Bhagyalakshmi yojana : ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿತ್ತು.
ರಾಜ್ಯದಲ್ಲಿ ಗಂಡು ಮತ್ತು ಹೆಣ್ಣು ಮಗುವಿನ ಜನನದ ನಡುವಿನ ತಾರತಮ್ಯವನ್ನು ಕಡಿಮೆ ಮಾಡುವುದು ಹಾಗು ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಭಾಗ್ಯಲಕ್ಷ್ಮೀ ಯೋಜನೆಯನ್ನು ಪ್ರಾರಂಭಿಸಲಾಯಿತು.
ಇದನ್ನೂ ಓದಿ: Bhagyalakshmi yojana : ಫಲಾನುಭವಿಗಳಿಗೆ ಸಿಗುವ ಮೊತ್ತ ಎಷ್ಟು? ಭಾಗ್ಯಲಕ್ಷ್ಮೀ ಬಾಂಡ್ ಹಣ ಡ್ರಾ ಮಾಡಲು ನಿಯಮಗಳೇನು?
Bhagyalakshmi yojana : ಹೆಣ್ಣುಮಗುವಿನ ಜನನಕ್ಕೆ ಪ್ರೋತ್ಸಾಹ
ಭಾಗ್ಯಲಕ್ಷ್ಮಿ ಯೋಜನೆಯು ಆರ್ಥಿಕವಾಗಿ ಹಿ೦ದುಳಿದ ಕುಟುಂಬಗಳಲ್ಲಿ ಹೆಣ್ಣುಮಕ್ಕಳ ಜನನವನ್ನು ಪ್ರೋತ್ಸಾಹಿಸುತ್ತದೆ. ಜೊತೆಗೆ ಹೆಣ್ಣು ಮಕ್ಕಳ ರಕ್ಷಣೆಗಾಗಿ ಮತ್ತು ಅವರ ಕುಟುಂಬದ ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
Bhagyalakshmi yojana : ವಿದ್ಯಾರ್ಥಿವೇತನ
ಭಾಗ್ಯಲಕ್ಷ್ಮಿ ಯೋಜನೆಯ ಮೂಲಕ ಸರ್ಕಾರವು ಬಿಪಿಎಲ್ ವಿದ್ಯಾರ್ಥಿನಿಯರಿಗೆ 10ನೇ ತರಗತಿಯವರೆಗೆ ವಾರ್ಷಿಕ 300ರೂ. ರಿಂದ 1000 ರೂ.ಗಳ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಇದರಿಂದ ಶಾಲಾ, ಕಾಲೇಜು ಶುಲ್ಕ, ಮತ್ತು ಶೈಕ್ಷಣಿಕ ಆವಶ್ಯಕತೆಗಳಿಗೆ ಆರ್ಥಿಕ ನೆರವು ಸಿಕ್ಕಂತಾಗುತ್ತದೆ.
ಆರ್ಥಿಕ ಸಹಾಯ
ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿ ಹೆಣ್ಣು ಮಗುವಿಗೆ ಯಾವುದೇ ಅಪಘಾತ ಸಂಭವಿಸಿದಲ್ಲಿ, ಕರ್ನಾಟಕ ರಾಜ್ಯ ಅಧಿಕಾರಿಗಳು ಅವಳ ಚಿಕಿತ್ಸೆಗಾಗಿ 1 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸುತ್ತಾರೆ.
ಇದನ್ನೂ ಓದಿ: Bhagyalakshmi yojana : ಸುಲಭಕ್ಕೆ ಸಿಗಲ್ಲ ‘ಭಾಗ್ಯಲಕ್ಷ್ಮೀ’ ಹಣ; ‘ಭಾಗ್ಯಲಕ್ಷ್ಮೀ’ ಹಣ ಪಡೆಯಲು ಷರತ್ತುಗಳೇನು?
ಲಿಂಗ ಸಮಾನತೆ
ಭಾಗ್ಯಲಕ್ಷ್ಮಿ ಯೋಜನೆಯು ಹೆಣ್ಣು ಮಕ್ಕಳ ಜನನ ಮತ್ತು ಅವರ ಆರೋಗ್ಯಕರ ಪಾಲನೆಯನ್ನು ಉತ್ತೇಜಿಸುವ ಮೂಲಕ ಲಿಂಗ ಸಮಾನತೆಯನ್ನು ಪ್ರೋತ್ಸಾಹಿಸುತ್ತದೆ. ಇದು ಗಂಡು ಮತ್ತು ಹೆಣ್ಣು ಮಗುವಿನ ಜನನದ ನಡುವಿನ ತಾರತಮ್ಯವನ್ನು ಕಡಿಮೆ ಮಾಡುತ್ತದೆ.
ಉನ್ನತ ಶಿಕ್ಷಣ
ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣುಮಕ್ಕಳಿಗೆ ಪ್ರಾಥಮಿಕ ಮತ್ತು ದ್ವಿತೀಯ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣವನ್ನು ಕೂಡ ಪ್ರೋತ್ಸಾಹಿಸುತ್ತದೆ. ಉತ್ತಮ ಶಿಕ್ಷಣವನ್ನು ಪಡೆದು ಅವರ ಕನಸುಗಳನ್ನು ಸಾಧಿಸಿ ಒಳ್ಳೆಯ ವೃತ್ತಿಜೀವನವನ್ನು ನಿರ್ಮಿಸಬಹುದು.