Ration card: ವಿಧಾನ ಸಭಾ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಿಂದ ಹೊಸ ರೇಷನ್ ಕಾರ್ಡ್ ವಿತರಣೆ ಸ್ಥಗಿತಗೊಂಡಿತ್ತು. ಇದೀಗ ರಾಜ್ಯದಲ್ಲಿ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗಾಗಿ ಜು-2023ರ ಅಂತ್ಯದಲ್ಲಿ ಸುಮಾರು 2,95,986 ಅರ್ಜಿ ಬಂದಿವೆ. ಸ್ಥಳ ಪರಿಶೀಲನೆ,ಆರ್ಥಿಕ ಇಲಾಖೆ ಅನುಮತಿ ಪ್ರಕ್ರಿಯೆ ಮುಗಿಸಿ ಮುಂದಿನ ತಿಂಗಳಿನ ಒಳಗಾಗಿ ಅರ್ಹ ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ವಿತರಿಸುತ್ತೇವೆ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದ್ದಾರೆ.
ಇದನ್ನು ಓದಿ: ನಿಮ್ಮ ಬಳಿ ಪಡಿತರ ಚೀಟಿ ಇದೆಯೇ? ಇದನ್ನು ಸೆಪ್ಟೆಂಬರ್ 30 ರೊಳಗೆ ಮಾಡಿ
Ration card: ಹೊಸ ರೇಷನ್ ಕಾರ್ಡ್ ಪಡೆಯಲು ನೀವು ಅರ್ಹರಾ ಚೆಕ್ ಮಾಡಿ!
ಇನ್ನೇನು ಮುಂದಿನ ತಿಂಗಳೇ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನ ನೀವು ಸಲ್ಲಿಸಬಹುದು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಹಾಗಿದ್ರೆ ಹೊಸ ರೇಷನ್ ಕಾರ್ಡ್ ಪಡೆಯಲು ನೀವು ಈ ಮಾನದಂಡಗಳನ್ನು ಗಮನಿಸಿ
- ಜಿಎಸ್‌ಟಿ, ಐಟಿ ರಿಟರ್ನ್ ಪಾವತಿದಾರರಾಗಿರಬಾರದು.
- ಗ್ರಾಮೀಣ ಭಾಗದಲ್ಲಿ 3 ಹೆಕ್ಕೇರ್‌ಗಿಂತ ಹೆಚ್ಚು ಭೂಮಿ ಹೊಂದಿರಬಾರದು.
- ನಗರದಲ್ಲಿ 1000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರಬಾರದು.
ಇದನ್ನು ಓದಿ: ಇಂದಿನಿಂದ ವಿವಿಧೆಡೆ ಮಳೆ; ಹವಾಮಾನ ವರದಿ ಹೀಗಿದೆ
Ration card: ನಿಮ್ಮ ಬಳಿ ಕಾರು ಇದ್ರೆ ರೇಷನ್ ಕಾರ್ಡ್ ರದ್ದು..!
ನಾಗರಿಕ ಮತ್ತು ಆಹಾರ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಹೊಸ ಪಡಿತರ ಚೀಟಿಗಳ ಅರ್ಜಿಗಳಿಗೆ ಮುಂದಿನ ತಿಂಗಳಿಂದಲೇ ಕಾರ್ಡ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದು, ಬಿಪಿಎಲ್ ಕಾರ್ಡ್ ರದ್ದು ಮಾಡುವ ವಿಚಾರವಾಗಿ ಮಾತನಾಡಿದ ಸಚಿವರು, ಯಲ್ಲೊ ಬೋರ್ಡ್ ಇರೋರಿಗೆ ಕಾರ್ಡ್ ರದ್ದು ಆಗಿದ್ದರೆ ಅದನ್ನು ಪರಿಶೀಲಿಸಿ ವಾಪಸ್ ಪಡೆಯೋ ಬಗ್ಗೆ ನಿರ್ಧಾರ ಮಾಡ್ತೀವಿ,ವೈಟ್ ಬೋರ್ಡ್ ಕಾರ್ಡು ಇರೋರ ಕಾರ್ಡ ರದ್ದು ಹಿಂಪಡೆಯಲ್ಲ ಎಂದಿದ್ದಾರೆ.
Ration card: ರೇಷನ್ ಕಾರ್ಡ್ ಗೆ ಹೊಸ ಕುಟುಂಬ ಸದಸ್ಯರ ಸೇರ್ಪಡೆಗೆ ಬೇಕಾಗುವ ದಾಖಲೆಗಳೇನು ?
- ಕುಟುಂಬದ ರೇಷನ್ ಕಾರ್ಡ್
- ಮಗುವಿನ ಅಥವಾ ಕುಟುಂಬದ ಹೊಸ ಸದಸ್ಯರ ಜನನ ಪ್ರಮಾಣ ಪತ್ರ (Birth certificate), ಆಧಾರ್ ಕಾರ್ಡ್ (Aadhaar card) ಪ್ರತಿ
- ಮಗುವಾಗಿದಲ್ಲಿ ಮಗುವಿನ ಪೋಷಕರ ಆಧಾರ್ ಕಾರ್ಡ್ ಪ್ರತಿ .
- ಹೊಸ ವಿವಾಹಿತ ಮಹಿಳೆಯಾಗಿದ್ದರೆ ಆಧಾರ್ ಕಾರ್ಡ್, ವಿವಾಹ ಪ್ರಮಾಣಪತ್ರ, ಗಂಡನ ಅಥವಾ ಪೋಷಕರ ಆಧಾರ್ ಕಾರ್ಡ್ ಜೊತೆಗೆ ಪೋಷಕರ ರೇಷನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ..
ಇದನ್ನು ಓದಿ: ನಿಮ್ಮ ಕಂಪನಿಯು ಪ್ರತಿ ತಿಂಗಳು EPF ಖಾತೆಗೆ ಹಣ ಜಮಾ ಮಾಡುತ್ತಿಲ್ಲವೇ? ಅಗಾದರೆ ಹೀಗೆ ಮಾಡಿ..
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ಮಾಡಿ |