿದೆ, ನಿರ್ದಿಷ್ಟವಾಗಿ ಹೈಪೋಥೈರಾಯ್ಡಿಸಮ್ (underactive thyroid). ಹೈಪೋಥೈರಾಯ್ಡಿಸಮ್ ತೀವ್ರ ಆಯಾಸ, ಶೀತದ ಭಾವನೆ, ತೂಕ ಹೆಚ್ಚಾಗುವುದು ಸೇರಿದಂತೆ ರೋಗಲಕ್ಷಣಗಳನ್ನು ಉಂಟುಮಾಡಬಹುದು.

Iodine deficiency

Vijayaprabha Mobile App free

Iodine deficiency : ದೇಹದಲ್ಲಿ ಅಯೋಡಿನ್ ಕೊರತೆಯ ಲಕ್ಷಣಗಳು

  • ಅತಿಯಾದ ನಿದ್ರೆ, ಚಡಪಡಿಕೆ.
  • ಥೈರಾಯ್ಡ್ ಗ್ರಂಥಿಯ ಹಿಗ್ಗುವಿಕೆ.
  • ಮಲಗಿರುವಾಗ ಉಸಿರಾಟದ ತೊಂದರೆ.
  • ಅತಿಯಾದ ಶೀತ, ಗಂಟಲು ನೋವು.
  • ತೂಕ ಹೆಚ್ಚಾಗುವಿಕೆ, ದಣಿವು, ಮರೆವು.
  • ಹೃದಯ ಬಡಿತ ನಿಧಾನವಾಗುವುದು.
  • ಒಣ ಚರ್ಮ ಮತ್ತು ಕೂದಲು ಉದುರುವಿಕೆ

ಇದನ್ನೂ ಓದಿ: Sugar consumption | ಸಕ್ಕರೆ ಸೇವನೆಯಿಂದ ದೇಹದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗೊತ್ತಾ? ಇಲ್ಲಿದೆ ನೋಡಿ

Iodine deficiency : ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆಯಾದರೆ ಏನಾಗುತ್ತದೆ?

  • ಕೆಲವರಿಗೆ ಗರ್ಭಪಾತವಾಗುತ್ತದೆ
  • ಅಂಗವಿಕಲ ಮಗು ಜನನ
  • ಮೆಳ್ಳೆಗಣ್ಣು, ಕಿವುಡುತನ
  • ಮಗುವಿನ ಬೆಳವಣಿಗೆ ನಿಧಾನ
  • ನವಜಾತ ಶಿಶುವಿನಲ್ಲಿ ಗಳಗಂಡ
  • ಮಾನಸಿಕ ಬೆಳವಣಿಗೆ ಪರಿಣಾಮ

Iodine deficiency : ಅಯೋಡಿನ್ ಕೊರೆತೆಯನ್ನು ನೀಗಿಸಲು ಸೇವಿಸಬೇಕಾದ ಆಹಾರಗಳು

  1. ಮೊಟ್ಟೆ, ಮಾಂಸ
  2. ಸಮುದ್ರ ಆಹಾರ
  3. ಡೈರಿ ಉತ್ಪನ್ನಗಳು
  4. ಹಣ್ಣುಗಳು
  5. ಒಣದ್ರಾಕ್ಷಿ
  6. ಕಡಲೆಕಾಳು
  7. ತರಕಾರಿಗಳು

ಇದನ್ನೂ ಓದಿ: Sapota Fruit | ದಿನಕ್ಕೊಂದು ಸಪೋಟಾ ತಪ್ಪದೆ ತಿನ್ನಬೇಕು. ಯಾಕೆ ಗೊತ್ತಾ?

1. ಮೊಟ್ಟೆ, ಮಾಂಸ

ಮೊಟ್ಟೆಯಲ್ಲಿ ಅಯೋಡಿನ್ ಉತ್ತಮ ಪ್ರಮಾಣದಲ್ಲಿ ಕ೦ಡು ಬರುತ್ತದೆ. ಅಯೋಡಿನ್‌ ಸಮಸ್ಯೆ ಇರುವವರು ದಿನಕ್ಕೊ೦ದು ಬೇಯಿಸಿದ ಮೊಟ್ಟೆ ತಿ೦ದರೆ ಒಳ್ಳೆಯದು. ಜೊತೆಗೆ ಕೋಳಿ, ಕುರಿ ಮು೦ತಾದ ಪ್ರಾಣಿಗಳ ಮಾಂಸವನ್ನು ಕೂಡ ಮಿತವಾಗಿ ಸೇವಿಸುವುದು ಉತ್ತಮ.

