Ratan Tata : ಭಾರತದ ಅತಿದೊಡ್ಡ ಉದ್ಯಮಿ ರತನ್ ಟಾಟಾ ಅವರು ತಮ್ಮ 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ಗೊತ್ತೇ ಇದೆ. ಸದ್ಯ ಟಾಟಾ ಗ್ರೂಪ್ಗೆ ಹೊಸ ವಾರಸುದಾರರ ಆಯ್ಕೆಯಾಗಿದ್ದು, ನೋಯೆಲ್ ಟಾಟಾ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇನ್ನು, ರತನ್ ಟಾಟಾ ಅವರ ಸಾವಿಗೆ ರಕ್ತದೊತ್ತಡದಲ್ಲಿ ಅಚಾನಕ್ಕಾಗಿ ಕುಸಿತ ಕಾಣಿಸಿಕೊಂಡಿದ್ದೇ ಕಾರಣವೆಂದು ಬಹಿರಂಗವಾಗಿದೆ. ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರತನ್ ಟಾಟಾ ಅವರ ರಕ್ತದೊತ್ತಡದಲ್ಲಿ ಹಠಾತ್ ಕುಸಿತ ಆಗಿತ್ತು. ಅವರನ್ನು ಅಕ್ಟೊಬರ್ 7ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದ್ದಕ್ಕಿದ್ದಂತೆ ರಕ್ತದೊತ್ತಡ ಕಡಿಮೆಯಾಗಿದ್ದು ಸಾವಿಗೆ ಕಾರಣ ಎಂದು ವರದಿಯಾಗಿದೆ.
ಇದನ್ನೂ ಓದಿ: ತಾಯಿಯನ್ನೇ ಕೊಲ್ಲಿಸಿದ ಯುವತಿ.. ವಿಚಿತ್ರ ಪ್ರೇಮ ಕತೆ!
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment