ಹಾಲಿನ ಮಾರುಕಟ್ಟೆಗೂ ಪೆಟ್ಟು ಬೀಳೋ ಶಂಕೆ; ‘ನಂದಿನಿ ದೋಸೆ ಹಿಟ್ಟು’ ಉತ್ಪಾದನೆ ಕೈ ಬಿಟ್ಟ ಕೆಎಂಎಫ್

ಬೆಂಗಳೂರು: ಕೆಎಂಎಫ್ ಗುಣಮಟ್ಟಕ್ಕೆ ಅಂಜಿ “ನಂದಿನಿ ದೋಸೆ ಹಿಟ್ಟು (Nandini Dosa Batter) ” ಉತ್ಪಾದನೆ ನಿರ್ಧಾರವನ್ನು ಕೈ ಬಿಟ್ಟಿದೆ ! ಹೌದು, ನಂದಿನಿ ದೋಸೆ ಹಿಟ್ಟು ಉತ್ಪಾದನೆಯಲ್ಲಿ ಒಂದು ವೇಳೆ ಗುಣಮಟ್ಟ ಕಾಪಾಡಿಕೊಳ್ಳಲು…

Nandini Dosa Batter

ಬೆಂಗಳೂರು: ಕೆಎಂಎಫ್ ಗುಣಮಟ್ಟಕ್ಕೆ ಅಂಜಿ “ನಂದಿನಿ ದೋಸೆ ಹಿಟ್ಟು (Nandini Dosa Batter) ” ಉತ್ಪಾದನೆ ನಿರ್ಧಾರವನ್ನು ಕೈ ಬಿಟ್ಟಿದೆ !

ಹೌದು, ನಂದಿನಿ ದೋಸೆ ಹಿಟ್ಟು ಉತ್ಪಾದನೆಯಲ್ಲಿ ಒಂದು ವೇಳೆ ಗುಣಮಟ್ಟ ಕಾಪಾಡಿಕೊಳ್ಳಲು ವಿಫಲವಾದರೆ ನಂದಿನಿ ಹಾಲಿನ ಮಾರುಕಟ್ಟೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಭಯ ಕಾಡುತ್ತಿದೆ ಕೆಎಂಎಫ್ ಗೆ.

Nandini Dosa Batter

Vijayaprabha Mobile App free

ಗುಣಮಟ್ಟದ ದೋಸೆ ಹಿಟ್ಟು ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಅದೇ ಗುಣಮಟ್ಟ ಕಾಯ್ದುಕೊಳ್ಳುವುದು ಬಹು ದೊಡ್ಡ ಸವಾಲು ಎದುರಾಗುವ ಹಿನ್ನಲೆಯಲ್ಲಿ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳ (KMF) ನಂದಿನಿ ದೋಸೆ ಹಿಟ್ಟು ಉತ್ಪಾದನೆ ನಿರ್ಧಾರದಿಂದ ಹಿಂದೆ ಸರಿದಿದೆ.

ಇದನ್ನೂ ಓದಿ: Gold Investment | ಚಿನ್ನದ ಮೇಲೆ ಹೂಡಿಕೆ ಏಕೆ ಮಾಡಬೇಕು? ಉತ್ತಮ ಲಾಭ ಗಳಿಸಲು ಯಾವ ರೀತಿ ಚಿನ್ನ ಖರೀದಿ ಮಾಡಬೇಕು?

‘ನಂದಿನಿ’ ಬ್ರ್ಯಾಂಡ್ ವೃದ್ಧಿಸಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವತ್ತ ಹೆಜ್ಜೆ ಇರಿಸಿದ್ದ ಕೆಎಂಎಫ್‌, ಬೆಂಗಳೂರಿನಂತಹ ಮಹಾ ನಗರಗಳನ್ನು ಗುರಿತಾಗಿಸಿಕೊಂಡು ನಂದಿನಿ ಹೆಸರಿನಲ್ಲಿ ಮಾರುಕಟ್ಟೆಗೆ ದೋಸೆ ಹಿಟ್ಟು ಪರಿಚಯಿಸಲು ಮುಂದಾಗಿತ್ತು.

ಆದರೆ, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಗುಣಮಟ್ಟ ಕಂಡುಕೊಂಡಂತೆ ದೋಸೆಹಿಟ್ಟು ಗುಣಮಟ್ಟ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ಕೆಎಂಎಫ್ ಆಡಳಿತ ಮಂಡಳಿ ನಂದಿನಿ ದೋಸೆಹಿಟ್ಟು ಉತ್ಪಾದನೆ ಮುನ್ನವೇ ಮುನ್ನೆಚ್ಚರಿಕೆ ವಹಿಸಿದಂತಿದೆ. ಹಾಗಾಗಿ ಈಗ ದೋಸೆ ಹಿಟ್ಟು ಮಾರಾಟ ನಿರ್ಧಾರದಿಂದ ಹಿಂದೆ ಸರಿದಿದೆ.

ಇದನ್ನೂ ಓದಿ: PF withdrawal rules | ಪಿಎಫ್ ಹಿಂಪಡೆಯಲು ಹೊಸ ನಿಯಮಗಳು; ಇನ್ಮುಂದೆ ಸುಲಭವಾಗಿ ಕ್ಲೈಮ್ ಇತ್ಯರ್ಥ!

“ದೋಸೆ ಹಿಟ್ಟಿನ ಗುಣಮಟ್ಟ ಕಾಯ್ದುಕೊಳ್ಳದೇ ಇದ್ದರೆ ನಂದಿನಿ ಬ್ರ್ಯಾಂಡ್‌ಗೆ ಕೆಟ್ಟ ಹೆಸರು ಬರುತ್ತದೆ. ಇದು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕವಿದ್ದು, ಈ ಕಾರಣಕ್ಕೆ ನಂದಿನಿ ಬ್ರ್ಯಾಂಡ್‌ನ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ” ಎಂಡಿದ್ದಾರೆ ಸ್ವತಃ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.