Papaya fruit | ಪೋಷಕಾಂಶಗಳಗಳಿಂದ ಸಮೃದ್ಧವಾಗಿರುವ ಪಪ್ಪಾಯಿ ಹಣ್ಣಿನಿಂದ ಆರೋಗ್ಯಕ್ಕೆ ಸಿಗುತ್ತೆ ನೂರಾರು ಪ್ರಯೋಜನ

Papaya fruit  : ಆರೋಗ್ಯವಾಗಿರಲು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿರುವ ಆಹಾರಗಳನ್ನು ಪ್ರತಿದಿನ ಸೇವನೆ ಮಾಡುವುದು ಅಗತ್ಯವಾಗಿದ್ದು, ಮುಖ್ಯವಾಗಿ ಹಣ್ಣು, ತರಕಾರಿಗಳನ್ನು ಸೇವನೆ ಮಾಡಿದರೆ ದೇಹಾರೋಗ್ಯವು ಚೆನ್ನಾಗಿ ಇರುತ್ತದೆ. ಸಾಕಷ್ಟು ವಿಟಮಿನ್ ಹಾಗೂ ಪೋಷಕಾಂಶಗಳನ್ನು ಹೊಂದಿರುವ…

Health benefits of papaya fruit

Papaya fruit  : ಆರೋಗ್ಯವಾಗಿರಲು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿರುವ ಆಹಾರಗಳನ್ನು ಪ್ರತಿದಿನ ಸೇವನೆ ಮಾಡುವುದು ಅಗತ್ಯವಾಗಿದ್ದು, ಮುಖ್ಯವಾಗಿ ಹಣ್ಣು, ತರಕಾರಿಗಳನ್ನು ಸೇವನೆ ಮಾಡಿದರೆ ದೇಹಾರೋಗ್ಯವು ಚೆನ್ನಾಗಿ ಇರುತ್ತದೆ.

ಸಾಕಷ್ಟು ವಿಟಮಿನ್ ಹಾಗೂ ಪೋಷಕಾಂಶಗಳನ್ನು ಹೊಂದಿರುವ ಪಪ್ಪಾಯಿ ಹಣ್ಣು (Papaya fruit) ವರ್ಷವಿಡಿ ಸಿಗುವ ಹಣ್ಣಾಗಿದ್ದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ನಿತ್ಯವೂ ಸೇವನೆ ಮಾಡಿದರೆ ಹಲವಾರು ಬಗೆಯ ಅನಾರೋಗ್ಯಗಳನ್ನು ದೂರವಿಡಬಹುದಾಗಿದ್ದು, ಹಣ್ಣಿನ ಜೊತೆಗೆ ಅದರ ಎಲೆ ಮತ್ತು ಬೀಜಗಳು ಅನೇಕ ರೋಗಗಳ ವಿರುದ್ಧ ಹೋರಾಟ ಮಾಡುತ್ತವೆ.

ಇದನ್ನೂ ಓದಿ: Kidney Stone | ಕಿಡ್ನಿ ಸ್ಟೋನ್ ಉಂಟಾಗುವುದು ಹೇಗೆ..? ಕಿಡ್ನಿ ಸ್ಟೋನ್ ಸಮಸ್ಯೆಗೆ ಈ ನೀರು ಹೇಳಿ ಮಾಡಿಸಿದ ಮನೆಮದ್ದು..!

Vijayaprabha Mobile App free

ಈ ಎಲ್ಲಾ ಸಮಸ್ಯೆಗೆ ಪಪ್ಪಾಯಿ ಹಣ್ಣು ಪರಿಹಾರ ಒದಗಿಸುತ್ತದೆ (Papaya fruit is the solution for all problems) 

Papaya fruit

ಪಪ್ಪಾಯಿ ಹಣ್ಣು ಕರುಳಿನ ಹುಳುಗಳನ್ನು ನಾಶಪಡಿಸುವುದಕ್ಕೆ ಪರಿಣಾಮಕಾರಿಯಾಗಿದ್ದು, ಇದರಿಂದಾಗಿ ಅವುಗಳಿಗೆ ಸಂಬಂಧಿಸಿದ ಸೋಂಕುಗಳು ಮತ್ತು ತೊಡಕುಗಳನ್ನು ತಪ್ಪಿಸುತ್ತದೆ.

ಪಪ್ಪಾಯಿ ಬೇರುಗಳ ಪೇಸ್ಟ್ ಅನ್ನು ಹಲ್ಲುಗಳು ಮತ್ತು ಒಸಡುಗಳು ಮೇಲೆ ಉಜ್ಜುವುದರಿಂದ ಹಲ್ಲಿನ ನೋವವನ್ನು ಶಮನ ಮಾಡಬಹುದಾಗಿದ್ದು, ಇದನ್ನು ಚರ್ಮದ ಮೇಲಿನ ಮೊಡವೆಗಳ ಮೇಲೆ ಪರಿಣಾಮ ಬೀರಲು ಬಳಸಲಾಗುತ್ತದೆ. ಪಪ್ಪಾಯಿಯ ತಿರುಳಿನ ಭಾಗವನ್ನು ಚರ್ಮದ ಮೊಡವೆಯನ್ನು ಗುಣಪಡಿಸಲು ಮಾಸ್ಕ್‌‌ ಆಗಿ ಬಳಸಬಹುದಾಗಿದ್ದು, ಇದು ಮ್ಯಾಕ್ಯುಲರ್ ಡಿಜೆನೇಶನ್ ಅನ್ನು ತಡೆಗಟ್ಟುತ್ತದೆ

ಇದನ್ನೂ ಓದಿ: Alcohol | ಮದ್ಯಪಾನಿಗಳೇ ಎಚ್ಚರ…ಮದ್ಯಪಾನ ಸೇವನೆಯಿಂದ ದೇಹದ ಈ ಭಾಗಗಳಿಗೆ ಹಾನಿ!

