ಗದಗ: ತರಕಾರಿ ಮಾರಾಟಕ್ಕೆಂದು ಮಾರುಕಟ್ಟೆಗೆ ಬಂದ ರೈತ ತರಕಾರಿ ತೆಗೆಯಲು ಚೀಲಕ್ಕೆ ಕೈಹಾಕುವ ವೇಳೆ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ ಘಟನೆ ಜಿಲ್ಲೆಯ ಗಜೇಂದ್ರಗಢದಲ್ಲಿ ನಡೆದಿದೆ.
ಮಂಗಳವಾರ ರೈತನೋರ್ವ ತರಕಾರಿ ಮಾರುಕಟ್ಟೆಗೆ ಹೀರೇಕಾಯಿ ಮಾರಾಟಕ್ಕೆಂದು ಚೀಲದಲ್ಲಿ ತುಂಬಿಕೊಂಡು ತಂದಿದ್ದ. ಚೀಲದಿಂದ ಹೀರೆಕಾಯಿಯನ್ನು ತಳ್ಳುಗಾಡಿಯ ಮೇಲೆ ಹಾಕಲು ಮುಂದಾಗಿದ್ದು ಈ ವೇಳೆ ಕೈ ಹಾಕಲು ಮುಂದಾಗಿದ್ದಾಗಲೇ ಚೀಲದಲ್ಲಿ ನಾಗರಹಾವಿನ ಮರಿ ಕಾಣಿಸಿಕೊಂಡಿದೆ.
ಆತಂಕಗೊಂಡ ರೈತ ಕೂಡಲೇ ಚೀಲದಲ್ಲಿದ್ದ ತರಕಾರಿಯನ್ನು ತಳ್ಳುಗಾಡಿಯ ಮೇಲೆ ಸುರಿದಿದ್ದು, ಬಳಿಕ ಒಂದೊಂದಾಗಿ ಹೀರೇಕಾಯಿಯನ್ನು ಬೇರ್ಪಡಿಸಿದ್ದಾನೆ. ಇದಾದ ನಂತರ ನಾಗರ ಹಾವಿನ ಮರಿ ನಿಧಾನಕ್ಕೆ ತರಕಾರಿಯಿಂದ ಹೊರಗೆ ಬಂದು ಹರಿದುಹೋಗಿದೆ. ಹಾವು ತೆರಳಿದ ಬಳಿಕ ಸ್ಥಳದಲ್ಲಿದ್ದವರು ನಿಟ್ಟುಸಿರುಬಿಟ್ಟಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment