Protein shakes | ಪ್ರೋಟಿನ್ ಶೇಕ್ ಸೇವನೆ ಅತಿಯಾದರೆ ಎಷ್ಟೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ?

Protein shakes : ಕ್ರೀಡಾಪಟುಗಳು, ಬಾಡಿ ವರ್ಕೌಟ್ ಮಾಡುವವರು ಸೇರಿದಂತೆ ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಬಯಸುವ ಜನರಲ್ಲಿ ಪ್ರೋಟಿನ್ ಶೇಕ್ (Protein shakes) ಜನಪ್ರಿಯವಾಗಿದೆ. ಆದರೆ, ಹೆಚ್ಚಿನ ಪ್ರೋಟೀನ್ ಮೂತ್ರಪಿಂಡಗಳು ಮತ್ತು ಯಕೃತ್ತನ್ನು ಹಾನಿಗೊಳಿಸುತ್ತದೆ…

Health problems caused by consuming protein shakes

Protein shakes : ಕ್ರೀಡಾಪಟುಗಳು, ಬಾಡಿ ವರ್ಕೌಟ್ ಮಾಡುವವರು ಸೇರಿದಂತೆ ಸ್ನಾಯುವಿನ ದ್ರವ್ಯರಾಶಿಯನ್ನು ನಿರ್ಮಿಸಲು ಬಯಸುವ ಜನರಲ್ಲಿ ಪ್ರೋಟಿನ್ ಶೇಕ್ (Protein shakes) ಜನಪ್ರಿಯವಾಗಿದೆ. ಆದರೆ, ಹೆಚ್ಚಿನ ಪ್ರೋಟೀನ್ ಮೂತ್ರಪಿಂಡಗಳು ಮತ್ತು ಯಕೃತ್ತನ್ನು ಹಾನಿಗೊಳಿಸುತ್ತದೆ ಮತ್ತು ಆಸ್ಟಿಯೊಪೊರೋಸಿಸ್ಗೆ ಕಾರಣವಾಗಬಹುದು ಎಂದು ಕೆಲವರು ಹೇಳುತ್ತಾರೆ.

ಇದನ್ನೂ ಓದಿ: Constipation | ಚಳಿಗಾಲದಲ್ಲಿ ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಇಲ್ಲದೆ ಸುಲಭ ಪರಿಹಾರ

Protein shakes : ಪ್ರೋಟಿನ್ ಶೇಕ್ ಸೇವನೆ ಅತಿಯಾದರೆ ಆಗುವ ಅರೋಗ್ಯ ಸಮಸ್ಯೆಗಳು

Protein shakes

Vijayaprabha Mobile App free
  1. ಕಿಡ್ನಿ ಸಮಸ್ಯೆ
  2. ತೂಕ ಹೆಚ್ಚಳ
  3. ಅಜೀರ್ಣ ಸಮಸ್ಯೆ
  4. ಮೂತ್ರಪಿಂಡದಲ್ಲಿ ಕಲ್ಲು

1. Protein shakes ಅತಿಯಾದ ಸೇವನೆಯಿಂದ ಕಿಡ್ನಿ ಸಮಸ್ಯೆ

ಪ್ರೋಟೀನ್ ಶೇಕ್ ಸೇವನೆ ಹೆಚ್ಚಾದಷ್ಟು ದೇಹದಲ್ಲಿ ಪ್ರೋಟೀನ್ ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ಬಿಡುಗಡೆಯಾಗುವ ಹೆಚ್ಚಿನ ನೈಟ್ರೋಜನ್‌ ಅಂಶ ಬಿಡುಗಡೆಯಾಗುತ್ತದೆ. ಇದನ್ನು ಪರಿಷ್ಕರಿಸಲು ಕಿಡ್ನಿಗಳು ಬಹಳಷ್ಟು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುವುದರಿಂದ ನಿಮ್ಮ ಮೂತ್ರಪಿಂಡಗಳ ಮೇಲೆ ಕೆಲಸದ ಒತ್ತಡ ಹೆಚ್ಚಾಗಿ ಕಿಡ್ನಿಗೆ ಹಾನಿ ಉಂಟಾಗುತ್ತದೆ.

