ದಸರಾ ಸಂಭ್ರಮ: ಅರಸೀಕೆರೆಯಲ್ಲಿ‌ ಬನ್ನಿ ಹಬ್ಬದಂದು ಗಮನ ಸೆಳೆದ ಎತ್ತಿನ ಬಂಡಿ ಓಟ!

ದಸರಾ ಸಂಭ್ರಮ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶನಿವಾರದಂದು ವಿಜಯ ದಶಮಿಯ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ದೇವರ ಬಂಡಿ ಓಡಿಸುವ ಕಾರ್ಯ ಸಂಭ್ರಮ, ಸಡಗರದಿಂದ ನೆರವೇರಿತು. ಹೌದು, ಪ್ರತಿವರ್ಷ…

Araseikere Dussehra festival

ದಸರಾ ಸಂಭ್ರಮ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶನಿವಾರದಂದು ವಿಜಯ ದಶಮಿಯ ಬನ್ನಿ ಮುಡಿಯುವ ಹಬ್ಬದ ಅಂಗವಾಗಿ ದೇವರ ಬಂಡಿ ಓಡಿಸುವ ಕಾರ್ಯ ಸಂಭ್ರಮ, ಸಡಗರದಿಂದ ನೆರವೇರಿತು.

ಹೌದು, ಪ್ರತಿವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ದೇವರ ಬಂಡಿ ಓಡಿಸುವ ಕಾರ್ಯ ಈ ವರ್ಷ ಸರಳವಾಗಿ ನೆರವೇರಿತು. ಇನ್ನು ಬನ್ನಿ ಹಬ್ಬದ ಅಂಗವಾಗಿ ವಿಶೇಷವಾಗಿ ಎತ್ತುಗಳ ಅಲಂಕಾರ ಮಾಡಿ ದೇಗುಲದಲ್ಲಿರುವ ಬಂಡಿಗೆ ಎತ್ತುಗಳನ್ನು ಕಟ್ಟಿ ಗ್ರಾಮದ ಹೊರವಲಯದ ಬನ್ನಿ ಮರದವರೆಗೂ ಓಡಿಸಲಾಯಿತು.

Araseikere Dussehra festival 1

Vijayaprabha Mobile App free

ಬನ್ನಿ ಹಬ್ಬದ ಪ್ರಯುಕ್ತ ಗ್ರಾಮದ ಯುವಕರು, ಗ್ರಾಮಸ್ಥರು ದೇವರ ಬಂಡಿ ಜೊತೆ ಓಡಿ ಸಂಭ್ರಮಿಸಿದರಲ್ಲದೆ, ಗ್ರಾಮಸ್ಥರು ಗ್ರಾಮಕ್ಕೆ ಬನ್ನಿಯನ್ನು ತಂದು ಒಬ್ಬರಿಗೊಬ್ಬರು ಬನ್ನಿ ನೀಡಿ ಪರಸ್ಪರ ಬನ್ನಿ ಹಬ್ಬದ ಶುಭ ಕೋರಿ ಸಂಭ್ರಮಿಸಿದರು. ಇನ್ನು ದಸರಾ ಪ್ರಯುಕ್ತ ದೇವರ ಬಂಡಿ ಓಡಿಸುವ ಸಂದರ್ಭದಲ್ಲಿ ಗ್ರಾಮದ ಮುಖಂಡರು ಸಹ ಉತ್ಸವದಲ್ಲಿ ಪಾಲ್ಗೊಂಡು ಯುವಕರಿಗೆ ಮಾದರಿಯಾದರು.

ಇದನ್ನೂ ಓದಿ: ರಕ್ತದೊತ್ತಡ ಕುಸಿತದಿಂದ ರತನ್ ಟಾಟಾ ನಿಧನ; ಬಯಲಾಯ್ತು ಸತ್ಯ!

ಬನ್ನಿ ಹಬ್ಬದ ವಿಶೇಷತೆ:

ಅರಸೀಕೆರೆ ಗ್ರಾಮದಲ್ಲಿ ಪ್ರತಿವರ್ಷ ವಿಜಯ ದಶಮಿಯ ಹಬ್ಬದ ಅಂಗವಾಗಿ ಅರಸೀಕೆರೆ ಗ್ರಾಮದಲ್ಲಿ ದೇವರ ಬಂಡಿ ಓಡಿಸುವ ಕಾರ್ಯ ಪ್ರತಿ ವರ್ಷವೂ ನಡೆಯುತ್ತದೆ. ಈ ದೇವರ ಬಂಡಿಯನ್ನು ಗ್ರಾಮದ ಹೊರವಲಯದ ಬನ್ನಿ ಮರದವರೆಗೂ ಓಡಿಸಲಾಗುತ್ತದೆ. ನಂತರ ಅಲ್ಲಿಂದ ದೇವರ ಬಂಡಿಯೂ ಅರಸೀಕೆರೆ ಗ್ರಾಮದ ಬಳಿ ಅಡವಿ ಮಲ್ಲಾಪುರದ ಹತ್ತಿರ ಇರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ (ಕಣಿಸಿದ್ದೇಶ್ವರ) ಹೋಗಿ ಬನ್ನಿ ಮುಡಿಯುವುದು ಈ ಹಬ್ಬದ ವಿಶೇಷವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.