ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ KTR ಕಾರಣ : ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ ಶಾಕಿಂಗ್ ಹೇಳಿಕೆ ನೀಡಿದ್ದು, ಸಮಂತಾ, ನಾಗಾರ್ಜುನ & ನಾಗ ಚೈತನ್ಯ ಅವರ ಬಗ್ಗೆ ಸಾರ್ವಜನಿಕವಾಗಿ ಸುರೇಖಾ ಆಡಿರುವ ಮಾತುಗಳಿಗೆ ತೀವ್ರ ವಿರೋಧ್ಯ ವ್ಯಕ್ತವಾಗುತ್ತಿದ್ದು, ಈ ಹೇಳಿಕೆ ವಿರುದ್ಧ ನಟಿ ಸಮಂತಾ, ಜೂ. ಎನ್‌ಟಿಆರ್, ನಾಗಾರ್ಜುನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹೌದು, ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆಯಲು ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ಕೆ.ಟಿ.ರಾಮರಾವ್ ಕಾರಣ ಎಂದು ಸುರೇಖಾ ಹೇಳಿದ್ದಾರೆ. ಎನ್ ಕನ್ವೆನ್ಷನ್ನ ಒಡೆಯಬಾರದು ಎಂದರೆ ಸಮಂತಾನ ನನ್ನ ಬಳಿ ಕಳಿಸಿ ಅಂತ ನಾಗಾರ್ಜುನಗೆ ಕೆ.ಟಿ. ರಾಮ ರಾವ್ ಹೇಳಿದ್ದರು. ಆದರೆ ಸಮಂತಾ ಒಪ್ಪಿಕೊಳ್ಳಲಿಲ್ಲ.ಅದಕ್ಕಾಗಿ ನಾಗ ಚೈತನ್ಯಗೆ ಸಮಂತಾ ಡಿವೋರ್ಸ್ ನೀಡಿದರು ಎಂದು ಸುರೇಖಾ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮೊದಲ ವಾರ ಯಾರಿಗೆ ಗೇಟ್ ಪಾಸ್? ಚೈತ್ರಾ ಕುಂದಾಪುರಗೆ ಸಿಗುತ್ತಾ ಗೇಟ್ ಪಾಸ್?
ವಿಚ್ಛೇದನ ವೈಯಕ್ತಿಕ ವಿಚಾರ, ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ: ಸಮಂತಾ
ವಿಚ್ಛೇದನ ವೈಯಕ್ತಿಕ ವಿಚಾರ, ರಾಜಕೀಯದಿಂದ ನನ್ನ ಹೆಸರನ್ನು ದೂರವಿಡಿ. ನಾನು ಸದಾ ರಾಜಕೀಯದಿಂದ ದೂರವೇ ಇದ್ದೇನೆ ಎಂದು ನಟಿ ಸಮಂತಾ (Actress Samantha) ಹೇಳಿದ್ದಾರೆ. ನಾಗಚೈತನ್ಯ-ಸಮಂತಾ ವಿಚ್ಛೇದನಕ್ಕೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಕಾರಣವೆಂದು ಆರೋಪಿಸಿದ್ದ ತೆಲಂಗಾಣದ ಸಚಿವೆ ಕೊಂಡಾ ಸುರೇಖಾ ಹೇಳಿಕೆಗೆ ಕುರಿತು ಇನ್‌ಸ್ಟಾದಲ್ಲಿ ಪತ್ರ ಬರೆದಿರುವ ಸಮಂತಾ, ಮಹಿಳೆಯರನ್ನು ಹೆಚ್ಚಾಗಿ ಪರಿಗಣಿಸದ ಸಿನಿ ಉದ್ಯಮದಲ್ಲಿ ನನ್ನನ್ನು ರೂಪಿಸಿದ ಪಯಣದ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಅಮೆಜಾನ್ ಫ್ಲಿಪ್‌ಕಾರ್ಟ್ ಫೆಸ್ಟಿವಲ್ ಸೇಲ್; ಶಾಪಿಂಗ್ ಪ್ರಿಯರಿಗೆ ಸಕ್ಕತ್ ಕೊಡುಗೆ
ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ KTR ಕಾರಣ – ಪ್ರತಿಕ್ರಿಯಿಸಿದ ನಾಗಾರ್ಜುನ
ತೆಲಂಗಾಣ ಅರಣ್ಯ ಸಚಿವೆ ಕೊಂಡಾ ಸುರೇಖಾ ಅವರು ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ವಿಚ್ಛೇದನದ ಕುರಿತು ನೀಡಿರುವ ಹೇಳಿಕೆಯನ್ನು ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಖಂಡಿಸಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಕೆಟಿ ರಾಮರಾವ್ ಕಾರಣ ಎಂದು ಸುರೇಖಾ ಆರೋಪಿಸಿದ್ದಾರೆ.
