ವಸತಿ ರಹಿತರಿಗೆ ಗುಡ್ ನ್ಯೂಸ್ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಯಾರಿಗೆ ಲಾಭ? ಅರ್ಜಿ ಸಲ್ಲಿಸಲು ಅರ್ಹತೆ, ದಾಖಲೆಗಳು

PM Awas Yojana PM Awas Yojana

ಪ್ರಧಾನ ಮಂತ್ರಿ ಆವಾಸ್ ಯೋಜನೆ : ವಸತಿ ರಹಿತರಿಗೆ ಗುಡ್ ನ್ಯೂಸ್ ನೀಡಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಅಡಿಯಲ್ಲಿ, 3 ಕೋಟಿ ಹೆಚ್ಚುವರಿ ಮನೆಗಳನ್ನ ನಿರ್ಮಿಸುವ ಗುರಿಯನ್ನ ಕೇಂದ್ರ ಸರ್ಕಾರ ಹೊಂದಿದೆ.

ಹೌದು,ಈಗ ತಿಂಗಳಿಗೆ 15,000 ರೂಪಾಯಿ ಆದಾಯ ಹೊಂದಿರುವವರು ಸಹ ಯೋಜನೆಗೆ ಅರ್ಹರಾಗಿದ್ದು, 90 ದಿನಗಳಲ್ಲಿ ಮನೆಗಳನ್ನ ಮಂಜೂರು ಮಾಡಲಾಗುವುದು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಹ ವ್ಯಕ್ತಿಗಳನ್ನ ಗುರುತಿಸಲು ಸಮೀಕ್ಷೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಸೂರ್ಯ ಪಥ ಬದಲಾವಣೆ | ಈ 5 ರಾಶಿಯವರಿಗೆ ಭಾರಿ ಅದೃಷ್ಟ

Advertisement

Vijayaprabha Mobile App free

ಬಡ, ಮಧ್ಯಮ ವರ್ಗದ ಜನರಿಗೆ ಮನೆಗಳನ್ನ ಒದಗಿಸುವ ಗುರಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯು (PMAY) ಬಡ, ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆ ಹೊಂದುವ ಕನಸನ್ನ ನನಸಾಗಿಸಲು ಒಂದು ಅವಕಾಶವಾಗಿದ್ದು, ದೇಶದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮನೆಗಳನ್ನ ಒದಗಿಸುವ ಗುರಿಯನ್ನ ಹೊಂದಿರುವ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನ ಕೇಂದ್ರ ಸರ್ಕಾರವು 25 ಜೂನ್ 2015 ರಂದು ಪ್ರಾರಂಭಿಸಿದ್ದು, ಅಂದಿನಿಂದ ಇದು ಲಕ್ಷಾಂತರ ಜನರಿಗೆ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಲು ಸಹಾಯ ಮಾಡಿದೆ. PMAY ಯೋಜನೆ 2.0 ಅಡಿಯಲ್ಲಿ, ಸರ್ಕಾರವು ಈಗ ಹೆಚ್ಚುವರಿ 3 ಕೋಟಿ ಮನೆಗಳನ್ನ ನಿರ್ಮಿಸುವ ಗುರಿಯನ್ನ ಹೊಂದಿದೆ. ಇದಕ್ಕಾಗಿ ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ 10 ಲಕ್ಷ ಕೋಟಿ ರೂಪಾಯಿ ಮೀಸಲಿರಿಸಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಹತೆಯಲ್ಲಿ ಬದಲಾವಣೆ.!

ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0ರಲ್ಲಿ ಅರ್ಹತಾ ಷರತ್ತುಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನ ಮಾಡಲಾಗಿದ್ದು, ಈ ಬದಲಾವಣೆಯಿಂದ ಹೆಚ್ಚಿನ ಜನರು ಯೋಜನೆಯ ಪ್ರಯೋಜನಗಳನ್ನ ಪಡೆಯಬಹುದು. ಈ ಮೊದಲು ಮಾಸಿಕ ಆದಾಯ 10,000 ರೂಪಾಯಿವರೆಗಿನ ವ್ಯಕ್ತಿಗಳು ಈ ಯೋಜನೆಗೆ ಅರ್ಹರಾಗಿದ್ದು, ಈ ಮಿತಿಯನ್ನ ಈಗ ತಿಂಗಳಿಗೆ 15,000 ರೂ.ಗೆ ಹೆಚ್ಚಿಸಲಾಗಿದೆ.