ಇದನ್ನೂ ಓದಿ: Vitamin D deficiency | ಕ್ಯಾನ್ಸರ್, ಹೃದ್ರೋಗಕ್ಕೆ ಕಾರಣವಾಗುವ ವಿಟಮಿನ್ ಡಿ ಕೊರತೆ ಯಾರಿಗೆ ಹೆಚ್ಚು ಕಾಡುತ್ತೆ? ಇಲ್ಲಿದೆ ಮಾಹಿತಿ

2. ತೂಕ ಹೆಚ್ಚಳ

ಅತಿಯಾದ ಪ್ರಮಾಣದ ಪ್ರೋಟೀನ್ ಶೇಕ್‌ಗಳು ದೇಹದ ತೂಕವನ್ನು ಹೆಚ್ಚಿಸುತ್ತದೆ. ಇವುಗಳಲ್ಲಿ ಅಮೈನೊ ಆಮ್ಲಗಳು ಹೆಚ್ಚಿರುತ್ತವೆ. ಕೆಲವು ಅಮೈನೋ ಆಸಿಡ್ ಅಂಶಗಳು ನಮ್ಮ ದೇಹಕ್ಕೆ ಶಕ್ತಿಯಾಗಿ ರೂಪುಗೊಂಡರೆ, ಇನ್ನು ಕೆಲವು ಕೆಟ್ಟ ಕೊಬ್ಬಿನ ಅಂಶಗಳಾಗಿ ರೂಪಾಂತರಗೊಳ್ಳಲಿದ್ದು, ಇದರಿಂದ ಬೊಜ್ಜು ಹೆಚ್ಚಾಗಿ ದೇಹದ ತೂಕ ಹೆಚ್ಚುತ್ತದೆ.

3. ಅಜೀರ್ಣ ಸಮಸ್ಯೆ

ಪ್ರೊಟೀನ್‌ ಶೇಕ್‌ಗಳಲ್ಲಿ ಹೆಚ್ಚಾಗಿ ಲ್ಯಾಕ್ಟೋಸ್ ಅಂಶ ಕಂಡು ಬರುತ್ತದೆ. ಕೆಲವರಿಗೆ ಲ್ಯಾಕ್ಟೋಸ್ ಅಂಶ ಅಲರ್ಜಿಯಾಗಿರುತ್ತದೆ. ಇದರಿಂದ ಜೀರ್ಣ ಕ್ರಿಯೆಗೆ ಸ೦ಬ೦ಧ ಪಟ್ಟ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಹೊಟ್ಟೆನೋವು ಮತ್ತು ಬೇಧಿಯ೦ತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: Poppy Seeds | ಸಮೃದ್ಧ ಪೋಷಕಾಂಶಗಳನ್ನು ಹೊಂದಿರುವ ಗಸಗಸೆಯ ಆರೋಗ್ಯ ಪ್ರಯೋಜನಗಳು

4. ಮೂತ್ರಪಿಂಡದಲ್ಲಿ ಕಲ್ಲು

ಹೆಚ್ಚುವರಿ ಪ್ರೋಟಿನ್ ಸೇವನೆಯಿಂದ ಮೂತ್ರಪಿಂಡದ ಕಲ್ಲು ಸಮಸ್ಯೆ ಎದುರಾಗಬಹುದು. ಪ್ರೋಟಿನ್ ಚಯಾಪಚಯದ ವೇಳೆ ಉತ್ಪತ್ತಿಯಾಗುವ ಹೆಚ್ಚಿನ ಕ್ಯಾಲ್ಸಿಯಂ ಹಾಗೂ ಯೂರಿಕ್ ಆಸಿಡ್‌ ಮೂತ್ರಪಿಂಡದಲ್ಲಿ ಕಲ್ಲು ಉತ್ಪತ್ತಿಯಾಗುವಂತೆ ಮಾಡುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.