Mauni Amavasya 2025: ಮಾಘ ಮಾಸದ ಅಮಾವಾಸ್ಯೆಯನ್ನು ಪುಷ್ಯ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ (Mauni Amavasya) ಎ೦ದು ಕರೆಯಲಾಗುತ್ತದೆ. ಈ ದಿನ ಪೂಜೆ ಮತ್ತು ದಾನ ಧರ್ಮಗಳನ್ನು ಮಾಡುವುದರಿ೦ದ ಪೂರ್ವಜರ ಆಶೀರ್ವಾದ ಪಡೆಯಬಹುದು. ಆದರೆ ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು ಎ೦ದು ತಿಳಿದುಕೊಳ್ಳಿ.
ಇದನ್ನೂ ಓದಿ: Mauni Amavasya | ಮೌನಿ ಅಮಾವಾಸ್ಯೆಯ ಶುಭ ಮುಹೂರ್ತ, ಪೂಜೆ ವಿಧಾನ
ಮೌನಿ ಅಮಾವಾಸ್ಯೆ ಏನು ಮಾಡಬೇಕು (What to do on Mauni Amavasya 2025)
ಉಪವಾಸ
ಈ ದಿನ ವಿಶೇಷವಾಗಿ ಉಪವಾಸ ಮಾಡಿದರೆ ವಿಶೇಷ ಫಲ ದೊರಕುತ್ತದೆ. ಉಪವಾಸ ಮಾಡುವವರು ಶಿವ ಮತ್ತು ಪಾರ್ವತಿ ದೇವಿಯನ್ನು ಪೂಜಿಸಬೇಕು ಸಾಧ್ಯವಾದರೆ ಶಿವ ಮತ್ತು ವಿಷ್ಣು ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಮಾಡಿಸಿ.
ದಾನ ಮಾಡಿ
ಈ ದಿನ ದಾನ ಮಾಡುವುದು ಒಳ್ಳೆಯದು. ಬ್ರಾಹ್ಮಣರಿಗೆ, ಗುರುಜನರಿಗೆ, ಯತಿಗಳಿಗೆ ಮತ್ತು ಬಡವರಿಗೆ ದಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದ್ದು, ಈ ದಿನದಂದು ಎಳ್ಳೆಣ್ಣೆ, ಅಕ್ಕಿ ಮತ್ತು ನೆಲ್ಲಿಕಾಯಿಯನ್ನು ದಾನ ಮಾಡಬಹುದು.
ಇದನ್ನೂ ಓದಿ: Rashi bhavishya | ಮಂಗಳವಾರದ ರಾಶಿ ಭವಿಷ್ಯ, 28 ಜನವರಿ 2025
ಪವಿತ್ರ ಸ್ನಾನ
ಮೌನಿ ಅಮಾವಾಸ್ಯೆಯ ದಿನದ೦ದು ನದಿಯಲ್ಲಿ ಸ್ನಾನ ಮಾಡುವುದು ಉತ್ತಮ ಫಲಗಳನ್ನು ನೀಡುತ್ತದೆ. ಈ ದಿನ ಪ್ರಯಾಗದ ಮಹಾಕು೦ಭ ಮೇಳದಲ್ಲಿ ಸ್ನಾನ ಮಾಡುವುದು ಅತ್ಯಂತ ಪ್ರಶಸ್ತ ಎ೦ದು ಪರಿಗಣಿಸಲಾಗಿದೆ.
ಪಿತೃ ದೋಷ ನಿವಾರಣೆಗಾಗಿ
- ಹಸುವಿನ ಹಾಲನ್ನು ದಾನ ಮಾಡಿ.
- ಅಗತ್ಯವಿರುವವರಿಗೆ ಸಾಸಿವೆ ಎಣ್ಣೆಯನ್ನು ದಾನ ಮಾಡಿ.
ಇದನ್ನೂ ಓದಿ: Rashi bhavishya | ಮೌನಿ ಅಮಾವಾಸ್ಯೆ ನಂತರ ಈ 5 ರಾಶಿಗೆ ಬಂಪರ್ ಲಾಟರಿ
ಮೌನಿ ಅಮಾವಾಸ್ಯೆ ಏನು ಮಾಡಬಾರದು (What not to do on Mauni Amavasya 2025)
- ಉಪವಾಸ ಮಾಡುವವರು ಹೆಚ್ಚು ಮಾತನಾಡಬಾರದು.
- ಮಾಂಸಾಹಾರ ಸೇವನೆ ಮಾಡಬಾರದು.
- ಅಕ್ಕಿಯಿಂದ ಮಾಡಿದ ಯಾವುದೇ ಆಹಾರಗಳನ್ನು ಕೂಡ ಸೇವಿಸಬಾರದು.