Urinary Tract Infection : ಚಳಿಗಾಲದಲ್ಲಿ ದೇಹಗಳು ತಂಪಾದ ತಾಪಮಾನಕ್ಕೆ ಹೊಂದಿಕೊಳ್ಳುವುದರಿಂದ, ಇದು ಮೂತ್ರದ ಸೋಂಕುಗಳಿಗೆ (Urinary Tract Infection) ಕಾರಣವಾಗಬಲ್ಲದು.
ವಿಶೇಷವಾಗಿ ಮೂತ್ರನಾಳದ ಸೋಂಕು ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲೆ ಪುರುಷರಿಗಿಂತ ಹೆಚ್ಚು ಪರಿಣಾಮ ಬೀರಲಿದ್ದು, ಚಳಿಗಾಲದಲ್ಲಿ ಕಡಿಮೆ ಬೆವರುವುದರಿಂದ ದೇಹದಲ್ಲಿ ಹೆಚ್ಚು ಮೂತ್ರ ಸಂಗ್ರಹವಾಗುತ್ತದೆ. ಅದಕ್ಕಾಗಿಯೇ ಹೆಚ್ಚು ಮೂತ್ರ ವಿಸರ್ಜನೆ ಮಾಡಬೇಕು. ಯಾವುದೇ ಕಾರಣಕ್ಕೂ ಮೂತ್ರವನ್ನು ತಡೆಹಿಡಿಯಬಾರದು ಏಕೆಂದರೆ ಮೂತ್ರವನ್ನು ತಡೆಹಿಡಿಯುವುದರಿಂದ ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗಬಹುದು.
ಇದನ್ನೂ ಓದಿ: Fenugreek | ತಾಯಿಯ ಎದೆಹಾಲು ಹೆಚ್ಚಿಸುವ ಮೆಂತ್ಯ ಸೊಪ್ಪಿನ ಆರೋಗ್ಯ ಪ್ರಯೋಜನಗಳು
ಮಹಿಳೆಯರಲ್ಲಿ ಪದೇ ಪದೇ ಮೂತ್ರನಾಳ ಸೋಂಕು ಉಂಟಾಗಲು ಕಾರಣವೇನು? (Causes for Urinary Tract Infection)
ಸಂಶೋಧನೆಯ ಪ್ರಕಾರ, ಸುಮಾರು 50 ಪ್ರತಿಶತ ಮಹಿಳೆಯರು ತಮ್ಮ ಜೀವನದಲ್ಲಿ ಯಾವುದಾದರೂ ಒಂದು ಹಂತದಲ್ಲಿ ಮೂತ್ರನಾಳದ ಸೋಂಕಿಗೆ ಗುರಿಯಾಗಲಿದ್ದು, ಇ-ಕೊಲಿ ಬ್ಯಾಕ್ಟೀರಿಯಾಗಳು ಶೌಚಾಲಯದ ಮೂಲಕ ಮೂತ್ರಕೋಶ ತಲುಪಿದಾಗ ಈ ರೀತಿಯ ಸೋಂಕು ಉಂಟಾಗುತ್ತದೆ. ಪುರುಷರಿಗಿಂತ ಮಹಿಳೆಯರು ಯುಟಿಐಗೆ ಹೆಚ್ಚು ತುತ್ತಾಗುತ್ತಾರೆ.
ಕಡಿಮೆ ನೀರು ಸೇವನೆ, ಅನೇಕ ಬಾರಿ ಸ್ನಾನ ಮಾಡುವುದರಿಂದ ಈ ಸೋಂಕು ತಗ್ಗುತ್ತದೆ. ಕೆಲವು ಸಂದರ್ಭಗಳಲ್ಲಿ ಮೂತ್ರ ತಡೆದುಕೊಳ್ಳುವುದು, ಸಾರ್ವಜನಿಕ ಶೌಚಾಲಯವನ್ನು ಬಳಸುವುದರಿಂದ ಇದು ಸಂಭವಿಸುತ್ತದೆ.
