Gold ornament | ಉತ್ತರಾಖ೦ಡದ ಡೆಹ್ರಾಡೂನ್ ಜಿಲ್ಲೆಯ ಚಕ್ರತ ಪ್ರದೇಶದ ಬುಡಕಟ್ಟು ಗ್ರಾಮವಾದ ಕಂದಾರ್ ನಲ್ಲಿ ವಿಚಿತ್ರ ನಿರ್ಧಾರವೊ೦ದು ಕೈಗೊಳ್ಳಲಾಗಿದೆ. ಇದೀಗ ಈ ಗ್ರಾಮದಲ್ಲಿ ಮಹಿಳೆಯರು ಮದುವೆ ಅಥವಾ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮೂರು ಕ್ಕಿಂತ ಹೆಚ್ಚು ಚಿನ್ನದ ಆಭರಣಗಳನ್ನು ಧರಿಸಿದರೆ ₹50,000 ದ೦ಡ ವಿಧಿಸಲಾಗುತ್ತದೆ. ಮಹಿಳೆಯರು ಕೇವಲ ಮಂಗಳಸೂತ್ರ, ಮೂಗು ಬೊಟ್ಟು & ಕಿವಿಯೋಲೆಗಳನ್ನು ಮಾತ್ರ ಧರಿಸಬಹುದು ಎ೦ಬ ನಿಯಮವನ್ನು ಪಂಚಾಯತ್ ಅಂಗೀಕರಿಸಿದೆ. ಚಿನ್ನದ ಬೆಲೆ ದಿನೇದಿನೇ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸರಳ ಜೀವನ
ಎ೦ಭತ್ತು ವರ್ಷದ ಹಿರಿಯ ನಿವಾಸಿ ಉಮಾ ದೇವಿ ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿ, ‘ನಮ್ಮಲ್ಲಿ ಹೆಚ್ಚಿನವರು ಬಡವರಾಗಿದ್ದಾರೆ. ಸರಳ ಜೀವನ ನಡೆಸುತ್ತಿದ್ದೇವೆ. ಊರಿನ ಪಂಚಾಯತ್ ಸರಿಯಾದ ನಿರ್ಧಾರ ತೆಗೆದುಕೊ೦ಡಿದೆ’ ಎ೦ದು ಹೇಳಿದ್ದಾರೆ. ಅವರ ಅಭಿಪ್ರಾಯದಲ್ಲಿ ಈ ಕ್ರಮವು ಅನಾವಶ್ಯಕ ಸ್ಪರ್ಧೆ ಮತ್ತು ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಹೊಸ ನಿಯಮ ಬಡವರಲ್ಲಿ ಸಮಾನತೆ
ಗ್ರಾಮಸ್ಥರ ಪ್ರಕಾರ, ಕಳೆದ 15-20 ವರ್ಷಗಳಲ್ಲಿ ಕೆಲವು ಕುಟುಂಬಗಳು ಸರ್ಕಾರಿ ಉದ್ಯೋಗಗಳಿಂದ ಆರ್ಥಿಕವಾಗಿ ಬಲಿಷ್ಠವಾದ ನಂತರ ಮಹಿಳೆಯರು 180-200 ಗ್ರಾಂ ತೂಕದ ಡಿಸೈನರ್ ಚಿನ್ನದ ಸೆಟ್ ಗಳನ್ನು ಧರಿಸುವ ಪ್ರವೃತ್ತಿ ಹೆಚ್ಚಿಸಿವೆ. ಇಂತಹ ಆಭರಣಗಳ ಬೆಲೆ ಇಂದಿನ ದಿನಗಳಲ್ಲಿ 22 ಲಕ್ಷದಿಂದ 25 ಲಕ್ಷ ರೂ.ಗಳಷ್ಟಿದೆ. ಹೀಗಾಗಿ ಬಡ ಕುಟುಂಬಗಳಿಗೆ ಅದು ತಲುಪದ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮ ಬಡವರಲ್ಲಿ ಸಮಾನತೆ ಮತ್ತು ಸಂತೋಷ ತಂದಿದೆ ಎಂದು ಊರಿನವರು ಹೇಳುತ್ತಾರೆ.
ಸಾಮಾಜಿಕ ಸುಧಾರಣೆಯತ್ತ ಮೊದಲ ಹೆಜ್ಜೆ
ಮತ್ತೊಬ್ಬ ಮಹಿಳೆ ತುಲ್ಲಾ ದೇವಿ ಆಭರಣಗಳ ಮೇಲಿನ ನಿರ್ಬ೦ಧವನ್ನು ಬೆಂಬಲಿಸುತ್ತಾ, ‘ನಮ್ಮ ಊರಿನಲ್ಲಿ ಜನರು ಈಗ ಇಂಗ್ಲಿಷ್ ವಿಸ್ಕಿ ಕುಡಿಯುತ್ತಿದ್ದಾರೆ. ಹಿಂದೆ ಸ್ಥಳೀಯ ಪಾನೀಯ ತಯಾರಿಸುತ್ತಿದ್ದೆವು. ಈಗ ಬ್ರಾಂಡೆಡ್ ಮದ್ಯ ಮನೆಗಳಿಗೆ ನುಗ್ಗಿದೆ. ಅದನ್ನು ಪಡೆಯಲು ಸಾಧ್ಯವಾಗದವರಿಗೆ ಅದು ಹೊರೆಯಾಗುತ್ತಿದೆ. ಇಂತಹ ವ್ಯಸನಗಳು ನಿಲ್ಲಬೇಕು’ ಎ೦ದರು. ಈ ನಿರ್ಧಾರಕ್ಕೆ ಕಾರಣರಾದ ತಿಲಕ್ ಸಿಂಗ್, ‘ಇದು ಕೇವಲ ಆರಂಭ. ಸಾಮಾಜಿಕ ಸುಧಾರಣೆಯತ್ತ ನಮ್ಮಮೊದಲ ಹೆಜ್ಜೆ ಮುಂದಿನ ದಿನಗಳಲ್ಲಿ ಇನ್ನೂ ಹಲವು ಉಪಕ್ರಮಗಳನ್ನು ಜಾರಿಗೆ ತರುತ್ತೇವೆ’




