ಕೋಲಾರ: ಗೃಹ ಬಳಕೆ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮನೆಯಲ್ಲಿದ್ದ ದಂಪತಿಗೆ ತೀವ್ರ ಗಾಯಗಳಾದ ಘಟನೆ ಕೋಲಾರ ತಾಲ್ಲೂಕಿನ ಕೋಡಿ ಕಣ್ಣೂರು ಗ್ರಾಮದಲ್ಲಿ ನಡೆದಿದೆ.
ಮುನಿರಾಜು ಹಾಗೂ ರತ್ನಮ್ಮ ಗಂಭೀರ ಗಾಯಗೊಂಡ ದಂಪತಿಯಾಗಿದ್ದಾರೆ. ಅಡುಗೆ ಮಾಡುವ ವೇಳೆ ಖಾಲಿಯಾಗಿದ್ದ ಸಿಲಿಂಡರ್‌ನ್ನು ಬದಲಿಸಿ, ಹೊಸ ಸಿಲಿಂಡರ್ ಅಳವಡಿಸಿದ್ದರು. ಬಳಿಕ ಗ್ಯಾಸ್ ಒಲೆಗೆ ಬೆಂಕಿ ಹಚ್ಚುತ್ತಿದ್ದಂತೆ ಸಿಲಿಂಡರ್ ಬ್ಲ್ಯಾಸ್ಟ್ ಆಗಿದೆ.
ಬ್ಲ್ಯಾಸ್ಟ್ ತೀವ್ರತೆಗೆ ಮನೆ ಛಿದ್ರ ಛಿದ್ರಗೊಂಡಿದ್ದು, ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ವೇಳೆ ಮನೆಯಲ್ಲಿದ್ದ ದಂಪತಿಯ ಮಗಳು ನೇತ್ರಾ ಎಂಬುವವರಿಗೂ ಗಾಯಗಳಾಗಿದ್ದು ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಂಪತಿ ಮುನಿರಾಜು ಹಾಗೂ ರತ್ನಮ್ಮಗೆ ಶೇ.40% ರಷ್ಟು ಸುಟ್ಟ ಗಾಯಗಳಾಗಿದ್ದು, ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.