ಇದನ್ನೂ ಓದಿ: Stroke | ಪಾರ್ಶ್ವವಾಯು ಬರದಂತೆ ತಡೆಯಲು ಟಾಪ್ 5 ಸಲಹೆಗಳು
ಮೂತ್ರನಾಳದ ಸೋಂಕಿನ ಸಮಸ್ಯೆಗೆ ಅತ್ಯುತ್ತಮ ಮನೆಮದ್ದುಗಳಿವು (Remedies for Urinary Tract Infection)
ಮೂತ್ರದ ಸೋಂಕು ಅಥವಾ ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್ ಮಹಿಳೆಯರನ್ನು ಹೆಚ್ಚಾಗಿ ಬಾಧಿಸುವ ಸರ್ವಸಾಮಾನ್ಯವಾದ ಆರೋಗ್ಯ ಸಮಸ್ಯೆ. ಎಳನೀರಿನ ಸೇವನೆಯು ಮೂತ್ರನಾಳದ ಸೋಂಕು ನಿವಾರಣೆಗೆ ಅತ್ಯುತ್ತಮ ಮನೆಮದ್ದು. ಜೊತೆಗೆ ಒಂದು ಲೋಟ ನೀರಿಗೆ ಎರಡು ಚಮಚ ಕೊತ್ತಂಬರಿ ಬೀಜ ಹಾಕಿ ಕುದಿಸಿ ಸೋಸಿ ಕುಡಿಯಿರಿ. ಈ ಪಾನೀಯ ಸೇವಿಸುವುದರಿಂದ ಯುಟಿಐ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಮೂತ್ರನಾಳದ ಸೋಂಕಿನ ಸಂದರ್ಭದಲ್ಲಿ ದಿನಕ್ಕೆ ಒಂದು ಸಲ ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಸೋಂಕು ನಿವಾರಿಸಬಹುದು.
ಇದನ್ನೂ ಓದಿ: Sinusitis disease | ಏನಿದು ಸೈನಸೈಟಿಸ್ ಖಾಯಿಲೆ? ಹೇಗೆ ಉಂಟಾಗುತ್ತದೆ? ತೀವ್ರವಾದ ಸೈನಸೈಟಿಸ್ ಖಾಯಿಲೆಗೆ ಕಾರಣಗಳು ಯಾವುವು?
ಮಹಿಳೆಯರನ್ನು ಕಾಡುವ ಮೂತ್ರನಾಳದ ಸೋಂಕಿಗೆ ಪರಿಹಾರವೇನು? ಇಲ್ಲಿದೆ ಮಾಹಿತಿ
ಮೂತ್ರಕೋಶದ ಸೋಂಕಿನ (Urinary Tract Infection) ಸಮಸ್ಯೆಯು ಮಹಿಳೆಯರನ್ನು ಹೆಚ್ಚಾಗಿ ಕಾಡಲಿದ್ದು, ಮೂರರಲ್ಲಿ ಒಬ್ಬರು ಮಹಿಳೆಯು ಇಂತಹ ಸೋಂಕಿಗೆ ಒಳಗಾಗುವ ಸಾಧ್ಯತೆಯಿದ್ದು, ಮಹಿಳೆಯರು ಚಿಕ್ಕ ಮೂತ್ರನಾಳವನ್ನು ಹೊಂದಿದ್ದು ಸೋಂಕುಗಳು ಮೂತ್ರಕೋಶವನ್ನು ಪ್ರವೇಶಿಸಲು ಸುಲಭವಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ಮೂತ್ರಪಿಂಡದ ಹಾನಿ ಸೇರಿದಂತೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದಾಗಿದ್ದು, ಮೂತ್ರಕೋಶದ ಸೋಂಕಿಗೆ ಪರಿಹಾರವೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ವಿಡಿಯೋ ಕೃಪೆ – ವಿಜಯ ಕರ್ನಾಟಕ