Bhagyalakshmi yojana : ಭಾಗ್ಯಲಕ್ಷ್ಮಿ ಬಾಂಡ್ (Bhagyalakshmi Bond) ಮೆಚ್ಯುರಿಟಿ ಹೊಂದಿರುವ ಭಾಗ್ಯಲಕ್ಷ್ಮೀ ಯೋಜನೆ ಅರ್ಹ ಫಲಾನುಭವಿಗಳಿಗೆ (Beneficiaries) ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ ಹಣ ಹಾಕಲು ಸಿದ್ಧತೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಈ ಹಿಂದೆ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಲಾಭ ಇದೀಗ ರಾಜ್ಯದ 2.30 ಲಕ್ಷ ಜನರನ್ನು ತುಲುಪಿದೆ. ಆದರೆ, ರಾಜ್ಯ ಸರ್ಕಾರದ ಮಹತ್ವದ ‘ಭಾಗ್ಯಲಕ್ಷ್ಮೀ’ಯೋಜನೆಯಡಿ ಫಲಾನುಭವಿಗಳು ಹಣ ಪಡೆಯುವುದು ಅಷ್ಟು ಸುಲಭವಲ್ಲ.
ಇದನ್ನೂ ಓದಿ: Pension : ಪ್ರತಿಯೊಬ್ಬರಿಗೂ ರೂ.5 ಸಾವಿರ ಪಿಂಚಣಿ; ಈ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಗೊತ್ತಾ..?
ಹೌದು, ಅಂದು ಅರ್ಜಿ ಸಲ್ಲಿಸಿದ ಅರ್ಹರು ಈಗ ಹಣ ಪಡೆಯಲು ಪುನಾ ದಾಖಲೆ ಸಲ್ಲಿಸಬೇಕಿದೆ. ಸರ್ಕಾರ ಅನೇಕ ಷರತ್ತುಗಳನ್ನು ವಿಧಿಸಿದ್ದು, ದಾಖಲೆಗಳನ್ನು ಪುನಃ ಸಲ್ಲಿಸುವ ಅನಿವಾರ‍್ಯತೆ ಪೋಷಕರಿಗೆ ಎದುರಾಗಿದೆ. ಭಾಗ್ಯಲಕ್ಷ್ಮೀ ಯೋಜನೆ ಅನುಷ್ಠಾನ ಸಂಬಂಧ ಸರ್ಕಾರ ಸುಮಾರು 13 ಬಾರಿ ತಿದ್ದುಪಡಿ ಆದೇಶಗಳನ್ನು ಮಾಡಿದೆ. ಷರತ್ತುಗಳ ಅನ್ವಯ ದಾಖಲೆಗಳನ್ನು ಪುನಃ ಒಟ್ಟುಗೂಡಿಸುವುದು ಫಲಾನುಭವಿಗಳ ತಲೆಕೆಡಿಸುವಂತೆ ಮಾಡಿದೆ.
Bhagyalakshmi yojana: ‘ಭಾಗ್ಯಲಕ್ಷ್ಮೀ’ ಹಣ ಪಡೆಯಲು ಷರತ್ತುಗಳೇನು?
- 2ನೇ ಹೆರಿಗೆ ಸಂದರ್ಭ ತ್ರಿವಳಿ ಜನನ ಹೊರತುಪಡಿಸಿ 2 ಮಕ್ಕಳಿರಬೇಕು.
- ತಾಯಿ ಆಪರೇಷನ್ ಕಾರ್ಡ್, BPL ಕಾರ್ಡ್ ಸಲ್ಲಿಕೆ ಕಡ್ಡಾಯ.
- 8ನೇ ತರಗತಿ ವ್ಯಾಸಂಗ ಮಾಡಿರಬೇಕು.
- ವಿಶೇಷಚೇತನ ಹೆಣ್ಣು ಮಕ್ಕಳು 5ನೇ ತರಗತಿವರೆಗೆ ವ್ಯಾಸಂಗ ಮಾಡಬೇಕು. ಈ ಬಗ್ಗೆ ಶಾಲೆ ಮುಖ್ಯ ಶಿಕ್ಷಕರಿಂದ ಪ್ರಮಾಣ ಪತ್ರ ಸಲ್ಲಿಸಬೇಕು.
