Banking rules : ಬ್ಯಾಂಕಿಂಗ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ: ನಾಳೆಯಿಂದ ಜಾರಿ

Banking rules : ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ, 2025 ಅನ್ನು ಪ್ರಕಟಿಸಿದೆ. ಈ ಕಾಯ್ದೆಯ ಅನ್ವಯ, ನವೆಂಬರ್ 1, 2025 ರಿಂದ…

Banking rules

Banking rules : ಭಾರತದ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ, 2025 ಅನ್ನು ಪ್ರಕಟಿಸಿದೆ. ಈ ಕಾಯ್ದೆಯ ಅನ್ವಯ, ನವೆಂಬರ್ 1, 2025 ರಿಂದ ಬ್ಯಾಂಕ್ ಖಾತೆದಾರರು ಮತ್ತು ಲಾಕರ್ ಮಾಲೀಕರು ತಮ್ಮ ಖಾತೆ ಅಥವಾ ಲಾಕರ್‌ಗೆ ಒಬ್ಬರ ಬದಲಿಗೆ ನಾಲ್ಕು ನಾಮಿನಿಗಳನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಸೌಲಭ್ಯವನ್ನು ಒದಗಿಸಲಿದೆ.

19 ಮಹತ್ವದ ಬದಲಾವಣೆ

ಏಪ್ರಿಲ್ 15, 2025ರಂದು ಹೊರಡಿಸಿದ ಹೊಸ ತಿದ್ದುಪಡಿ ಕಾಯ್ದೆಯ ಅನ್ವಯ, ಬ್ಯಾಂಕ್ ಖಾತೆಗಳು ಮತ್ತು ಲಾಕರ್‌ಗಳಲ್ಲಿ ನಾಮಿನಿ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಒಟ್ಟು 19 ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಖಾತೆದಾರರ ನಿಧನದ ನಂತರ ನಾಮಿನಿ ಸಂಬಂಧಿತ ವಿವಾದಗಳು ಹೆಚ್ಚುತ್ತಿರುವ ಹಿನ್ನೆಲೆ ಈ ತಿದ್ದುಪಡಿಗಳು ಜಾರಿಗೆ ಬ೦ದಿವೆ.

ನಾಲ್ವರು ನಾಮಿನಿಗಳು

ಹೊಸ ನಿಯಮದ ಪ್ರಕಾರ, ಉಳಿತಾಯ ಖಾತೆ, ಫಿಕ್ಸ್‌ಡ್ ಡೆಪಾಸಿಟ್‌ಗಳು, ಬ್ಯಾಂಕ್ ಲಾಕರ್‌ಗಳಲ್ಲಿ ಏಕಕಾಲಕ್ಕೆ ನಾಲ್ಕು ಜನರನ್ನು ನಾಮಿನಿಗಳಾಗಿ ನೇಮಿಸಬಹುದು. ಪ್ರತಿಯೊಬ್ಬ ನಾಮಿನಿಗೆ ಶೇಕಡಾವಾರು ಪಾಲು ನಿಗದಿಪಡಿಸಲು ಅವಕಾಶವಿದೆ. ಖಾತೆದಾರರು ಯಾವಾಗ ಬೇಕಾದರೂ ನಾಮಿನಿಗಳನ್ನು ಸೇರಿಸಬಹುದು ಅಥವಾ ಬದಲಾಯಿಸಬಹುದು. ಇದು ಠೇವಣಿದಾರರ ಆಸ್ತಿ ಹಕ್ಕು ಹಸ್ತಾಂತರ ಪ್ರಕ್ರಿಯೆ ಸುಗಮಗೊಳಿಸುವ ಉದ್ದೇಶ ಹೊಂದಿದೆ.

Vijayaprabha Mobile App free

ಶೂನ್ಯಕ್ಕಿಂತ ಕಡಿಮೆ ಬ್ಯಾಲೆನ್ಸ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಗಳಿಗೆ ಸ೦ಬ೦ಧಿಸಿದ೦ತೆ ಹೊಸ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸಿದೆ. ಖಾತೆದಾರರು ಕನಿಷ್ಠ ಸರಾಸರಿ ಬ್ಯಾಲೆನ್ಸ್ ಕಾಪಾಡದಿದ್ದರೆ ಬ್ಯಾಂಕುಗಳು ವಿಧಿಸುವ ದ೦ಡದಿ೦ದ ಖಾತೆಯ ಶೇಷ ಶೂನ್ಯಕ್ಕಿಂತ ಕಡಿಮೆ ಆಗಬಾರದು ಎಂದು ತಿಳಿಸಿದೆ. ಯಾವುದೇ ಬ್ಯಾಂಕ್ ಖಾತೆದಾರರನ್ನು ಈ ರೀತಿಯ ಋಣಾತ್ಮಕ ಸ್ಥಿತಿಗೆ ತಳ್ಳಬಾರದು. ಈ ನಿಯಮವನ್ನು ಉಲ್ಲಂಘಿಸಿದರೆ, ಅದು RBI ಮಾರ್ಗಸೂಚಿ ಉಲ್ಲಂಘನೆಗೆ ಸಮಾನ ಎಂದು ಸ್ಪಷ್ಟಪಡಿಸಲಾಗಿದೆ.

ಗ್ರಾಹಕರಿಗೆ ಲಾಭ

ಬ್ಯಾಂಕಿಂಗ್‌ ನಿಯಮಗಳಲ್ಲಿನ ಮಹತ್ವದ ಬದಲಾವಣೆಗಳ ಅನ್ವಯ, ಒ೦ದೇ ಬ್ಯಾಂಕ್‌ ಖಾತೆಯಲ್ಲಿ ಹಲವಾರು ನಾಮಿನಿಗಳನ್ನು ಸೇರಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಇದರಿಂದ ಕುಟು೦ಬ ಸದಸ್ಯರಿಗೆ ಸಮಾನ ಹಕ್ಕು ನೀಡಲು, ನಿಧನದ ಬಳಿಕ ಹಕ್ಕು ಹಸ್ತಾಂತರ ಸುಲಭವಾಗುತ್ತದೆ. ಅಲ್ಲದೆ, ಶೂನ್ಯಕ್ಕಿಂತ ಕಡಿಮೆ ಬ್ಯಾಲೆನ್ಸ್‌ಗೆ ದಂಡ ವಿಧಿಸುವುದನ್ನು RBI ನಿಷೇಧಿಸಿದೆ. ಈ ನಿಯಮಗಳು ಗ್ರಾಹಕರ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಬ್ಯಾಂಕುಗಳು ಮತ್ತು ಗ್ರಾಹಕರ ನಡುವಿನ ನಂಬಿಕೆಯನ್ನು ಹೆಚ್ಚಿಸಲಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.