Union Budget 2025 | ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಬಜೆಟ್ (Union Budget) ಮಂಡಿಸಲಾಗುತ್ತಿತ್ತು. ಆದರೆ, 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಯಶವಂತ್ ಸಿನ್ಹಾ ಈ ಪದ್ಧತಿಯನ್ನು ಬದಲಾಯಿಸಿದರು.
ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲು ನಿರ್ಧಾರ ಮಾಡಲಾಯಿತು. ಫೆಬ್ರವರಿ ಕೊನೆಯ ದಿನದಂದು ಬಜೆಟ್ ಮಂಡಿಸಿದರೆ, ಹೊಸ ನೀತಿಗಳನ್ನು ರೂಪಿಸಲು ಕೇಂದ್ರಕ್ಕೆ ಸಾಕಷ್ಟು ಸಮಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಅರುಣ್ ಜೇಟ್ಲಿ ಫೆಬ್ರವರಿ 1ಕ್ಕೆ ಮಂಡಿಸಲು ನಿರ್ಧರಿಸಿದರು.
ಇದನ್ನೂ ಓದಿ: Union Budget 2025 | ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆ ; ಈ 5 ಘೋಷಣೆಗಳ ಮೇಲೆ ಹೆಚ್ಚಿನ ನಿರೀಕ್ಷೆ
Union Budget 2025 | ಜನವರಿ 31 ರಿಂದ ಕೇಂದ್ರ ಬಜೆಟ್ ಅಧಿವೇಶನ ಹೀಗಿರಲಿದೆ ವೇಳಾಪಟ್ಟಿ
ಕೇಂದ್ರ ಬಜೆಟ್‌ಗೆ ಮುಂಚಿತವಾಗಿ, ಕೇಂದ್ರ ಸರ್ಕಾರವು ಜನವರಿ 30 ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ. ಮು೦ಬರುವ ಅಧಿವೇಶನದಲ್ಲಿ ಸದನದಲ್ಲಿ ಸುಗಮ ಚರ್ಚೆ ನಡೆಸಲು ವಿರೋಧ ಪಕ್ಷದ ನಾಯಕರು ಸಹಕಾರ ನೀಡುವ೦ತೆ ಕೇ೦ದ್ರ ಮನವಿ ಮಾಡಿದ್ದು, ಈ ಸಭೆಯಲ್ಲಿ ಅದರ ಕುರಿತಾಗಿ ಚರ್ಚೆ ನಡೆಯಲಿದೆ.
ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31 ರಿ೦ದ ಪ್ರಾರ೦ಭವಾಗಲಿದೆ. ರಾಷ್ಟ್ರಪತಿ ದೌಪದಿ ಮುರ್ಮು ಅವರು ಅಂದು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು 31 ಜನವರಿ 2025 ರಂದು ಪ್ರಾರಂಭವಾಗಿ ಫೆಬ್ರವರಿ 13 ರಂದು ಕೊನೆಗೊಳ್ಳುತ್ತದೆ.
ಇದನ್ನೂ ಓದಿ: Ration card | ಪಡಿತರದಾರರಿಗೆ ಗುಡ್ ನ್ಯೂಸ್; ತಿದ್ದುಪಡಿ ಮಾಡುವುದು ಈಗ ಬಲು ಸುಲಭ!
ಫೆಬ್ರವರಿ 1 ಬಜೆಟ್ ಮಂಡನೆ
ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ೦ದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಅನ್ನು ಬೆಳಿಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮ೦ಡಿಸಲಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 8ನೇ ಕೇ೦ದ್ರ ಬಜೆಟ್ ಆಗಲಿದೆ.
ಜನವರಿ 31 ರಿಂದ ಫೆಬ್ರವರಿ 13 ರವರೆಗೆ ಸಂಸತ್ತು ಒಂಬತ್ತು ಅಧಿವೇಶನಗಳನ್ನು ಹೊಂದಿರುತ್ತದೆ, ಆಗ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯಕ್ಕೆ ಪ್ರತಿಕ್ರಿಯಿಸುತ್ತಾರೆ ಮತ್ತು ಬಜೆಟ್ ಮೇಲಿನ ಚರ್ಚೆಗೆ ಸೀತಾರಾಮನ್ ಅವರು ಉತ್ತರಿಸುತ್ತಾರೆ.
ಇದನ್ನೂ ಓದಿ: PM Kisan Yojana | ರೈತರಿಗೆ ಸಿಹಿಸುದ್ದಿ, ಇದೇ ದಿನ ರೈತರ ಖಾತೆಗಳಿಗೆ ₹2,000!
ಏಪ್ರಿಲ್‌ನಲ್ಲಿ ಮುಕ್ತಾಯ
ಈ ಬಜೆಟ್ ಮಂಡನೆಯ ನಂತರ ಬಜೆಟ್ ಪ್ರಸ್ತಾವನೆಗಳನ್ನು ಪರಿಶೀಲಿಸಲು ಮತ್ತು ವಿವಿಧ ಸಚಿವಾಲಯಗಳ ಅನುದಾನದ ಬೇಡಿಕೆಗಳನ್ನು ಚರ್ಚಿಸಲು ಹಾಗೂ ಬಜೆಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮಾರ್ಚ್ 10 ರಿಂದ ಮತ್ತೆ ಸಭೆ ಸೇರಲಾಗುತ್ತದೆ. ಆ ಬಳಿಕ ಅಧಿವೇಶನವು ಏಪ್ರಿಲ್ 4 ರಂದು ಮುಕ್ತಾಯಗೊಳ್ಳಲಿದೆ.