Ration card EKYC : ರೇಷನ್ ಕಾರ್ಡ್’ಗೆ ಇ-ಕೆವೈಸಿ ಮಾಡಿಸದವರಿಗೆ ಬಿಗ್ ಶಾಕ್; 22‌ ಲಕ್ಷ ರೇಷನ್‌ ಕಾರ್ಡ್‌ ಬ್ಯಾನ್

Ration Card EKYC Ration Card EKYC

Ration card EKYC : ಪಡಿತರ ಚೀಟಿ ಹೊಂದಿರುವವರಾಗಿದ್ದರೆ ಡಿಸೆಂಬರ್ 1ರ ಮೊದಲು ಇ-ಕೆವೈಸಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡುವಂತೆ ಸೂಚನೆಗಳನ್ನು ನೀಡಿದ್ದು, ಇದನ್ನು ಮಾಡದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗಬಹುದು ಎನ್ನಲಾಗಿದ್ದು, ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಇ-ಕೆವೈಸಿ ಕಾರ್ಯ ಮಾಡಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Ration card | ಪಡಿತರ ಚೀಟಿ ಹೊಂದಿದವರಿಗೆ ಇಲ್ಲಿದೆ ಗುಡ್ ನ್ಯೂಸ್

Advertisement

Vijayaprabha Mobile App free

Ration card EKYC : ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದವರಿಗೆ ಬಿಗ್ ಶಾಕ್!

ರೇಷನ್ ಕಾರ್ಡ್’ಗೆ ಇ-ಕೆವೈಸಿ ಮಾಡಿಸದವರಿಗೆ ಸರ್ಕಾರದಿಂದ ಬಿಗ್ ಶಾಕ್ ಎದುರಾಗಿದ್ದು, ಆಧಾರ್ ದೃಢೀಕರಣ ಮಾಡದ ಸುಮಾರು 22 ಲಕ್ಷ ಕಾರ್ಡ್’ಗಳನ್ನು ಈಗಾಗಲೇ ಅನರ್ಹ ಎಂದು ಪರಿಗಣಿಸಿ ರದ್ದುಗೊಳಿಸಿದೆ.

ಇದರಿಂದಾಗಿ ಆಯುಷ್, ವಿಮೆ, ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಸೌಲಭ್ಯಗಳು ಸ್ಥಗಿತವಾಗಿವೆ ಎನ್ನಲಾಗುತ್ತಿದೆ. ಆಹಾರ ಇಲಾಖೆ ಇ-ಕೆವೈಸಿ ಮಾಡಿಸಲು ಸೂಚನೆ ನೀಡಿತ್ತು. ಈ ವೇಳೆ ಲಕ್ಷಾಂತರ ಬೋಗಸ್ ಕಾರ್ಡ್’ಗಳು ಪತ್ತೆಯಾಗಿದ್ದವು. ಅಂತಹ ಪಡಿತರ ಚೀಟಿದಾರರಿಗೆ ಹಣ ಸ್ಥಗಿತವಾಗಿದೆ.

ಇದನ್ನೂ ಓದಿ: Newspaper distributors | ಓದುಗರ ಮನೆ ಬಾಗಿಲಿಗೆ ಪತ್ರಿಕೆ ತರುವ ಸೇನಾನಿಗಳ ಮಹತ್ವವೇನು ಗೊತ್ತಾ..?

Ration card EKYC : ಕೆವೈಸಿ ಜೋಡಣೆಯಾದ ಬಳಿಕ ಪಡಿತರ ವಿತರಣೆ

ಇನ್ನು, 22 ಲಕ್ಷ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಆಹಾರ ಇಲಾಖೆ ಅಮಾನತು ಮಾಡಿದ್ದು ಸರಿಯಾಗಿ ಕೆವೈಸಿ ಜೋಡಣೆಯಾದ ಬಳಿಕ ಈ ಕಾರ್ಡ್ ದಾರರಿಗೆ ಅಕ್ಕಿ ಸಿಗಲಿದೆ. ಈಗಾಗಲೇ ಲಕ್ಷಾಂತರ ಎಪಿಎಲ್ ಕಾರ್ಡ್ ಗಳು ರದ್ದಾಗಿದ್ದು 60 ಸಾವಿರ ಬಿಪಿಎಲ್ ಕಾರ್ಡ್ ಗಳನ್ನು ಎಪಿಎಲ್ ಗೆ ಶಿಫ್ಟ್ ಮಾಡಲಾಗಿದೆ. ರೇಷನ್ ಅಂಗಡಿಗೆ ತೆರಳಿದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Actress Nayanthara | ನಟ ಧನುಷ್ ವಿರುದ್ಧ ನಯನತಾರಾ ಗಂಭೀರ ಆರೋಪ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement
ಅಮ್ಮ ಎಂದರೆ ಕಿಚ್ಚನಿಗೆ ಕಣ್ಣಿಗೆ ಕಾಣುವ ದೇವರು!