Mauni amavasya : ಈ ಬಾರಿ ಮೌನಿ ಅಮಾವಾಸ್ಯೆಯ೦ದು (Mauni amavasya) ಸೂರ್ಯ, ಬುಧ & ಚ೦ದ್ರ ಮಕರ ರಾಶಿಯಲ್ಲಿ ಒಟ್ಟಿಗೆ ಕುಳಿತು ತ್ರಿವೇಣಿ ಯೋಗವನ್ನು ರೂಪಿಸುತ್ತವೆ. ಅದೇ ಸಮಯದಲ್ಲಿ, ಗುರುವಿನ ಒಂಬತ್ತನೇ ದರ್ಶನವೂ ಎಲ್ಲರ ಮೇಲೆ ಇರಲಿದ್ದು, ಶುಕ್ರನು ಮೀನ ರಾಶಿಯಲ್ಲಿರುವುದರಿಂದ, ರಾಜ ಯೋಗವೂ ಇರಲಿದೆ.
ಇದನ್ನೂ ಓದಿ: Rashi bhavishya | ಮಂಗಳವಾರದ ರಾಶಿ ಭವಿಷ್ಯ, 28 ಜನವರಿ 2025
ಮೌನಿ ಅಮಾವಾಸ್ಯೆ ತಿಥಿ (Mauni Amavasya Tithi)
ದೃಕ್ ಪಂಚಾಂಗದ ಪ್ರಕಾರ, ಮಾಘ ತಿಂಗಳ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿ ಜನವರಿ 28 ರಂದು ಸಂಜೆ 07:35 ಕ್ಕೆ ಪ್ರಾರಂಭವಾಗಿ, ಜನವರಿ 29ರ ಬುಧವಾರ ಸಂಜೆ 06:05 ಕ್ಕೆ ಕೊನೆಗೊಳ್ಳುತ್ತದೆ. ಈ ದಿನದಂದು ಸಿದ್ದಿ ಯೋಗವನ್ನು ಸಹ ರೂಪಿಸಲಾಗುತ್ತಿದೆ.
ಪವಿತ್ರ ಸ್ನಾನದ ಮುಹೂರ್ತ (Muhurta)
ಮೌನಿ ಅಮಾವಾಸ್ಯೆಯ ದಿನದ೦ದು, ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡುವುದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಜನವರಿ 29 ರಂದು ಬೆಳಿಗ್ಗೆ 5.25 ರಿಂದ 6.18 ರವರೆಗೆ ಬ್ರಹ್ಮ ಮುಹೂರ್ತ ಇರಲಿದೆ. ಈ ಸಮಯದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ & ಸ್ನಾನದ ನಂತರ ದಾನ ಕಾರ್ಯಗಳನ್ನು ಮಾಡಬಹುದು.
ಇದನ್ನೂ ಓದಿ: Rashi bhavishya | ಮೌನಿ ಅಮಾವಾಸ್ಯೆ ನಂತರ ಈ 5 ರಾಶಿಗೆ ಬಂಪರ್ ಲಾಟರಿ
ಮೌನಿ ಅಮಾವಾಸ್ಯೆ ಪೂಜಾ ವಿಧಾನ (Mauni amavasya puja method)
- ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು
- ಮನೆಯ ದೇವರ ಕೋಣೆಯಲ್ಲಿ ದೀಪವನ್ನು ಬೆಳಗಿಸಿ
- ಸೂರ್ಯ ದೇವರಿಗೆ ಅರ್ಥ್ಯವನ್ನು ಅರ್ಪಿಸಿ, ಉಪವಾಸವನ್ನು ಮು೦ದುವರಿಸಿ
- ಈ ದಿನ, ಪೂರ್ವಜರಿಗೆ ನೈವೇದ್ಯ & ದಾನಗಳನ್ನು ಅರ್ಪಿಸಿ
- ಈ ಶುಭ ದಿನದಂದು ಸಾಧ್ಯವಾದಷ್ಟು ದೇವರನ್ನು ಧ್ಯಾನಿಸಿ
- ಇಂದು ವಿಷ್ಣುವಿನ ಆರಾಧನೆಗೆ ವಿಶೇಷ ಮಹತ್ವವಿದೆ