ದೀಪಾವಳಿ ಹಬ್ಬದ ಸಮಯದಲ್ಲಿ ರಾಜ್ಯದಲ್ಲಿರುವ ಪೊಲೀಸ್ (State Police) ಕುಟುಂಬಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು,ರಾಜ್ಯ ಪೊಲೀಸರ ಗುಂಪು ವಿಮಾ ಯೋಜನೆಯ (Group Insurance Plan) ಮೊತ್ತವನ್ನು ಏರಿಕೆ ಮಾಡಿ ಆದೇಶ ನೀಡಿದೆ.
ಹೌದು, ರಾಜ್ಯ ಸರ್ಕಾರವು ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್ ನೀಡಿದ್ದು, ಪೊಲೀಸರಿಗೆ ವಿಶೇಷ ಗುಂಪು ವಿಮಾ ಯೋಜನೆ ಮೊತ್ತವನ್ನು 20 ಲಕ್ಷದಿಂದ ರೂ. 50 ಲಕ್ಷಕ್ಕೆ ಹೆಚ್ಚಳ ಮಾಡಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆದೇಶ ಹೊರಡಿಸಿದೆ.
ಇಲ್ಲಿಯವರೆಗೂ ಯೋಜನೆಯ ಮೊತ್ತ ₹20 ಲಕ್ಷ ಆಗಿತ್ತು. ಈಗ ಈ ಮೊತ್ತವನ್ನು ₹50 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು, ಕರ್ತವ್ಯದಲ್ಲಿ ಇರುವಾಗ ಪೊಲೀಸರು ಆಕಸ್ಮಿಕ / ಅಪಘಾತದಲ್ಲಿ ಮೃತಪಟ್ಟರೆ ನೀಡುವ ವಿಮಾ ಮೊತ್ತ ಇದಾಗಿದೆ. ಫಾಲೋವರ್, PC ಇಂದ DG & IGPವರೆಗೆ ಈ ವಿಮಾ ಯೋಜನೆ ಅನ್ವಯವಾಗಲಿದೆ.
ಇದನ್ನೂ ಓದಿ: ರಾಜ್ಯದ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಘೋಷಣೆ; ಈ ದಿನ ಮತದಾನ..!
ಈಗ ಚಾಲ್ತಿಯಲ್ಲಿರುವ ಗುಂಪು ವಿಮಾನ ಯೋಜನೆ ಅಕ್ಟೋಬರ್ 10ಕ್ಕೆ ಕೊನೆಗೊಂಡಿದ್ದು, ಅಕ್ಟೋಬರ್ 11 ರಿಂದ ಅನ್ವಯವಾಗುವಂತೆ ರಾಜ್ಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಗುಂಪು ವಿಮಾನ ಮೊತ್ತ 50 ಲಕ್ಷ ರೂಪಾಯಿಯನ್ನು ನೇರವಾಗಿ ಇಲಾಖೆಯಿಂದಲೇ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
2023ರಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಂದು ಗುಂಪು ವಿಮಾ ಮೊತ್ತವನ್ನು ಹೆಚ್ಚಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಸ್ವಾಭಾವಿಕ ಮರಣಗಳಾದ ಕಾಯಿಲೆ, ಹೃದಯಾಘಾತ ಹಾಗೂ ಆತ್ಮಹತ್ಯೆಯಂಥ ಪ್ರಕರಣಗಳನ್ನು ಇದರಲ್ಲಿ ಹೊರತುಪಡಿಸಲಾಗಿದೆ.
ವಿಮಾ ಮೊತ್ತವನ್ನು ಪಡೆಯುವುದು ಹೇಗೆ ..?
ಈ ವಿಮಾ ಮೊತ್ತವನ್ನು ಪಡೆಯಲು ಘಟಕಾಧಿಕಾರಿಗಳು ಕರ್ತವ್ಯದ ಮೇಲಿರುವಾಗ ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಮಾಹಿತಿಯನ್ನು ಈ-ಮೇಲ್/ಫ್ಯಾಕ್ಸ್ ssactco@ksp.gov.in ಮೂಲಕ ಅಥವಾ ಖುದ್ದಾಗಿ ನಿಗದಿತ ಸಮಯದೊಳಗೆ ನೀಡಬೇಕು.
ಇದನ್ನೂ ಓದಿ: ಮಾರಣಾಂತಿಕ ಮೆದುಳಿನ ಗೆಡ್ಡೆಯ ರೋಗ ಲಕ್ಷಣಗಳೇನು? ಚಿಕಿತ್ಸೆ ಹೇಗೆ..? ಸೇವಿಸಬೇಕಾದ ಆಹಾರಗಳು..!
ಇದರಲ್ಲಿ, ಕ್ಲೈಮ್‌ಗೆ ಸಂಬಂಧಿಸಿದಂತೆ ಪ್ರಕರಣವು ಅರ್ಹ ಪ್ರಕರಣವೇ ಎಂಬ ಬಗ್ಗೆ ಪರಿಶೀಲಿಸಿ, ಸಂಪೂರ್ಣ ಮಾಹಿತಿಯನ್ನು ಮೇಲಧಿಕಾರಿಗಳ ಶಿಫಾರಸಿನೊಂದಿಗೆ ಅಗತ್ಯ ದಾಖಲೆಗಳನ್ನು 30 ದಿನಗಳ ಒಳಗಾಗಿ ಕಚೇರಿಗೆ ಸಲ್ಲಿಸಬೇಕಾಗಿದ್ದು, ನಿಗದಿತ ಸಮಯದಲ್ಲಿ ಸಲ್ಲಿಕೆ ಮಾಡದೇ ವಿನಾ ಕಾರಣ ವಿಳಂಬ ಮಾಡಿದಲ್ಲಿ ಅದಕ್ಕೆ ಘಟಕಾಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆದೇಶ ಹೊರಡಿಸಿದೆ.