ಈ ಹಿಂದೆ ಎರಡು ಕೋಣೆಗಳ ಮಣ್ಣಿನ ಮನೆ, ಫ್ರಿಜ್ ಅಥವಾ ದ್ವಿಚಕ್ರ ವಾಹನವನ್ನ ಹೊಂದಿದ್ದವರು ಈ ಯೋಜನೆಗೆ ಅರ್ಹರಲ್ಲ ಎಂದು ಹೇಳಲಾಗಿತ್ತು.ಆದರೆ, ಈಗ ಈ ಹೊಸ ಯೋಜನೆಯಲ್ಲಿ ಈ ನಿಯಮಗಳನ್ನ ಸಡಿಲಿಸಲಾಗಿದ್ದು, ಈ ಸೌಲಭ್ಯಗಳ ಹೊರತಾಗಿಯೂ, ವ್ಯಕ್ತಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಆಯ್ಕೆ ಪ್ರಕ್ರಿಯೆಯು ಹೆಚ್ಚು ಪಾರದರ್ಶಕವಾಗಿರಲಿದ್ದು, ಗ್ರಾಮ ಮಟ್ಟದಲ್ಲಿ ಸಾರ್ವಜನಿಕ ಸಭೆಗಳ ಮೂಲಕ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Silverware | ಬೆಳ್ಳಿ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಚಗೊಳಿಸುವ ವಿಧಾನಗಳು

ಕೇವಲ 90 ದಿನಗಳಲ್ಲಿ ನಿಮ್ಮ ಮನೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಹ ವ್ಯಕ್ತಿಗಳಿಗೆ ಕೇವಲ 90 ದಿನಗಳಲ್ಲಿ ಮನೆಗಳನ್ನ ಒದಗಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ. ಇದಕ್ಕಾಗಿ ಈ ಯೋಜನೆಯ ಲಾಭ ಪಡೆಯಲು ಎಲ್ಲಾ ಅರ್ಹ ವ್ಯಕ್ತಿಗಳನ್ನ ಗುರುತಿಸಲು ಸರ್ಕಾರ ಶೀಘ್ರದಲ್ಲೇ ಸಮೀಕ್ಷೆಯನ್ನ ಪ್ರಾರಂಭಿಸಲಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿಯೊಬ್ಬ ಬಡ ವ್ಯಕ್ತಿಗೆ ಮನೆಗಳು ಸಿಗುವುದನ್ನ ಖಚಿತಪಡಿಸಿಕೊಳ್ಳಲು ಈ ಸಮೀಕ್ಷೆಯನ್ನ ನಡೆಸಲಾಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನಗಳನ್ನ ಪಡೆಯಲು, ಅರ್ಜಿ ಪ್ರಕ್ರಿಯೆಯನ್ನ ಸರಳೀಕರಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಪಿಎಂ ಆವಾಸ್ ಯೋಜನೆ pmaymis.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಪ್ರಕ್ರಿಯೆ ಹೇಗೆ?.

  • ಅಧಿಕೃತ ವೆಬ್ಸೈಟ್’ನ ‘ನಾಗರಿಕ ಮೌಲ್ಯಮಾಪನ’ (Civic assessment) ಮೆನುವಿನಲ್ಲಿ ‘ಇತರ 3 ಘಟಕಗಳ ಅಡಿಯಲ್ಲಿ ಪ್ರಯೋಜನಗಳು’ (Benefits under the other 3 components)ಆಯ್ಕೆಯನ್ನು ಆರಿಸಿ.
  • ನಂತರ ಆಧಾರ್ ಕಾರ್ಡ್ ಸಂಖ್ಯೆ, ಹೆಸರನ್ನ ನಮೂದಿಸಿ.
  • ಆಧಾರ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ ಅರ್ಜಿ ಪುಟ ಓಪನ್ ಅಗಲಿದ್ದು, ಅಲ್ಲಿ ಅರ್ಜಿದಾರರು ತಮ್ಮ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬಹುದು.
  • ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಕ್ಯಾಪ್ಚಾವನ್ನು ನಮೂದಿಸಿ ‘ಉಳಿಸು’ ಬಟನ್ ಕ್ಲಿಕ್ ಮಾಡಿ.
  • ನಂತರ ಅರ್ಜಿ ನಮೂನೆಯನ್ನ ಡೌನ್ಲೋಡ್ ಮಾಡಿ, ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
  • ನಂತರ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (CSC), ಬ್ಯಾಂಕಿಗೆ ಹೋಗಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನ ಸಲ್ಲಿಸಿ.
  • ಮೌಲ್ಯಮಾಪನ ಐಡಿ, ಹೆಸರು, ತಂದೆಯ ಹೆಸರು ಮತ್ತು ಮೊಬೈಲ್ ಸಂಖ್ಯೆಯ ಮೂಲಕ ನೀವು ವೆಬ್ಸೈಟ್ನಲ್ಲಿ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಇದನ್ನೂ ಓದಿ: Ration card EKYC : ರೇಷನ್ ಕಾರ್ಡ್’ಗೆ ಇ-ಕೆವೈಸಿ ಮಾಡಿಸದವರಿಗೆ ಬಿಗ್ ಶಾಕ್; 22‌ ಲಕ್ಷ ರೇಷನ್‌ ಕಾರ್ಡ್‌ ಬ್ಯಾನ್