- ತೀವ್ರ ತರಹ ವಿಶೇಷಚೇತನ ಮಕ್ಕಳ ಕುರಿತು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ವರದಿ ಸಲ್ಲಿಸಬೇಕು.
- ಸರ್ಕಾರಿ ನೌಕರಿ ದೊರೆತ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ಸಿಗಲ್ಲ.
ಇದನ್ನೂ ಓದಿ: Lumpy skin disease : ಏನಿದು ಚರ್ಮ ಗಂಟು ರೋಗ? ಚರ್ಮ ಗಂಟು ರೋಗ ಸೋಂಕಿತ ಜಾನುವಾರುಗಳಿಂದ ಹಾಲು ಸೇವಿಸುವುದು ಸುರಕ್ಷಿತವೇ?
Bhagyalakshmi yojana: ಅರ್ಹರು ಯಾರು?
- 2006 -2007ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಗೆ ಮೊದಲ ಹಂತದಲ್ಲಿ ನೋಂದಣಿಯಾಗಿದ್ದವರಿಗೆ ಈಗ ಮೆಚ್ಯೂರಿಟಿ ಹಣ ತಲುಪಲಿದೆ.
- ಈ ಯೋಜೆನೆಗೆ 18 ವರ್ಷಗಳ ಹಿಂದೆ ಅಂದರೆ 2006 -2007ರಲ್ಲಿ ನೋಂದಣಿ ಮಾಡಿಸಿದವರಿಗೆ ಏಪ್ರಿಲ್ & ಮೇ ತಿಂಗಳ ಅಂತ್ಯಕ್ಕೆ ಮೆಚ್ಯುರಿಟಿಗೆ ಅರ್ಹರಾಗಿದ್ದು, ಶೀಘ್ರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
- ಇನ್ನು, ಈ ಮೊದಲು ಭಾಗ್ಯಲಕ್ಷ್ಮಿ ಯೋಜನೆ ಅಂತ ಇದ್ದ ಈ ಯೋಜನೆಯನ್ನು, ಈಗ ಸಮೃದ್ಧಿ ಯೋಜನೆಯಾಗಿ ಮಾರ್ಪಡಿಸಲಾಗಿದ್ದು, ಈ ಯೋಜನೆಯನ್ನು ರಾಜ್ಯ ಸರ್ಕಾರವು ಅಂಚೆ ಇಲಾಖೆಗೆ ವರ್ಗಾಯಿಸಿದೆ.
ಇದನ್ನೂ ಓದಿ: PM Schemes: ವಿದ್ಯಾರ್ಥಿಗಳಿಗಾಗಿಯೇ ಟಾಪ್ 5 PM ಸ್ಕೀಮ್‌ಗಳು ಇಲ್ಲಿವೆ..!
Bhagyalakshmi yojana: ಯಾರಿಗೆ ಎಷ್ಟು ಹಣ?
2006 -2007ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಹೆಣ್ಣು ಮಕ್ಕಳಿಗೆ 19 ವಯಸ್ಸಿಗೆ ಒಂದೂವರೆ ಲಕ್ಷ, 21 ವಯಸ್ಸಿಗೆ 1 ಲಕ್ಷ 80 ಸಾವಿರ ಹಣ ನೀಡಲಾಗುತ್ತಿದೆ. ಸದ್ಯ 2 ಲಕ್ಷ ಫಲಾನುಭವಿಗಳಿಗೆ ಹಣ ಕೊಡುವುದಕ್ಕೆ ತಯಾರಿ ಆಗಿದ್ದು, ಇಲಾಖೆಯಿಂದ ಶೀಘ್ರದಲ್ಲೇ ಬಾಂಡ್ ಕೊಡುವ ಕಾರ್ಯಕ್ರಮ ಆಗುತ್ತೆ.