Ration Card EKYC : ಆಧಾರ್ ದೃಢೀಕರಣ(ಇ-ಕೆವೈಸಿ) ಮಾಡಿಸದೇ ಇರುವ ಪಡಿತರ ಚೀಟಿದಾರರು ನ.30 ರೊಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.
ಹೌದು, ಆಧಾರ್ ದೃಢೀಕರಣ(ಇ-ಕೆವೈಸಿ) ಮಾಡಿಸದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್ ತಿಂಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು. ಹಾಗಾಗಿ ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಸದಸ್ಯರೂ ಸಹ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ಹೆಬ್ಬೆರಳು ನೀಡಿ ಹೆಸರು ಮರು ನೋಂದಾವಣೆ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Ration card : ರೇಷನ್ ಕಾರ್ಡ್‌ನಲ್ಲಿ ಪತ್ನಿ, ಮಕ್ಕಳ ಹೆಸರು ಸೇರಿಸಲು ಈ ದಾಖಲೆಗಳು ಕಡ್ಡಾಯ; ಸೇರ್ಪಡೆ ಮಾಡುವುದು ಹೇಗೆ ಗೊತ್ತೇ?
Ration Card EKYC : ರೇಷನ್ ಕಾರ್ಡ್‌ಗೆ ಇ-ಕೆವೈಸಿ ಮಾಡಿಸುವುದು ಹೇಗೆ..?
ಇ-ಕೆವೈಸಿ ಪ್ರಕ್ರಿಯೆ ಪಡಿತರ ಚೀಟಿದಾರರು, ನ್ಯಾಯಬೆಲೆ ಅಂಗಡಿಗೆ ಹೋಗಿ ಇ-ಕೆವೈಸಿ ಮಾಡಿಸಬಹುದಾಗಿದ್ದು, ಅಂಗಡಿಯವರು ಪಿಒಎಸ್ ಯಂತ್ರದಿಂದ ಬೆರಳಚ್ಚು ತೆಗೆದುಕೊಳ್ಳುವ ಮೂಲಕ ಇ-ಕೆವೈಸಿಯನ್ನು (E-KYC) ನವೀಕರಿಸುತ್ತಾರೆ. ಇ-ಕೆವೈಸಿ ಅಂದರೆ ಆಧಾರ್ ಆಧರಿತ ಹೆಬ್ಬೆಟ್ಟಿನ ದೃಢೀಕರಣವಾಗಿದೆ.
Ration Card EKYC : ಗ್ರಾಮ ಒನ್‌ನಲ್ಲೂ ಸಾಧ್ಯ
ಗ್ರಾಹಕರು ನ್ಯಾಯಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸಲು ಸಾಧ್ಯವಾಗದೇ ಇದ್ದಲ್ಲಿ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಓಟಿಪಿ ಆಧಾರಿತವಾಗಿಯೂ ಇ-ಕೆವೈಸಿಯನ್ನು ಮಾಡಿಕೊಳ್ಳಬಹುದು.
ಸದಸ್ಯತ್ವ ರದ್ದು
ಗ್ರಾಹಕರು ಕೊನೆಯ ದಿನಾಂಕದ ಒಳಗಾಗಿ ಇ-ಕೆವೈಸಿ ಮಾಡದಿದ್ದಲ್ಲಿ, ಆಧಾರ್ ದೃಢೀಕರಣ(ಇ-ಕೆವೈಸಿ) ಮಾಡಿಸದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್ ತಿಂಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎನ್ನಲಾಗಿದೆ
ಇದನ್ನೂ ಓದಿ: Adike Rate Today | ಇಂದಿನ ಅಡಿಕೆ ರೇಟ್ | ಮಾರುಕಟ್ಟೆ ವಿವರ
ಕೊನೆಯ ದಿನಾಂಕ
ಆಹಾರ ಇಲಾಖೆಯ ಸೂಚನೆಯಂತೆ ನ.30 ರೊಳಗೆ ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲಾ ಗ್ರಾಹಕರು ಮಾಸಿಕವಾಗಿ ಆಹಾರ ಧಾನ್ಯವನ್ನು ಪಡೆಯಲು ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
Ration Card EKYC ಅವಶ್ಯಕ ದಾಖಲೆಗಳು
- ಪಡಿತರ ಚೀಟಿಯ ಒರಿಜಿನಲ್ ಪ್ರತಿ
- ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ನಕಲು ಪ್ರತಿ
- ಕುಟುಂಬದ ಯಜಮಾನನ ಆಧಾರ್ ಕಾರ್ಡ್ ನಕಲು ಪ್ರತಿ
- ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ
- ಕುಟುಂಬದ ಯಜಮಾನನ ಎರಡು ಪಾಸ್ ಪೋರ್ಟ್ ಫೋಟೋ
Ration Card EKYC : ಇ-ಕೆವೈಸಿ ಅವಶ್ಯವೇಕೆ?
- ಪ್ರತಿ ತಿಂಗಳು ಆಹಾರ ಧಾನ್ಯ ನೈಜ ಫಲಾನುಭವಿಗಳಿಗೆ ತಲುಪುತ್ತಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು.
- ನಕಲಿ ರೇಷನ್ ಕಾರ್ಡ್‌ದಾರರನ್ನು ಖಚಿತಪಡಿಸಿಕೊಳ್ಳಲು.
- ರೇಶನ್ ಕಾರ್ಡನಲ್ಲಿ ಮರಣ ಹೊಂದಿದ ಸದಸ್ಯರನ್ನು ಗುರುತಿಸಿ ಅಂತಹ ಸದಸ್ಯರನ್ನು ಕಾರ್ಡ್‌ನಿಂದ ತೆಗೆದು ಹಾಕಲು.