Kiccha Sudeep Remuneration : ಕನ್ನಡ ‘ಬಿಗ್ ಬಾಸ್’ಕಾರ್ಯಕ್ರಮದ ನಿರೂಪಕನ ಸ್ಥಾನದಿಂದ ಕೆಳಗೆ ಇಳಿಯುವುದಾಗಿ ಈಗಾಗಲೇ ಕಿಚ್ಚ ಸುದೀಪ್ ವಿದಾಯ ಘೋಷಿಸಿದ್ದಾರೆ. ಆದರೆ, ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಗೆ ಸುದೀಪ್ ಪಡೆಯುತ್ತಿದ್ದ ಸಂಭಾವನೆ ಎಷ್ಟು? ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
2015ರಲ್ಲಿ ಸುದೀಪ್ ಅವರು ಕಲರ್ಸ್ ಕನ್ನಡದ ಜತೆ ಮೊದಲ ಬಾರಿಗೆ ಬಿಗ್ ಬಾಸ್ ನಿರೂಪಣೆಯ ಅಗ್ರಿಮೆಂಟ್‌ಗೆ ಸಹಿ ಹಾಕಿದ್ದರು. ಮೊದಲು ಇದು 5 ವರ್ಷದ ಒಪ್ಪಂದ ಆಗಿತ್ತು. ಆ ಸಮಯದಲ್ಲಿ 20 ಕೋಟಿ ರೂ. ಒಪ್ಪಂದಕ್ಕೆ ಸುದೀಪ್ ಸಹಿ ಹಾಕಿದ್ದರು. ಅಂದರೆ, ಪ್ರತಿ ಸೀಸನ್ಗೆ ಅವರು ನಾಲ್ಕು ಕೋಟಿ ಪಡೆದಂತೆ ಆಗುತ್ತದೆ.
ಇದನ್ನೂ ಓದಿ: ಸುದೀಪ್ ಬಿಗ್ ಬಾಸ್ ತೊರೆಯಲು ಕಾರಣವೇನು ಗೊತ್ತೇ..? ಅಸಲಿ ವಿಚಾರ ಇಂದು ಬಹಿರಂಗ..!
ಮತ್ತೆ ಸುದೀಪ್ ಅವರ ವ್ಯಾಲ್ಯೂ ಬೆಳೆದಂತೆ ಅವರ ಸಂಭಾವನೆಯೂ ಏರಿಕೆಯಾಗುತ್ತಾ ಬಂತು. ಸದ್ಯ 11ನೇ ಸೀಸನ್ ನಿರೂಪಣೆ ಮಾಡಲು ಕಿಚ್ಚ 8 ಕೋಟಿ ರೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.