ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಎಲ್ಲರಿಗೂ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದ್ದು, ಮಾರ್ಚ್ 31ರ ಒಳಗಾಗಿ ನೀವು ಈ ಪ್ರಮುಖ ದಾಖಲೆಯಾದ ಪ್ಯಾನ್ ಕಾರ್ಡ್ ನೊಂದಿದೆ ಆಧಾರ್ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ.
ಇನ್ನು, ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ ಈ ಸಮಯದ ಒಳಗಾಗಿ ಲಿಂಕ್ ಮಾಡದಿದ್ದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ ಮತ್ತು ₹1,000 ದಂಡವನ್ನೂ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೀಗಾಗಿ ಪ್ಯಾನ್ ಕಾರ್ಡ್ ಹೊಂದಿರುವ ಮಾರ್ಚ್ 31ರ ಒಳಗೆ ಆಧಾರ್-ಪ್ಯಾನ್ ಲಿಂಕ್ ಮಾಡಬೇಕಾಗಿದೆ.
ಆಧಾರ್-ಪ್ಯಾನ್ ಲಿಂಕ್ ಹೀಗೆ ಮಾಡಿ:-
* incometaxindiaefiling.gov.in ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು
* ಈಗ ನಿಮ್ಮ ಪ್ಯಾನ್ ID, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ನಮೂದಿಸಿ ಲಾಗ್ ಇನ್ ಆಗಬೇಕು
* ‘ಪ್ರೊಫೈಲ್ ಸೆಟ್ಟಿಂಗ್’ ಗೆ ಹೋಗಿ ‘ಲಿಂಕ್ ಆಧಾರ್’ ಕ್ಲಿಕ್ ಮಾಡಬೇಕು
* ಅಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ನಮೂದಿಸಬೇಕು
* ನಂತರ ಆಧಾರ್ ಸಂಖ್ಯೆ ನಮೂದಿಸಿ ‘LINK’ ಮೇಲೆ ಕ್ಲಿಕ್ ಮಾಡಬೇಕು
* ಈಗ ನಿಮಗೆ ಆಧಾರ್-ಪ್ಯಾನ್ ಲಿಂಕ್ ಆಗಿದೆ ಎಂದು ಪಾಪ್-ಅಪ್ ಸಂದೇಶವು ಕಾಣಿಸುತ್ತದೆ