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು.?

  • ಈ ಯೋಜನೆಗೆ ಕುಟುಂಬದಲ್ಲಿ ಪುರುಷರು ಮಾತ್ರ ಇದ್ದರೆ ಅರ್ಜಿ ಸಲ್ಲಿಸಬಹುದು.
  • ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 70 ವರ್ಷ ವಯಸ್ಸಾಗಿರಬೇಕು.
  • ಅರ್ಜಿದಾರರ, ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಈಗಾಗಲೇ ಯಾವುದೇ ಸ್ವಂತ ಮನೆ ಇರಬಾರದು.
  • ಇನ್ನು, ಈ ಯೋಜನೆಯ ಫಲಾನುಭವಿಯು ಯಾವುದೇ ಸರ್ಕಾರಿ ವಸತಿ ಯೋಜನೆಯಿಂದ ಪ್ರಯೋಜನ ಪಡೆದಿರಬಾರದು.
  • ಮನೆಯ ಮಾಲೀಕತ್ವವು ಮಹಿಳೆಯ ಹೆಸರಿನಲ್ಲಿರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಇದು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಿಸುವ ಪ್ರಯತ್ನವಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಯಾರಿಗೆ ಲಾಭ?

ಈ ಯೋಜನೆಯ ಪ್ರಯೋಜನಗಳನ್ನು ಎಲ್ಲಾ ನಾಗರಿಕರಿಗೆ ವಿಸ್ತರಿಸಲು ಸರ್ಕಾರವು ಅದನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದೆ.

ಆರ್ಥಿಕವಾಗಿ ದುರ್ಬಲ ವರ್ಗ (EWS) : ಇದು ಅತ್ಯಂತ ಕಡಿಮೆ ಆದಾಯದ ವರ್ಗವಾಗಿದ್ದು, ಈ ಕುಟುಂಬಗಳು ವಸತಿ ಯೋಜನೆಯಡಿ ಹೆಚ್ಚಿನ ನೆರವು ಪಡೆಯುತ್ತವೆ.

ಕಡಿಮೆ ಆದಾಯದ ಗುಂಪು (LIG) : ಈ ವರ್ಗದ ಅಡಿಯಲ್ಲಿ ಬರುವ ಕುಟುಂಬಗಳ ಆದಾಯವು ಇಡಬ್ಲ್ಯೂಎಸ್ ವರ್ಗಕ್ಕಿಂತ ಸ್ವಲ್ಪ ಹೆಚ್ಚಾಗಿದ್ದು, ವಸತಿ ಯೋಜನೆಯಡಿ ಇವರು ಸಾಕಷ್ಟು ಸಹಾಯವನ್ನು ಸಹ ಪಡೆಯುತ್ತಾರೆ.

ಮಧ್ಯಮ ಆದಾಯ ಗುಂಪು-1 (MIG-I) : ಈ ವರ್ಗದ ಅಡಿಯಲ್ಲಿ ಬರುವ ಕುಟುಂಬಗಳ ಆದಾಯವು ಕಡಿಮೆ ಆದಾಯದ ವರ್ಗಕ್ಕಿಂತ ಹೆಚ್ಚಾಗಿದೆ.

ಮಧ್ಯಮ ಆದಾಯ ಗುಂಪು-2 (MIG-II) : ಇದು ಅತಿ ಹೆಚ್ಚು ಆದಾಯದ ಗುಂಪಾಗಿದ್ದು, ಇತರ ವರ್ಗಗಳಿಗೆ ಹೋಲಿಸಿದರೆ ಈ ವರ್ಗದ ಕುಟುಂಬಗಳು ಕಡಿಮೆ ಸಹಾಯವನ್ನ ಪಡೆಯುತ್ತವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!