ಕೋಲ್ಕತ್ತಾ: ಭಾರೀ ಮಳೆಯಿಂದಾಗಿ ಕೋಲ್ಕತ್ತಾದಲ್ಲಿನ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ (ಎನ್‌ಎಸ್‌ಸಿಬಿಐ) ವಿಮಾನ ನಿಲ್ದಾಣದಲ್ಲಿ ನೀರು ನಿಂತು ಪ್ರವಾಹ ಉಂಟಾಗಿದೆ.
ಬಂಗಾಳದ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಪರಿಣಾಮ ವಿಮಾನ ನಿಲ್ದಾಣ ಸಂಪೂರ್ಣ ವಿಮಾನ ನಿಲ್ದಾಣವೇ ನೀರಿನಿಂದ ತುಂಬಿ ಹೋಗಿದೆ. ರನ್‌ವೇ ಮತ್ತು ಟ್ಯಾಕ್ಸಿವೇಗಳಲ್ಲಿ ನೀರು ನಿಂತಿದೆ. ವಿಮಾನಹಳು ನೀರಿನ ಮೇಲೆ ನಿಂತಿರುವುದನ್ನು ಕಾಣಬಹುದಾಗಿದೆ.
ಹೌರಾ, ಸಾಲ್ಟ್ ಲೇಕ್ ಮತ್ತು ಬ್ಯಾರಕ್‌ಪುರ ಸೇರಿದಂತೆ ಕೋಲ್ಕತ್ತಾ ಮತ್ತು ಅದರ ಸಮೀಪದ ಪ್ರದೇಶಗಳು ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮುಳುಗಿ ಹೋಗಿದೆ. ಹವಾಮಾನ ಅಧಿಕಾರಿಗಳ ಅನುಸಾರ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಇನ್ನು ಈ ಪ್ರವಾಹದ ಪರಿಣಾಮ ಬಿಹಾರ ಹಾಗೂ ಉತ್ತರಪ್ರದೇಶಕ್ಕೂ ತಲುಪಲಿದೆ. ಪಶ್ಚಿಮ ಬಂಗಾಳದ ದಕ್ಷಿಣ ಜಿಲ್ಲೆಗಳಲ್ಲಿ ಮಾನ್ಸೂನ್ ಕಾರಣದಿಂದ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋಲ್ಕತ್ತಾದ ಹಲವಾರು ಭಾಗಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಹೌರಾ, ಪಶ್ಚಿಮ ಬರ್ಧಮಾನ್, ಬಿರ್ಭುಮ್, ಪುರ್ಬಾ ಬರ್ಧಮಾನ್, ಹೂಗ್ಲಿ, ನಾಡಿಯಾ ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣಗಳು ಸೇರಿದಂತೆ ದಕ್ಷಿಣ ಜಿಲ್ಲೆಗಳಲ್ಲಿ ಮುಂದಿನ 12 ಗಂಟೆಗಳ ಕಾಲ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.