2. ಸಮುದ್ರ ಆಹಾರ

ಸಮುದ್ರ ಆಹಾರಗಳಾದ ಟ್ಯೂನಾ ಮೀನು, ಸಿಗಡಿಯಂತಹ ಆಹಾರಗಳಲ್ಲಿ ಅಧಿಕ ಪ್ರಮಾಣದ ಅಯೋಡಿನ್ ಅಂಶ ಕಂಡು ಬರುತ್ತದೆ. ಇದರಿಂದ ಇವುಗಳನ್ನು ಕೂಡ ಮಿತವಾಗಿ ಸೇವನೆ ಮಾಡಿದರೆ, ದೇಹದ ಅಯೋಡಿನ್ ಕೊರತೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

3. ಡೈರಿ ಉತ್ಪನ್ನಗಳು

ಹಾಲು, ಮೊಸರು ಹಾಗೂ ಚೀಸ್‌ನಂತಹ ಡೈರಿ ಉತ್ಪನ್ನಗಳಲ್ಲಿ ಅಯೋಡಿನ್ ಹೇರಳವಾಗಿ ಕಂಡು ಬರುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಜೊತೆಗೆ ಅಯೋಡಿನ್ ಕೂಡ ಅಧಿಕ ಪ್ರಮಾಣದಲ್ಲಿ ಕ೦ಡು ಬರುತ್ತದೆ.

4. ಹಣ್ಣುಗಳು

ಖರ್ಜೂರ ಹಣ್ಣಿನಲ್ಲಿ ಅಯೋಡಿನ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ. ಇವು ದೇಹದಲ್ಲಿ ಅಯೋಡಿನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಅಲ್ಲದೆ ಹುಳಿಮಿಶ್ರಿತ ಸಿಹಿ ಮಿಶ್ರಿತವಾಗಿರುವ ಸ್ಟ್ರಾಬೆರಿ ಹಣ್ಣಿನಲ್ಲಿ ಕೂಡ ಆಂಟಿ ಆಕ್ಸಿಡೆಂಟುಗಳ ಜೊತೆಗೆ ಅಯೋಡಿನ್ ಅಂಶ ಹೇರಳವಾಗಿ ಕಂಡು ಬರುತ್ತದೆ.

5. ಒಣದ್ರಾಕ್ಷಿ

ಒಣದ್ರಾಕ್ಷಿಯು ಸಸ್ಯಾಹಾರಿಗಳಿಗೆ ಅಯೋಡಿನ್‌ನ ಸಮೃದ್ಧ ಮೂಲವಾಗಿದೆ. ಐದು ಒಣದ್ರಾಕ್ಷಿಗಳನ್ನು ದಿನವೂ ಸೇವಿಸುವುದು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಜೊತೆಗೆ, ಒಣದ್ರಾಕ್ಷಿಗಳು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: Kidney Beans | ಕಿಡ್ನಿ ಬೀನ್ಸ್ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

6. ಕಡಲೆಕಾಳು

ಕಡಲೆಕಾಳುಗಳು, ರೋಗನಿರೋಧಕಗಳು ಮತ್ತು ಖನಿಜಗಳ ಮೂಲವಾಗಿವೆ. ಕಡಿಮೆ ಕ್ಯಾಲೋರಿಗಳು, ತೂಕವನ್ನು ಕಾಪಾಡಿಕೊಳ್ಳಲು ಅಥವಾ ಕಳೆದುಕೊಳ್ಳಲು ಯೋಜಿಸುವವರಿಗೆ ಕಡಲೆಕಾಳು ಅತ್ಯುತ್ತಮ ಆಯ್ಕೆಯಾಗಿದೆ.

7. ತರಕಾರಿಗಳು

ಎಲ್ಲಾ ತರಕಾರಿಗಳಲ್ಲಿ ಹಲವಾರು ವಿಟಮಿನ್‌ಗಳು ಮತ್ತು ಖನಿಜಗಳು ಇವೆ. ಇವು ಆರೋಗ್ಯವನ್ನು ಉತ್ತೇಜಿಸುತ್ತವೆ ಮತ್ತು ಅಯೋಡಿನ್ ಅನ್ನು ಒದಗಿಸುತ್ತವೆ. ಪಾಲಕ್ ಸೊಪ್ಪಿನಲ್ಲಿ ಅಯೋಡಿನ್ ಸೇರಿದಂತೆ ವಿವಿಧ ಬಗೆಯ ವಿಟಮಿನ್ಸ್‌ಗಳು ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳು ಸಮೃದ್ಧವಾಗಿ ಕಂಡು ಬರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.