ಕೃಷಿ ಯಾಂತ್ರೀಕರಣ ಯೋಜನೆ: ಕೃಷಿ ಯಂತ್ರೋಪಕರಣಕ್ಕೆ ಸಹಾಯಧನ? ಸಬ್ಸಿಡಿ ದರದಲ್ಲಿ ಯಾವೆಲ್ಲ ಕೃಷಿ ಯಂತ್ರೋಪಕರಣಗಳು ಸಿಗಲಿವೆ?

ಕೃಷಿ ಯಾಂತ್ರೀಕರಣ ಯೋಜನೆ : ಕರ್ನಾಟಕ ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯೂ (krishi yantrikaran yojana) ಒಂದು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ…

ಕೃಷಿ ಯಾಂತ್ರೀಕರಣ ಯೋಜನೆ : ಕರ್ನಾಟಕ ಸರ್ಕಾರವು ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಕೃಷಿ ಯಾಂತ್ರೀಕರಣ ಯೋಜನೆಯೂ (krishi yantrikaran yojana) ಒಂದು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುತ್ತದೆ.

ಈ ಯೋಜನೆಯು ಕೃಷಿ ಯಂತ್ರೋಪಕರಣ ಕೊಳ್ಳಲು ರೈತರಿಗೆ ಶೇ.90ರಷ್ಟು ಸಹಾಯಧನ ನೀಡುತ್ತದೆ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಯಂತ್ರೋಪಕರಣಗಳ ಬೇಡಿಕೆ ಹೆಚ್ಚುತ್ತಿದೆ. ರೈತರು ಸಹ ಆಧುನಿಕ ತಂತ್ರಜ್ಞಾನ ಬಳಸಲು ಉತ್ಸುಕರಾಗಿರುವುದರಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಕೃಷಿ ಯಾಂತ್ರೀಕರಣ ಯೋಜನೆಯಡಿ ಯಾವ ಕೃಷಿ ಯಂತ್ರೋಪಕರಣಕ್ಕೆ ಎಷ್ಟು ಸಹಾಯಧನ?

Vijayaprabha Mobile App free

ಕೃಷಿ ಯಾಂತ್ರೀಕರಣ ಯೋಜನೆಯಡಿ ಮಿನಿ ಟ್ರ್ಯಾಕ್ಟರ್‌ ಖರೀದಿಗೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ 3 ಲಕ್ಷ ರೂ., ಸಾಮಾನ್ಯ ವರ್ಗದವರಿಗೆ 75 ಸಾವಿರ ರೂ. ಪವರ್ ಟಿಲ್ಲರ್ ಗೆ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು, ಗರಿಷ್ಠ 72,500 ರೂ., ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ ಶೇ.90ರಷ್ಟು, ಗರಿಷ್ಠ 1 ಲಕ್ಷ ರೂ. ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ ಹಾಗೂ ಡಿಸ್ಕ್ ಹ್ಯಾರೋಗೆ ಸಾಮಾನ್ಯ ವರ್ಗದವರಿಗೆ 29,000-36500 ರೂ., ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ 52,200- 65,700 ರೂ.ವರೆಗೆ ಸಹಾಯಧನ ಸಿಗಲಿದೆ.

ಸಬ್ಸಿಡಿ ದರದಲ್ಲಿ ಯಾವೆಲ್ಲ ಕೃಷಿ ಯಂತ್ರೋಪಕರಣಗಳು ಸಿಗಲಿವೆ?

ಭಾರತದಲ್ಲಿನ ಕೃಷಿ ಯಾಂತ್ರೀಕರಣವು ಇತ್ತೀಚಿಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ಗಮನಾರ್ಹ ಪ್ರಗತಿಯು ಕೃಷಿಯ ವಿವಿಧ ಅಂಶಗಳ ಮೇಲೆ ಆಳವಾದ ಮತ್ತು ಧನಾತ್ಮಕ ಪ್ರಭಾವವನ್ನು ಬೀರಿದ್ದು, ಕರ್ನಾಟಕ ಸರ್ಕಾರವು ರೈತರಿಗೆ ಕೃಷಿ ಯಾಂತ್ರೀಕರಣ ಯೋಜನೆಯಡಿ ಶೇ.90ರಷ್ಟು ಸಹಾಯಧನ ನೀಡುತ್ತದೆ. ಈ ಯೋಜನೆಯಡಿ ಕೃಷಿ ಇಲಾಖೆಯಿಂದ ಯಾವೆಲ್ಲ ಯಂತ್ರೋಪಕರಣಗಳು ಸಿಗಲಿವೆ ಎಂದು ವಿಡಿಯೋದಲ್ಲಿ ನೋಡಬಹುದು.
ಕೃಪೆ: RAGHU EDUCARE

ಕರ್ನಾಟಕ ಸರ್ಕಾರದ ಕೃಷಿ ಯಾಂತ್ರೀಕರಣ ಯೋಜನೆಯ ಉದ್ದೇಶಗಳು
ಕೃಷಿ ಯಾಂತ್ರೀಕರಣ ಯೋಜನೆಯನ್ನು ಯಂತ್ರಗಳನ್ನು ಬಳಸುವ ಮೂಲಕ ಕೃಷಿ ಕಾರ್ಯಗಳನ್ನು ಸುಲಭಗೊಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ರೈತರಿಗೆ ದೈಹಿಕ ಶ್ರಮದ ಪ್ರಮಾಣವನ್ನು ಕಡಿಮೆ ಮಾಡುವುದು, ಬೆಳೆಯುವ ಬೆಳೆಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಸುಧಾರಿಸುವುದು, ಕೃಷಿ ಚಟುವಟಿಕೆಗಳನ್ನು ಹೆಚ್ಚು ತ್ವರಿತವಾಗಿ ಪೂರ್ಣಗೊಳಿಸುವುದು, ಉತ್ತಮ ಸಮಯ ನಿರ್ವಹಣೆಗೆ ಅನುವು ಮಾಡಿಕೊಡುವುದು, ಹೆಚ್ಚುವರಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಬದಲು ಯಂತ್ರಗಳನ್ನು ಬಳಸಿ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಯಾಂತ್ರೀಕರಣವು ಪ್ರಮುಖ ಪಾತ್ರವಹಿಸುತ್ತದೆ

ಭಾರತದಲ್ಲಿ ಯಾಂತ್ರೀಕರಣವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಸುಧಾರಿತ ಆಹಾರ ಭದ್ರತೆಗೆ ಕೊಡುಗೆ ನೀಡುತ್ತದೆ. ಕೃಷಿ ಉತ್ಪಾದಕತೆಯಿಂದ ರೈತರಿಗೆ ಹೆಚ್ಚಿನ ಆದಾಯ ಲಭಿಸುವುದಲ್ಲದೆ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಆಧುನಿಕ ಕೃಷಿ ಯಂತ್ರೋಪಕರಣಗಳು ನಿಖರ ಕೃಷಿ ಮತ್ತು ಸಂರಕ್ಷಣಾ ಕೃಷಿಯಂತಹ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಜೊತೆಗೆ ಕೃಷಿ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.