Anna bhagya yojana : ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆ ಅನ್ನಭಾಗ್ಯ ಯೋಜನೆ (Anna bhagya yojana) ಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ, ಕಳೆದ ಮೂರು ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿಲ್ಲ.
ಅನ್ನಭಾಗ್ಯದ ಹಣ ಬಾರದ ಪರಿಣಾಮ ಸರ್ಕಾರದ ವಿರುದ್ಧ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 3 ತಿಂಗಳಿನಿಂದ ಹಣವನ್ನೂ ಕೊಡದೆ, ಅಕ್ಕಿಯನ್ನೂ ಕೊಡದೆ ಆಹಾರ &ನಾಗಾರೀಕ ಸರಬರಾಜು ಇಲಾಖೆಯ ಜನರಿಗೆ ಟೋಪಿಹಾಕುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಯಿಂದ ಮೊದಲ ವಾರ ಯಾರಿಗೆ ಗೇಟ್ ಪಾಸ್? ಚೈತ್ರಾ ಕುಂದಾಪುರಗೆ ಸಿಗುತ್ತಾ ಗೇಟ್ ಪಾಸ್?
ನಾವು ಅಕ್ಕಿ ದುಡ್ಡು ಬರುತ್ತದೆ ಅಂತ ಬ್ಯಾಂಕಿಗೂ ಮನೆಗೂ ಅಲೆದಾಡುತ್ತಾ ಇದ್ದೇವೆ ಇದ್ದೀವಿ. ಆದರೆ ಅಕ್ಕಿ ದುಡ್ಡು ಮಾತ್ರ ನಮಗೆ ಬಂದಿಲ್ಲ ಎಂದು ಜನ ಕಿಡಿಕಾರುತ್ತಿದ್ದರೆ. ನಮಗೆ ಹಣದ ಅಗತ್ಯ ಇಲ್ಲ. ಹಣದ ಬದಲು ನಮಗೆ ಅಕ್ಕಿಯನ್ನೇ ಕೊಡಿ. ಅಥವಾ ಅಕ್ಕಿ ಸಿಗದಿದ್ದರೆ ದಿನಸಿ ಪದಾರ್ಥ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ




