ಬಾಗಲಕೋಟೆ: ಕೆಎಸ್ಆರ್‌ಟಿಸಿ ಬಸ್ ಹರಿದ ಪರಿಣಾಮ ಬಾಲಕನ ಎರಡೂ ಕಾಲುಗಳು ತುಂಡಾದ ಧಾರುಣ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಿಸನಾಳ ಗ್ರಾಮದಲ್ಲಿ ನಡೆದಿದೆ. ನವೀನ ಮಾದರ ಎರಡೂ ಕಾಲು ತುಂಡಾದ ದುರ್ದೈವಿ ಬಾಲಕನಾಗಿದ್ದಾನೆ.
ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಬಾಲಕ ಬಸ್ ಅಡಿಗೆ ಸಿಲುಕಿದ್ದು, ಎರಡೂ ಕಾಲುಗಳ ಮೇಲೆ ಬಸ್ ಹರಿದಿದೆ. ಕೂಡಲೇ ಬಾಲಕನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕ ನವೀನ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ.
ಬಾಲಕನ ಮೇಲೆ ಸಾರಿಗೆ ಬಸ್ ಹರಿದ ಹಿನ್ನಲೆ ವಿಷಯ ತಿಳಿದು ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿದರು. ಅಲ್ಲದೇ ಬಾಲಕನ ಚಿಕಿತ್ಸೆಗೆ ಶಾಸಕ ಪಾಟೀಲ್ ಆರ್ಥಿಕ ಸಹಾಯದ ಭರವಸೆ ನೀಡಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment