ಶ್ರಮ್ ಯೋಗಿ ಮಾನ್-ಧನ್ ಯೋಜನೆ : ಚಾಲಕರು, ರಿಕ್ಷಾ ಚಾಲಕರು, ಚಮ್ಮಾರರು, ಟೈಲರ್‌ಗಳು, ಕಾರ್ಮಿಕರು, ಮನೆ ಕೆಲಸಗಾರರು, ಇಟ್ಟಿಗೆ ಗೂಡು ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ರಕ್ಷಣೆ ಕಲ್ಪಿಸಲು ಪಿಂಚಣಿ ಸೌಲಭ್ಯವನ್ನು ವಿಸ್ತರಿಸಿ ಭಾರತ ಸರ್ಕಾರವು 2019 ರಲ್ಲಿ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ತಿಂಗಳಿಗೆ ರೂ. 15,000ಕ್ಕಿಂತ ಕಡಿಮೆ ಆದಾಯವಿರುವ ಕಾರ್ಮಿಕರಿಗೆ 60 ವರ್ಷದ ನಂತರ ಕನಿಷ್ಠ 3,000 ರೂ.ಗಳ ಮಾಸಿಕ ಪಿಂಚಣಿ ನೀಡಲಾಗುತ್ತದೆ.
ಪಿಎಮ್-ಎಸ್‌ವೈ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆಗೆ ಅರ್ಜಿ ಸಲ್ಲಿಸಲು ಮೊಬೈಲ್ ಫೋನ್, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕಾಗಿದ್ದು, ಅಗತ್ಯವಿರುವ ಈ ಎಲ್ಲಾ ದಾಖಲೆಗಳೊಂದಿಗೆ ಹತ್ತಿರದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಅಥವಾ ಜನಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೋಂದಣಿ ಮಾಡಬಹುದು.
ಇದನ್ನೂ ಓದಿ: ಹಾಲಿನ ಮಾರುಕಟ್ಟೆಗೂ ಪೆಟ್ಟು ಬೀಳೋ ಶಂಕೆ; ‘ನಂದಿನಿ ದೋಸೆ ಹಿಟ್ಟು’ ಉತ್ಪಾದನೆ ಕೈ ಬಿಟ್ಟ ಕೆಎಂಎಫ್
ಪಿಎಮ್-ಎಸ್‌ವೈ ಯೋಜನೆಯಷ್ಟೇ ಸಮಾನ ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡುತ್ತದೆ
ಪಿಎಮ್-ಎಸ್‌ವೈ ಯೋಜನೆಯ ಫಲಾನುಭವಿ ಕೊಡುಗೆ ಜೊತೆಗೆ ಸಮಾನ ಪ್ರಮಾಣದ ಮೊತ್ತವನ್ನು ಕೇಂದ್ರ ಸರ್ಕಾರವು ನೀಡುತ್ತದೆ. ಹೌದು, ಫಲಾನುಭವಿಯು ತನ್ನ 20 ವರ್ಷ ವಯಸ್ಸಿನಲ್ಲಿ ಯೋಜನೆಯನ್ನು ಪಾರಂಭಿಸಿದರೆ, 60 ವರ್ಷದವರೆಗೆ ತಿಂಗಳಿಗೆ ರೂ 61 ನೀಡಬೇಕಾಗಿರುತ್ತದೆ.
ಕೇಂದ್ರ ಸರ್ಕಾರ ಕೂಡ ಇಷ್ಟೇ ಪ್ರಮಾಣದ ಸಮಾನ ಮೊತ್ತವನ್ನು ಪ್ರತಿ ತಿಂಗಳು ಭರಿಸುವುದಲ್ಲದೆ, ಚಂದಾದಾರರು ನಿರಂತರವಾಗಿ ಕೊಡುಗೆ ನೀಡಲು ವಿಫಲವಾದರೆ ಪಾವತಿಸಬೇಕಾಗುವ ಒಟ್ಟಾರೆ ಮೊತ್ತವನ್ನು ಪೆನಾಲ್ಟಿ ಶುಲ್ಕದೊಂದಿಗೆ ಪಾವತಿಸುವ ಮೂಲಕ ಕ್ರಮ ಬದ್ಧಗೊಳಿಸಬಹುದು
ಇದನ್ನೂ ಓದಿ: Gold Investment | ಚಿನ್ನದ ಮೇಲೆ ಹೂಡಿಕೆ ಏಕೆ ಮಾಡಬೇಕು? ಉತ್ತಮ ಲಾಭ ಗಳಿಸಲು ಯಾವ ರೀತಿ ಚಿನ್ನ ಖರೀದಿ ಮಾಡಬೇಕು?
ಶ್ರಮ್ ಯೋಗಿ ಮಾನ್-ಧನ್ ಯೋಜನೆಯ ಸೌಲಭ್ಯಗಳು
ಕೇಂದ್ರ ಸರ್ಕಾರವು ಶ್ರಮ್ ಯೋಗಿ ಮಾನ್-ಧನ್ ಯೋಜನೆಯ ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಾವತಿಸಬೇಕು. 60 ವರ್ಷ ಪೂರ್ಣಗೊಂಡ ನಂತರ ಫಲಾನುಭವಿಯು ತಿಂಗಳಿಗೆ ರೂ.3,000 ಮಾಸಿಕ ಪಿಂಚಣಿಯನ್ನು ಪಡೆಯಬಹುದು.
ಪಿಂಚಣಿ ಆರಂಭಗೊಂಡ ನಂತರ ಒಂದು ವೇಳೆ ಚಂದಾದಾರರು ಮೃತ ಪಟ್ಟಲ್ಲಿ ಅವರ ಪತ್ನಿ,ಪತಿ ಪಿಂಚಣಿಯ ಶೆ.50 ರಷ್ಟು ಪಡೆಯಲು ಅರ್ಹರು.
ಇನ್ನು, ಶ್ರಮ್ ಯೋಗಿ ಮಾನ್-ಧನ್ ಯೋಜನೆಯ ಫಲಾನುಭವಿಯು ನಿರಂತರವಾಗಿ ವಂತಿಕೆಯನ್ನು ಪಾವತಿಸಿದ್ದರೆ, 60 ವರ್ಷದ ಒಳಗಾಗಿ ಮೃತ ಪಟ್ಟಲ್ಲಿ ಅವನು/ ಅವಳ ಸಂಗಾತಿಯು ತದನಂತರವೂ ಯೋಜನೆಗೆ ಸೇರಬಹುದಾಗಿದ್ದು ವಂತಿಕೆಯನ್ನು ಪಾವತಿಸಿ ಮುಂದುವರಿಸಬಹುದಾಗಿರುತ್ತದೆ.
ಪಿಎಮ್-ಎಸ್‌ವೈಎಂ ಯೋಜನೆಯಡಿಯಲ್ಲಿ ಕಾರ್ಡ್ ಪಡೆಯುವುದು ಹೇಗೆ?
ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿರುವ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆಯ ಚಂದಾದಾರರು ಒಂದು ವೇಳೆ ತೀರಿಕೊಂಡರೆ, ಫಲಾನುಭವಿಗಳ ಸಂಗಾತಿಯು ಕುಟುಂಬದ ಸದಸ್ಯರಾಗಿ ಫಲಾನುಭವಿ ಪಡೆಯುವ 50% ಪಿಂಚಣಿ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಪಿಎಮ್-ಎಸ್‌ವೈಎಂ ವೆಬ್ಸೈಟ್ ನಲ್ಲಿ ಕಾರ್ಡ್ ಅನ್ನು ಪಡೆಯಬಹುದು. ಈ ಕುರಿತ ಹೆಚ್ಚಿನ ಮಾಹಿತಿಯನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: RG Tv Kannada