Rashi bhavishya : ಸೂರ್ಯ ಪಥ ಬದಲಾವಣೆಯಿಂದ ಮಿಥುನ ರಾಶಿ, ಕರ್ಕಾಟಕ ರಾಶಿ ಸೇರಿದಂತೆ ಈ 5 ರಾಶಿಯವರಿಗೆ ಅದೃಷ್ಟ ವಲಿಯಲಿದೆ.
ಮಿಥುನ ರಾಶಿ ಭವಿಷ್ಯ (Mithuna rashi bhavishya)
ಸೂರ್ಯ ಸಂಚಾರದಿಂದ ಮಿಥುನ ರಾಶಿಯವರಿಗೆ ತು೦ಬಾ ಪ್ರಯೋಜನವಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನ ಪ್ರಮುಖ ಸಮಸ್ಯೆಗಳು ಬಗೆಹರಿಯಲಿದ್ದು, ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರವಾಗಿರಲಿದ್ದು, ಸರ್ಕಾರಿ ಕೆಲಸಕ್ಕೆ ಪ್ರಯತ್ನ ನಡೆಸುತ್ತಿರುವವರೆಗೆ ಈ ಅವಧಿ ತುಂಬಾ ಚೆನ್ನಾಗಿರಲಿದೆ.
ಕರ್ಕ ರಾಶಿ ಭವಿಷ್ಯ (Karkataka rashi bhavishya)
ಈ ಅವಧಿಯಲ್ಲಿ ಕರ್ಕ ರಾಶಿಯವರಿಗೆ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಹೂಡಿಕೆಗೆ ಈ ಅವಧಿ ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮ ಹಾಗೂ ಸಂಗಾತಿಯ ನಡುವಿನ ಬಾ೦ಧವ್ಯ ತು೦ಬಾ ಚೆನ್ನಾಗಿರಲಿದೆ. ಕುಟುಂಬದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿರಲಿದೆ.
ಸಿಂಹ ರಾಶಿ (Simha rashi bhavishya)
ಸೂರ್ಯ ಸಂಚಾರದಿ೦ದ ಸಿ೦ಹ ರಾಶಿಯವರ ಬದುಕಿನಲ್ಲಿ ಅನುಕೂಲಕರ ಪ್ರಯೋಜನವಿದ್ದು, ಆರ್ಥಿಕವಾಗಿ ತುಂಬಾ ಒಳ್ಳೆಯ ಲಾಭ ಪಡೆಯುತ್ತಾರೆ. ರಿಯಲ್ ಎಸ್ಟೇಟ್ ಸಂಬಂಧಿಸಿದ ವ್ಯವಹಾರ ಮಾಡುವುದಾದರೆ ಈ ಅವಧಿಯಲ್ಲಿ ನೀವು ಉತ್ತಮ ಪ್ರಯೋಜನ ಪಡೆಯುತ್ತೀರಿ.
ಕನ್ಯಾ ರಾಶಿ ಭವಿಷ್ಯ (Kanya rashi)
ವ್ಯಾಪಾರಿಗಳು ಸರಿಯಾಗಿ ಯೋಜನೆ ರೂಪಿಸಿದರೆ ಉತ್ತಮ ಪ್ರಯೋಜನ ಪಡೆಯುತ್ತೀರಿ. ಇನ್ನು ಈ ಅವಧಿಯಲ್ಲಿ ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುವುದು. ವಿದೇಶದಲ್ಲಿ ನೀವು ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಒಳ್ಳೆಯ ಕೆಲಸ ಸಿಗಲಿದೆ. ವೃತ್ತಿ ಬದುಕು ವೇಗ ಪಡೆಯಲಿದೆ.
ಮಕರ ರಾಶಿ ಭವಿಷ್ಯ (Makara rashi)
ಸೂರ್ಯನು ಮಕರ ರಾಶಿಯಲ್ಲಿ 11ನೇ ಮನೆಯಲ್ಲಿ ಪ್ರವೇಶಿಸಲಿದ್ದಾನೆ. ಇದರಿಂದ ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗಲಿದ್ದು, ವ್ಯಾಪಾರಿಗಳಿಗೆ ಲಾಭವಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿರಲಿದೆ, ಹಣದ ಉಳಿತಾಯ ಮಾಡಲು ಸಾಧ್ಯವಾಗುವುದು.