Tuesday Puja Method : ನಿಮ್ಮ ಮನಸ್ಸು & ಮೆದುಳು ಆರೋಗ್ಯಕ್ಕೆ ಗಣೇಶನನ್ನು ವಿಧಿ ವಿಧಾನಗಳಂತೆ ಪೂಜಿಸಬೇಕು. ಶ್ರೀ ಗಣೇಶನ ‘ಗಂ ಗಣಪತಯೇ ನಮಃ’ ಮಂತ್ರವನ್ನು 108 ಬಾರಿ ಜಪಿಸಬೇಕು. ಮಂಗಳವಾರದಂದು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಮನಸ್ಸು ಮತ್ತು ಮೆದುಳು ಎರಡೂ ಆರೋಗ್ಯಕರವಾಗಿರುತ್ತದೆ.
ವ್ಯವಹಾರದ ಬೆಳವಣಿಗೆ
ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳಲು ಬಯಸಿದರೆ ಬಾಳೆ ಎಲೆಯನ್ನು ತೆಗೆದುಕೊಳ್ಳಿ ಅದರ ಮೇಲೆ ಅರಿಶಿನದಿಂದ ತ್ರಿಕೋನ ಚಿಹ್ನೆಯನ್ನು ಬಿಡಿಸಿ. ಇದರ ಮು೦ದೆ ಒಂದು ತುಪ್ಪದ ದೀಪವನ್ನು ಬೆಳಗಿಸಿ. ಈ ತ್ರಿಕೋನ ಆಕಾರದ ಮಧ್ಯದಲ್ಲಿ 900 ಗ್ರಾಂ ಉದ್ದಿನ ಬೇಳೆ & ಏಳು ಇಡೀ ಕೆಂಪು ಮೆಣಸಿನಕಾಯಿಗಳನ್ನು ಇರಿಸಿ. ‘ಅನ್ನೇ ಸಖಸ್ಯ ಬೋಧಿ ನಃ’. ಈ ಮಂತ್ರವನ್ನು 1008 ಬಾರಿ ಜಪಿಸಿ, ನಂತರ, ಬಳಸಿದ ಎಲ್ಲಾ ವಸ್ತುಗಳನ್ನು ನದಿಯಲ್ಲಿ ಹರಿಬಿಡಿ.
ಇದನ್ನೂ ಓದಿ: Household items | ಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ ಎದುರಾಗುತ್ತದೆ ದುರಾದೃಷ್ಟ
ವಿವಾಹ ಸಮಸ್ಯೆ ನಿವಾರಣೆ
ನಿಮ್ಮ ಮಗುವಿಗೆ ಒಳ್ಳೆಯ ವರ ಅಥವಾ ಒಳ್ಳೆಯ ವಧುವನ್ನು ಪಡೆಯಲು ಮಂಗಳವಾರದಂದು ಶ್ರೀ ಗಣೇಶನ ಓಂ ಹೂಂ ಗಂ ಗೌಂ ಹರಿದ್ರಾ ಗಣಪತಯೇ ವರವರದ ಸರ್ವಜನ ಹೃದಯಂ ಸ್ತಂಭಯ ಸ್ತಂಭಯ ಸ್ವಾಹಾ ಮಂತ್ರವನ್ನು ಜಪಿಸುವುದರಿಂದ ನಿಮ್ಮ ಮಗುವಿಗೆ ಒಳ್ಳೆಯ ವರ ಅಥವಾ ವಧು ಶೀಘ್ರದಲ್ಲೇ ಸಿಗುತ್ತಾರೆ.
ಇದನ್ನೂ ಓದಿ: Rashi bhavishya | ಈ ರಾಶಿಯವರಿಗೆ ಉದ್ಯೋಗ ಸಿಗದೇ ರಾತ್ರಿ ಹಗಲು ಚಿಂತೆ!
ಕೌಟುಂಬಿಕ ನೆಮ್ಮದಿ
ಕೌಟುಂಬಿಕ ಭಿನ್ನಾಭಿಪ್ರಾಯದಿಂದಾಗಿ ನಿಮ್ಮ ಮಕ್ಕಳು & ಸಂಗಾತಿಯ ನಡುವಿನ ಸ೦ಬ೦ಧವು ಸರಿಯಾಗಿ ನಡೆಯುತ್ತಿಲ್ಲವಾದರೆ, ಇಂದು ನೀವು ಮಾನಸಿಕವಾಗಿ ಭಗವಾನ್ ಮಂಗಳದೇವನನ್ನು ಧ್ಯಾನಿಸಬೇಕು. ಓಂ ಕ್ರಮಂ ಕ್ರೀಂ ಕ್ರೌಂ ಸಃ ಭೌಮಾಯ ನಮಃ ಈ ಮಂತ್ರವನ್ನು 51 ಬಾರಿ ಜಪಿಸಿ. ಮಂಗಳವಾರ ಹೀಗೆ ಮಾಡುವುದರಿಂದ ನಿಮ್ಮ ಕೌಟುಂಬಿಕ ಕಲಹಗಳು ಬಗೆಹರಿಯುತ್ತವೆ.