ಚರ್ಮವು ಕಾಂತಿಯುತವಾಗಿ ಹೊಳೆಯುವಲ್ಲಿ ಪಪ್ಪಾಯಿ ಪ್ರಮುಖ ಪಾತ್ರವಹಿಸುತ್ತದೆ (Papaya fruit is beneficial for glowing skin)

ಪಪ್ಪಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್, ಪ್ರಮುಖ ವಿಟಮಿನ್ ಗಳು ಮತ್ತು ಖನಿಜಾಂಶಗಳು ಸಮೃದ್ಧವಾಗಿದ್ದು, ಇದೆಲ್ಲವೂ ಚರ್ಮವು ಕಾಂತಿಯುತವಾಗಿ ಹೊಳೆಯುವಂತೆ ಮಾಡುವುದಲ್ಲದೆ, ಚರ್ಮಕ್ಕೆ ಹೊಸ ಚೈತನ್ಯವನ್ನು ನೀಡುವುದರಿಂದ ಹಲವಾರು ಸೌಂದರ್ಯವರ್ಧಕಗಳಲ್ಲಿ ಇದನ್ನು ಹೇರಳವಾಗಿ ಬಳಸುತ್ತಾರೆ.

ಇದು ಸತ್ತ ಜೀವಕೋಶಗಳನ್ನು ನಾಶಪಡಿಸಿ ಚರ್ಮವನ್ನು ಶುದ್ಧೀಕರಿಸಲಿದ್ದು, ಇದನ್ನು ಪ್ರತಿದಿನ ಬಳಸುವುದರಿಂದ ಸನ್‌ಬರ್ನ್‌ನಿಂದ ರಕ್ಷಣೆ ದೊರೆಯುತ್ತದೆ ಮತ್ತು ಕಿರಿಕಿರಿ ಚರ್ಮದಿಂದ ನಿಮ್ಮನ್ನು ದೂರವಿಡುತ್ತದೆ.

ಇದನ್ನೂ ಓದಿ: Iodine deficiency | ಅಯೋಡಿನ್ ಕೊರೆತೆಯನ್ನು ನೀಗಿಸಲು ಸೇವಿಸಬೇಕಾದ ಆಹಾರಗಳು

ಪಪ್ಪಾಯಿ ಹಣ್ಣಿನ ಬೀಜದಿಂದ ಆರೋಗ್ಯಕ್ಕೆ ಸಿಗುತ್ತೆ ನೂರಾರು ಪ್ರಯೋಜನ

ಪಪ್ಪಾಯಿ ಹಣ್ಣಷ್ಟೇ ಅಲ್ಲ ಬೀಜದಿಂದಲೂ ಆರೋಗ್ಯಕ್ಕೆ ಹಲವಾರು ಪ್ರಯೋಜನ ಸಿಗುತ್ತದೆ. ಪಪ್ಪಾಯಿ ಬೀಜಗಳಲ್ಲಿರುವ ನಾರಿನಾಂಶ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವುದಲ್ಲದೆ, ಇದರಲ್ಲಿರುವ ಕ್ಯಾರೋಟಿನ್, ದೇಹದಲ್ಲಿನ ಈಸ್ಟ್ರೊಜೆನ್ ಹಾರ್ಮೋನ್ ಅನ್ನು ನಿಯಂತ್ರಿಸಿ ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ.

ಪಪ್ಪಾಯಿ ಬೀಜದಲ್ಲಿರುವ ಕಾರ್ಪೆನ್ ಎಂಬ ಆಲ್ಕಲಾಯ್ಡ್ ಕರುಳಿನ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ.

ಇದನ್ನೂ ಓದಿ: Sugar consumption | ಸಕ್ಕರೆ ಸೇವನೆಯಿಂದ ದೇಹದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಗೊತ್ತಾ? ಇಲ್ಲಿದೆ ನೋಡಿ

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸಿದರೆ ಅಡ್ಡಪರಿಣಾಮ ಉಂಟಾಗುತ್ತದೆಯೇ?

ರಾತ್ರಿ ಹೊರತುಪಡಿಸಿ ಯಾವುದೇ ಸಮಯದಲ್ಲಿ ಪಪ್ಪಾಯಿ ಹಣ್ಣುಗಳನ್ನು ತಿನ್ನಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಉಪಹಾರದಲ್ಲಿ ಪಪ್ಪಾಯಿ ಹಣ್ಣನ್ನು ತಿನ್ನುವುದು ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆಯಾದರೂ, ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣನ್ನು ಅತಿಯಾಗಿ ಸೇವಿಸಬಾರದು. ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂದು ವಿಡಿಯೋದಲ್ಲಿ ನೋಡಬಹುದು.
ಕೃಪೆ: Janashakti News Kannada

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.