Household items : ಹಣಕಾಸಿನ ಅಭಾವದಿಂದ, ಸತತ ಸೋಲಿನಿಂದ ಬೆಂದು ಹೋಗಿದ್ದರೆ ಈ ಎಲ್ಲಾ ಸಮಸ್ಯೆಗಳ ಮೂಲ ತಿಳಿದುಕೊಳ್ಳುವುದು ಮುಖ್ಯವಾಗಿದ್ದು, ಕೆಲವು ವಾಸ್ತು ನಿಯಮಗಳನ್ನು ಸಹ ಅನುಸರಿಸಬೇಕು. ಹೌದು, ನಿಮ್ಮ ಮನೆಯಲ್ಲಿ ಇಂತಹ ವಸ್ತುಗಳುನ್ನು (Household items) ಎಂದಿಗೂ ಖಾಲಿ ಇಡಬಾರದು. ಒಂದು ವೇಳೆ ಈ ವಸ್ತುಗಳು ಖಾಲಿಯಾದರೆ ಎದುರಾಗುತ್ತದೆ ದುರಾದೃಷ್ಟ.
ಸ್ನಾನಗೃಹದ ಬಕೆಟ್ (Bathroom bucket)
ಖಾಲಿ ಬಕೆಟ್ ಅನ್ನು ಸ್ನಾನಗೃಹದಲ್ಲಿ (Bathroom bucket) ಇಡಬಾರದು. ನೀರಿಲ್ಲದ ಬಕೆಟ್ನಿಂದ ನಕಾರಾತ್ಮಕ ಶಕ್ತಿಯು ತ್ವರಿತವಾಗಿ ಮನೆಯನ್ನು ಪ್ರವೇಶಿಸುತ್ತದೆ. ಅಲ್ಲದೆ ತಪ್ಪಿಯೂ ನೀವು ನಿಮ್ಮ ಬಾತ್ರೂಂನಲ್ಲಿ ಮುರಿದ ಅಥವಾ ಕಪ್ಪು ಬಕೆಟ್ ಅನ್ನು ಬಳಸಬೇಡಿ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಮತ್ತು ವಾಸ್ತು ದೋಷಗಳು ಎದುರಾಗುತ್ತವೆ.
ಇದನ್ನೂ ಓದಿ: Rashi bhavishya | ಈ ರಾಶಿಯವರ ಮದುವೆ ಅಡೆತಡೆ ನಿವಾರಣೆ, ವ್ಯಾಪಾರದಲ್ಲಿ ಅಡಚಣೆಯಿಂದ ಮುಕ್ತಿ!
ಪರ್ಸ್ (purse)
ನಿಮ್ಮ ಪರ್ಸ್ ಅನ್ನು ಎಂದಿಗೂ ಖಾಲಿ ಬಿಡಬಾರದು. ವಾಸ್ತು ಶಾಸ್ತ್ರ ಹೇಳುವಂತೆ, ಖಾಲಿ ಪರ್ಸ್ (empty purse) ಬಡತನ ಮತ್ತು ಒತ್ತಡವನ್ನು ತರುತ್ತದೆ. ಇದರಿಂದಾಗಿ ಜೀವನದಲ್ಲಿ ಮುಂದೆ ಸಾಗುವ ಬದಲು ಮನುಷ್ಯ ಹಿಮ್ಮೆಟ್ಟಲು ಆರಂಭಿಸಲಿದ್ದು, ಸೋಲನ್ನು ಅನುಭವಿಸುತ್ತಾನೆ.
ತಿಜೋರಿ
ತಿಜೋರಿಯನ್ನು ಎಂದಿಗೂ ಖಾಲಿ ಇಡಬಾರದು. ಅದರಲ್ಲಿ ಅಲ್ಪ ಪ್ರಮಾಣದ ಹಣ, ಒಂದು ಸಣ್ಣ ತುಂಡಾದರೂ ಬಂಗಾರದ ಒಡವೆ ಇಡಲೇ ಬೇಕಾಗಿದ್ದು, ಶಂಖ, ಕವಡೆ ಅಥವಾ ಗೋಮತಿ ಚಕ್ರವನ್ನು ಸಹ ಅದರಲ್ಲಿ ಇಡಬಹುದು.
ಇದನ್ನೂ ಓದಿ: Skanda Sashti | ಸ್ಕಂದ ಷಷ್ಠಿ ಕಾರ್ತಿಕೇಯನನ್ನು ಈ ರೀತಿ ಪೂಜಿಸಿದರೆ ಸಂತಾನ ಭಾಗ್ಯ
ಖಾಲಿ ಕಲಶ (empty urn)
ದೇವರ ಕೋಣೆಯಲ್ಲಿ ಎಂದಿಗೂ ಖಾಲಿ ಕಲಶವನ್ನು (empty urn) ಇಡಬಾರದು ಎಂದು ಶಾಸ್ತ್ರ ತಿಳಿಸುತ್ತದೆ. ಕಲಶದಲ್ಲಿ ಸ್ವಲ್ಪ ನೀರನ್ನು ಹಾಕಿಡಬೇಕು. ಅದರಲ್ಲಿ ಸ್ವಲ್ಪ ನೀರು, ಗಂಗಾಜಲ ಮತ್ತು ತುಳಸಿ ಎಲೆಗಳು ಇರಬೇಕು. ಇದನ್ನು ದೇವರ ಕೋಣೆಯಲ್ಲಿ ಇಡುವುದರಿಂದ ನಿಮ್ಮ ಕುಟುಂಬದ ಮೇಲೆ ದೇವರ ಅನುಗ್ರಹವಿರುತ್ತದೆ.
ಧಾನ್ಯಗಳು (Grains)
ಅಡುಗೆ ಮನೆಯಲ್ಲಿ ಆಹಾರ ತುಂಬಿಸಲು ಇಟ್ಟಿರುವಂತಹ ಸ್ಥಳದಲ್ಲಿ ದವಸ ಧಾನ್ಯಗಳು (Grains) ಖಾಲಿಯಾಗಬಾರದು. ಅಕ್ಕಿ ಹಾಗೂ ದವಸಧಾನ್ಯಗಳನ್ನು ಇಟ್ಟಿರುವಂತಹ ಪಾತ್ರೆ ಅಥವಾ ಡಬ್ಬಿ ಯಾವತ್ತೂ ಕೂಡ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಈ ರೀತಿ ಖಾಲಿಯಾದರೆ ನಿಮ್ಮ ಮನೆಗೆ ಕೆಟ್ಟ ದಿನಗಳು ಆರಂಭ ಆಗುವ ಮುನ್ಸೂಚನೆ ಎಂಬುದಾಗಿ ಹೇಳಲಾಗುತ್ತದೆ.
ಇದನ್ನೂ ಓದಿ: Rashi bhavishya 2025 | 2025ರಲ್ಲಿ ಈ ರಾಶಿಗಳಿಗೆ ಇದೆ ಮದುವೆ ಯೋಗ




