Brain tumor : ಮೆದುಳಿನಲ್ಲಿ ಅದರ ಸಮೀಪದಲ್ಲಿ ಜೀವಕೋಶಗಳ ಬೆಳವಣಿಗೆ ಆಗುವುದನ್ನು ಮೆದುಳಿನ ಗೆಡ್ಡೆ (Brain tumor) ಎನ್ನಲಾಗುತ್ತದೆ. ಮೆದುಳಿನ ಅಂಗಾಂಶವಲ್ಲದೆ ಹತ್ತಿರದ ನರಗಳು, ಪಿಟ್ಯುಟರಿ ಗ್ರಂಥಿ, ಪೀನಲ್ ಗ್ರಂಥಿ ಮತ್ತು ಮೆದುಳಿನ ಮೇಲ್ಮ ಮೇಲೆ ಕಾಣಿಸಿಕೊಳ್ಳುತ್ತವೆ.
ಮೆದುಳಿನ ಗೆಡ್ಡೆ ಪತ್ತೆ ಹಚ್ಚುವುದು ಹೇಗೆ? (How is a brain tumor diagnosed)
ಬ್ರೇನ್ ಟ್ಯೂಮರ್ ಎಂಆರ್ ಐ ಸ್ಕ್ಯಾನ್, ಸಿಎಟಿ ಸ್ಕ್ಯಾನ್ ಮೂಲಕ ಮೆದುಳಿನ ಗೆಡ್ಡೆ ಪತ್ತೆ ಮಾಡಬಹುದಾಗಿದ್ದು, ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟೋಸ್ಕೋಪಿ ಮೂಲಕ ಗೆಡ್ಡೆಗಳ ರಾಸಾಯನಿಕ ಪ್ರೊಫೈಲ್ ಅನ್ನು ಪರೀಕ್ಷಿಸಬಹುದು. ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಕೂಡ ಗೆಡ್ಡೆಯನ್ನು ಪತ್ತೆಹಚ್ಚಬಹುದಾಗಿದೆ.
ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ಹೃದಯದ ಆರೋಗ್ಯವನ್ನು ಹಾಳು ಮಾಡುತ್ತವೆ..!
ಬ್ರೇನ್ ಟ್ಯೂಮರ್ ಲಕ್ಷಣಗಳು (Brain tumor symptoms)
ಸೋಂಕಿತ ವ್ಯಕ್ತಿಗೆ ಆಗಾಗ ತಲೆನೋವು ಬರುವುದು. ಕಣ್ಣು ಮಂಜಾಗುವುದು, ದೃಷ್ಟಿ ಕಡಿಮೆಯಾಗುವುದು. ವಾಂತಿ ಹಾಗೂ ವಾಕರಿಕೆ ಹೆಚ್ಚಾಗಿ ಆಗುತ್ತದೆ. ಕಿವಿ ಕೇಳಿಸದೇ ಇರುವುದು. ಆಗಾಗ ವಿಪರೀತ ಸುಸ್ತಾಗುವುದು. ಹಾಗೂ ಮನುಷ್ಯನಿಗೆ ಕಿವಿ ಕೇಳಿಸದೆ ಇರಬಹುದು.
ಮೆದುಳಿನ ಗೆಡ್ಡೆಗೆ ಚಿಕಿತ್ಸೆ ಹೇಗೆ? (How is a brain tumor treated)
ಮೆದುಳಿನ ಗೆಡ್ಡೆಯ ತೀವ್ರತೆಯನ್ನು ಆಧಾರಿಸಿ ಈ ಮೆದುಳಿನ ಗೆಡ್ಡೆಗೆ ಶಸ್ತ್ರಚಿಕಿತ್ಸೆ, ವಿಕಿರಣ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳನ್ನು ಚಿಕಿತ್ಸೆಯನ್ನು ವೈದ್ಯರು ನೀಡುತ್ತಾರೆ. ಮೆದುಳಿನ ಗೆಡ್ಡೆಯನ್ನು ಸೂಚಿಸುವ ಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚಿ ಆರಂಭಿಕ ಚಿಕಿತ್ಸೆ ಪಡೆಯುವುದರಿಂದ ಮೆದುಳಿನ ಗಡ್ಡೆ ಹರಡುವುದನ್ನು ತಡೆಯಬಹುದು.
ಅರಿಶಿನ
ಅರಿಶಿನ ಔಷಧೀಯ ಗುಣಗಳನ್ನು ಹೊಂದಿದ್ದು, ಆಮರ್ನ ಕಾಯಿಲೆ, ಸ್ವಲೀನತೆ, ಕ್ಯಾನ್ಸರ್, ಮಧುಮೇಹ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಅನೇಕ ಸಾಮಾನ್ಯ ಕಾಯಿಲೆಗಳಿಗೆ ಅರಿಶಿನವನ್ನು ಪರಿಹಾರವಾಗಿ ಬಳಸಬಹುದು.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ಲಕ್ಷಣಗಳೇನು..? ತಡೆಗಟ್ಟುವುದು ಹೇಗೆ..? ಸೇವಿಸಬೇಕಾದ ಆಹಾರಗಳು..!
ಮೊಟ್ಟೆ
ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುವ ಪೋಷಕಾಂಶಗಳನ್ನು ಹೊಂದಿವೆ, ಹಾಗೂ ಉತ್ತಮ ಪ್ರೋಟಿನ್ ಮೂಲವಾಗಿದೆ. ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳು ಕೂಡ ಇದ್ದು, ಇದು ದೇಹದಲ್ಲಿನ ಉರಿಯೂತಗಳನ್ನು ಕಡಿಮೆ ಮಾಡುತ್ತದೆ.
ಟೊಮ್ಯಾಟೋ
ಟೊಮ್ಯಾಟೋ ಉತ್ಕರ್ಷಗಳ ವಿರೋಧಕಗಳನ್ನು ಹೊಂದಿರುತ್ತವೆ, ಇದು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇವು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಅರಿವಿನ ಕಾರ್ಯಕ್ಕೆ ಸಹಾಯ ಮಾಡುತ್ತವೆ.