Onlineನಲ್ಲಿ ಬರುವ PartTime Job ನಂಬುವ ಮುನ್ನ ಎಚ್ಚರ: ಹಣ ಕಳೆದುಕೊಂಡೀರಿ ಜೋಕೆ…!

ಶಿವಮೊಗ್ಗ: ಪಾರ್ಟ್‌ ಟೈಮ್‌ ಜಾಬ್‌ ಆಫರ್‌ ನಂಬಿ 8 ಲಕ್ಷ ರೂಪಾಯಿಗೂ ಅಧಿಕ ಹಣವನ್ನ ಶಿವಮೊಗ್ಗದ ಮಹಿಳೆಯೊಬ್ಬರು ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.  ಇಲ್ಲಿನ ನಿವಾಸಿಯೊಬ್ಬರು ಜಾಹೀರಾತು…

ಶಿವಮೊಗ್ಗ: ಪಾರ್ಟ್‌ ಟೈಮ್‌ ಜಾಬ್‌ ಆಫರ್‌ ನಂಬಿ 8 ಲಕ್ಷ ರೂಪಾಯಿಗೂ ಅಧಿಕ ಹಣವನ್ನ ಶಿವಮೊಗ್ಗದ ಮಹಿಳೆಯೊಬ್ಬರು ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಇಲ್ಲಿನ ನಿವಾಸಿಯೊಬ್ಬರು ಜಾಹೀರಾತು ಒಂದರಲ್ಲಿದ್ದ ನಂಬರ್‌ಗೆ ವಾಟ್ಸಪ್‌ ಮಾಡಿದ್ದರು. ಬಳಿಕ ಅಲ್ಲಿ ನೀಡಿದ ವಿವರಗಳನ್ನ ಫಾಲೋ ಮಾಡಿದರು. ಬಳಿಕ ವಾಟ್ಸಾಪ್‌ನಲ್ಲಿ ತಾವು ಕಳುಹಿಸುವ ವಿಡಿಯೋಗಳಿಗೆ ಲೈಕ್‌ ಮಾಡಿ, ಸ್ಕ್ರೀನ್‌ ಶಾಟ್‌ ಕಳುಹಿಸುವಂತೆ ಇನ್ನೊಂದು ನಂಬರ್‌ನಿಂದ ತಿಳಿಸಿದಂತೆ ಈ ಮಹಿಳೆಯು ಚಾಚೂತಪ್ಪದೇ ಮಾಡಿದ್ದರು. ಸುಮಾರು 8 ಟಾಸ್ಕ್‌ ಪೂರೈಸಿದಾಗ ಗೃಹಿಣಿಯ ಖಾತೆಗೆ 150 ರೂಪಾಯಿ ಹಣ ಬಂದಿದೆ. 

ಆನಂತರ ಹೊಸ ಟಾಸ್ಕ್‌ಗೆ ಹಣ ಕಟ್ಟಬೇಕು ಎಂದು ಸೂಚಿಸಲಾಗಿದೆ. ಹೇಗಿದ್ದರೂ ಹಣ ಬರುತ್ತದೆ ಎಂದು ಖಾತರಿಯಾದ ಮಹಿಳೆ ಹಂತ ಹಂತವಾಗಿ ಸುಮಾರು 8.20 ಲಕ್ಷ ರೂಪಾಯಿ ಹಣ ಕಟ್ಟಿದ್ದಾರೆ. ಆ ಬಳಿಕ ಹಣದ ಕಮಿಷನ್‌ ಆಗಲಿ ಅಸಲಾಗಲಿ ಬರದಿರುವುದುನ್ನ ಗಮನಿಸಿ ಮೋಸ ಹೋಗಿರುವುದು ಗೊತ್ತಾಗಿ, ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.