Fruits and vegetables | ಎಲೆಗಳ ಸೊಪ್ಪುಗಳು, ಧಾನ್ಯಗಳು ಮತ್ತು ಕೊಬ್ಬಿನ ಮೀನುಗಳು ಸೇರಿದಂತೆ ಕೆಲವು ಆಹಾರಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ನಿಮ್ಮ ಹೃದಯಾಘಾತದ (heart attack) ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
Fruits and vegetables : ಹೃದಯಾಘಾತದಿಂದ ದೂರ ಇರಿಸಬಲ್ಲ ಹಣ್ಣು ಮತ್ತು ತರಕಾರಿಗಳು
- ಸ್ಟ್ರಾಬೆರಿ
- ಟೊಮೊಟೊ
- ಸೇಬು
- ಬೀಗ್ರೂಟ್
- ಕೆಂಪು ಕ್ಯಾಪ್ತಿಕಂ
ಇದನ್ನೂ ಓದಿ: Yogurt | ರಾತ್ರಿ ಮೊಸರು ಸೇವಿಸಿದರೆ ಇವೆ ಅನೇಕ ಆರೋಗ್ಯ ಸಮಸ್ಯೆಗಳು
1. ಸ್ಟ್ರಾಬೆರಿ
ಸ್ಟ್ರಾಬೆರಿಗಳು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಲೈಕೋಪೀನ್ ಮತ್ತು ಆಂಟಿಆಕ್ಸಿಡೆಂಟ್ ಗಳನ್ನು ಒಳಗೊಂಡಿರುತ್ತವೆ. ಅಲ್ಲದೆ ಇದರಲ್ಲಿ ಫೈಬರ್ ಮತ್ತು ವಿಟಮಿನ್ ಸಿ ಕೂಡ ಇದೆ, ಇದು ಬಿಪಿಯನ್ನು ನಿಯ೦ತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆಯಾಗಿಸುತ್ತದೆ.
2. ಟೊಮೊಟೊ
ಟೊಮೊಟೊನಲ್ಲಿ ಲೈಕೋಪೀನ್ ಎಂಬ ಉತ್ಕರ್ಷಣ ನಿರೋಧಕವಿದೆ. ಈ ಉತ್ಕರ್ಷಣ ನಿರೋಧಕವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಿ ರಕ್ತನಾಳಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
3. ಸೇಬು
ಸೇಬಿನಲ್ಲಿ ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿವೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ದಿನಕ್ಕೆ ಒ೦ದು ಸೇಬು ತಿನ್ನುವುದರ ಮೂಲಕ ಹೃದಯ ಸ೦ಬ೦ಧಿ ಸಮಸ್ಯೆಗಳಿಂದ ದೂರ ಇರಬಹುದು.
ಇದನ್ನೂ ಓದಿ: Vomiting while travelling | ಪ್ರಯಾಣ ಮಾಡುವಾಗ ಪದೇ-ಪದೇ ವಾಂತಿ ಆಗುತ್ತಾ? ಇಲ್ಲಿದೆ ಸುಲಭ ಪರಿಹಾರ
4. ಬೀಗ್ರೂಟ್
ಬೀಗ್ರೂಟ್ನಲ್ಲಿರುವ ನೈಟ್ರೇಟ್ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಬಿಪಿಯನ್ನು ನಿಯ೦ತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ, ಇದು ಫೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.
5. ಕೆಂಪು ಕ್ಯಾಪ್ತಿಕಂ
ಕೆಂಪು ಕ್ಯಾಪ್ತಿಕಂನಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫೈಟೊಕೆಮಿಕಲ್‌ಗಳು ಸಮೃದ್ಧವಾಗಿವೆ. ಇದು ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ವಿಟಮಿನ್ ಸಿ ಅಧಿಕವಾಗಿರುವುದರಿಂದ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: Ajwain water | ಓಮದ ನೀರು ಸೇವಿಸಿದರೆ ಆಗುವ ಆರೋಗ್ಯ ಲಾಭಗಳು