ಹೌದು, ಹೇಳಿಕೆ ಹಿಂಪಡೆಯಲು ಆಗ್ರಹಿಸಿರುವ ನಾಗಚೈತನ್ಯ ತಂದೆ ನಾಗಾರ್ಜುನ “ರಾಜಕೀಯದಿಂದ ದೂರ ಉಳಿದಿರುವ ಸಿನಿಮಾ ತಾರೆಯರ ಜೀವನವನ್ನು ಎದುರಾಳಿಗಳ ಟೀಕೆಗೆ ಬಳಸಿಕೊಳ್ಳಬೇಡಿ. ದಯವಿಟ್ಟು ಇತರರ ಖಾಸಗಿತನವನ್ನು ಗೌರವಿಸಿ” ಎಂದು ನಾಗಾರ್ಜುನ ಹೇಳಿದ್ದಾರೆ.
ಇದನ್ನೂ ಓದಿ: ಫಲಾನುಭವಿಗಳಿಗೆ ಶಾಕ್ ನೀಡಿದ ಸರ್ಕಾರ
ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ KTR ಕಾರಣ : ಜೂನಿಯರ್ ಎನ್‌ಟಿಆರ್ ಕಿಡಿ
ಇತರರ ವಿರುದ್ಧ ವಿನಾಕಾರಣ ಆರೋಪ ಮಾಡಿದಾಗ ಸುಮ್ಮನಿರಲು ಸಾಧ್ಯವಿಲ್ಲ ಎಂದು ಜೂ. ಎನ್‌ಟಿಆರ್ (Jr. NTR) ಹೇಳಿದ್ದಾರೆ. ನಾಗ ಚೈತನ್ಯ-ಸಮಂತಾ ವಿಚ್ಛೇದನ ಕುರಿತು ಕೊಂಡಾ ಸುರೇಖಾ ಮಾಡಿರುವ ಕಮೆಂಟ್‌ಗೆ ಪ್ರತಿಕ್ರಿಯಿಸಿ, ‘ವೈಯಕ್ತಿಕ ಬದುಕನ್ನು ರಾಜಕೀಯಕ್ಕೆ ಎಳೆದು ತರಬೇಡಿ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗೌರವ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಚಿತ್ರರಂಗದ ಬಗ್ಗೆ ಆಧಾರ ರಹಿತ ಹೇಳಿಕೆ ನೀಡುತ್ತಿರುವುದು ನೋವುಂಟು ಮಾಡಿದೆ. ಇಂತಹ ವಿಷಯಗಳನ್ನು ಚಿತ್ರರಂಗ ಸಹಿಸುವುದಿಲ್ಲ’ ಎಂದಿದ್ದಾರೆ.
Konda Surekha garu, dragging personal lives into politics is a new low. Public figures, especially those in responsible positions like you, must maintain dignity and respect for privacy. It’s disheartening to see baseless statements thrown around carelessly, especially about the…
— Jr NTR (@tarak9999) October 2, 2024