Ration Card Cancellation : ಕಾರು, ಬೈಕ್ ಇದ್ರೆ ರೇಷನ್​​ ಕಾರ್ಡ್​​ ರದ್ದು; ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಬಿಗ್​ ಶಾಕ್

Ration Card Cancellation : ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ (BPL Card) ಬಿಗ್​ ಶಾಕ್​ ಕೊಟ್ಟಿದೆ. ಹೌದು, ರಾಜ್ಯದಲ್ಲಿ ಅನರ್ಹ ರೇಷನ್ ಕಾರ್ಡ್​ಗಳ (Ineligible Ration Card) ರದ್ದು ಕಾರ್ಯವನ್ನು ಆಹಾರ ಇಲಾಖೆ…

ration card Cancellation

Ration Card Cancellation : ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ (BPL Card) ಬಿಗ್​ ಶಾಕ್​ ಕೊಟ್ಟಿದೆ. ಹೌದು, ರಾಜ್ಯದಲ್ಲಿ ಅನರ್ಹ ರೇಷನ್ ಕಾರ್ಡ್​ಗಳ (Ineligible Ration Card) ರದ್ದು ಕಾರ್ಯವನ್ನು ಆಹಾರ ಇಲಾಖೆ (Food Deptt) ಚುರುಕುಗೊಳಿಸಿದೆ.

ಹೌದು, ನಕಲಿ ದಾಖಲೆ ನೀಡಿ ಅಕ್ರಮವಾಗಿ ಪಡೆದ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದ್ದು, ಇದುವರೆಗೂ ಒಟ್ಟು 22,62,413 ಅನರ್ಹ ರೇಷನ್ ಕಾರ್ಡ್​ಗಳನ್ನು ಪತ್ತೆ ಮಾಡಿದ್ದು, ಬಿಪಿಎಲ್​​ ಕಾರ್ಡ್​ ರದ್ದಿಗೆ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿ ಮಾಡಿದೆ.

ಇದನ್ನೂ ಓದಿ: ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಕೆಟಿಆರ್‌ ಕಾರಣ ವಿವಾದ : ಸಮಂತಾ, ಎನ್‌ಟಿಆರ್, ನಾಗಾರ್ಜುನ ಆಕ್ರೋಶ!

Vijayaprabha Mobile App free

Ration Card Cancellation : ಸರ್ಕಾರದಿಂದ ಮಾನದಂಡ ನಿಗದಿ

ಬಿಪಿಎಲ್​​ ಕಾರ್ಡ್​ ರದ್ದಿಗೆ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿ ಮಾಡಿದ್ದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಹೆಚ್ಚು ಹೊಂದಿರುವವರು, ಕಾರ್​ ಮತ್ತು ಬೈಕ್​​, ಸೈಟ್​​, 3 ಹೆಕ್ಟೇರ್‌ ಭೂಮಿ, ನೀರಾವರಿ ಭೂಮಿ, ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರೋ ಎಲ್ಲರ ರೇಷನ್​ ಕಾರ್ಡ್​ಗಳು ರದ್ದಾಗಲಿವೆ.

Ration Card Cancellation : ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ ಪತ್ತೆ

ರಾಜ್ಯದಲ್ಲಿ ಅನರ್ಹ ಅಂತ್ಯೋದಯ, ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಇದೀಗ ರಾಜ್ಯ ಸರ್ಕಾರ
ತಂತ್ರಾಂಶದ ಸಹಾಯದಿಂದ ಒಟ್ಟು 22,62,413 ಅನರ್ಹ ಅಂತ್ಯೋದಯ, ಬಿಪಿಎಲ್ ಕಾರ್ಡ್‌ಗಳು ಇರುವುದನ್ನು ಪತ್ತೆ ಮಾಡಿದೆ.

ಕುಟುಂಬ ತಂತ್ರಾಂಶದಿಂದ ಪಡೆದ ಅನರ್ಹ ಪಡಿತರ ಚೀಟಿಯನ್ನು 10 ದಿನದೊಳಗೆ ಮುಕ್ತಾಯಗೊಳಿಸಬೇಕು. ನಂತರ ಕೇಂದ್ರ ಕಚೇರಿಗೆ ವಿವರ ವರದಿ ಸಲ್ಲಿಸುವಂತೆ ರಾಜ್ಯದ ಎಲ್ಲ ಜಂಟಿ ಮತ್ತು ಉಪನಿರ್ದೇಶಕರಿಗೆ ಆಹಾರ ಇಲಾಖೆ ಸೂಚಿಸಿದೆ.

ಇದನ್ನೂ ಓದಿ: Anna bhagya yojana : ಫಲಾನುಭವಿಗಳಿಗೆ ಶಾಕ್ ನೀಡಿದ ಸರ್ಕಾರ

Ration Card Cancellation: ಬಡವರಿಗೆ ಸಂಕಷ್ಟದ ಮೇಲೆ ಸಂಕಷ್ಟ

ಆಹಾರ ಇಲಾಖೆ ರಾಜ್ಯದಲ್ಲಿ 1,06,152 ಆದಾಯ ತೆರಿಗೆ ಪಾವತಿದಾರರು ಹೊಂದಿದ ಅನರ್ಹ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳನ್ನು ರದ್ದು ಪಡಿಸಲು ಮುಂದಾಗಿದ್ದು, ಇದರಲ್ಲಿ ಅರ್ಧಕ್ಕೂ ಅಧಿಕ ಜನ ಬಡವರು ಇದ್ದಾರೆ ಎನ್ನಲಾಗಿದೆ.

ಹೌದು, ಬಿಪಿಎಲ್ ಕಾರ್ಡ್ ಗಳು ರದ್ದಾಗಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಪಡಿತರ ಕೂಡ ಸಿಗುತ್ತಿಲ್ಲ. ಗೃಹಲಕ್ಷ್ಮಿ ಹಣ ನಿಂತುಹೋಗಿದೆ. ಅನ್ನಭಾಗ್ಯದ ಅಕ್ಕಿ, ಹೆಚ್ಚುವರಿ ಅಕ್ಕಿ ಹಣ ಕೂಡ ಸಿಗುತ್ತಿಲ್ಲ. ಮನೆ ನಿರ್ಮಾಣಕ್ಕೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮೊದಲ ವಾರ ಯಾರಿಗೆ ಗೇಟ್‌ ಪಾಸ್? ಚೈತ್ರಾ ಕುಂದಾಪುರಗೆ ಸಿಗುತ್ತಾ ಗೇಟ್‌ ಪಾಸ್?

ಇನ್ನು, ಬಿಪಿಎಲ್ ಕಾರ್ಡ್‌ನಿಂದ ವಂಚಿತರಾದ ಬಡವರಿಗೆ ಆದಾಯ ತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ತರುವಂತೆ ಆಹಾರ ಇಲಾಖೆ ಅಧಿಕಾರಿಗಳು ಸೂಚಿಸುತ್ತಿದ್ದು, ಇದರಿಂದ ಬಡವರು ಐಟಿ ಕಚೇರಿಗೆ ಅರ್ಜಿ ಸಲ್ಲಿಸಿ ಎನ್‌ಒಸಿ ಕೊಡುವಂತೆ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.