Silverware : ಬೆಳ್ಳಿಯ ಆಭರಣಗಳಿಂದ ಟೀ ಟ್ರೇಗಳು ಅಥವಾ ಕ್ಯಾಂಡಲ್‌ಸ್ಟಿಕ್‌ಗಳವರೆಗೆ ಎಲ್ಲಾ ರೀತಿಯ ಬೆಳ್ಳಿಯನ್ನು ಸ್ವಚ್ಛಗೊಳಿಸಲು ಉತ್ತಮ ವಿಧಾನ ಇಲ್ಲಿದೆ. ಮನೆಯಲ್ಲಿ ಕಂಡುಬರುವ ಬೆಳ್ಳಿಯ ಉಪಕರಣಗಳನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂಬುದನ್ನು ನೋಡೋಣ
silverware ದಿನವೂ ಹೀಗೆ ತೊಳೆಯಿರಿ
ನಿತ್ಯವೂ ಬೆಳ್ಳಿ ಪಾತ್ರೆ ತೊಳೆಯುತ್ತಿದ್ದರೆ, ನಿಂಬೆ ರಸಕ್ಕೆ ಅರ್ಧ ಚಮಚ ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಬೆರಸಿ ಇವೆಲ್ಲವನ್ನೂ ಮಿಶ್ರಣ ಮಾಡಿ ಮೃದುವಾದ ಬ್ರೆಷ್‌ನಿಂದ ಬೆಳ್ಳಿ ಪಾತ್ರೆಗಳನ್ನು ಉಜ್ಜಿ ತೊಳೆಯಿರಿ. ಇದರಿಂದ ನೈಸರ್ಗಿಕವಾಗಿ ಬೆಳ್ಳಿ ಪಾತ್ರೆಗಳು ಶುಚಿಯಾಗಿ ಹೊಳೆಯುತ್ತವೆ.
ಟೊಮಾಟೊ ಕೆಚಪ್
ಬೆಳ್ಳಿ ಪಾತ್ರೆಗಳ ಜಿಡ್ಡನ್ನು ತೆಗೆಯಲು ಟೊಮಾಟೊ ಕೆಚಪ್ ತುಂಬಾ ಸಹಕರಿಯಾಗಿದೆ. ಕೆಚಪ್‌ಅನ್ನು ಒ೦ದು ಬಟ್ಟೆಗೆ ಹಾಕಿಕೊಂಡು ಜಿಡ್ಡಿರುವ ಬೆಳ್ಳಿ ಪಾತ್ರೆಗೆ ನೀರಿನ ಬೆರೆಸದೆ ಉಜ್ಜಿಕೊಳ್ಳಿ. ನಂತರ ನೀರಿನಲ್ಲಿ ಚೆನ್ನಾಗಿ ತೊಳೆದಿಡಿ. ನೀರಿನಲ್ಲಿ ತೊಳದ ಮೇಲೆ ಬಟ್ಟೆಯಿ೦ದ ಒರೆಸಿಡಿ.
ಹ್ಯಾಂಡ್ ಸ್ಯಾನಿಟೈಸರ್
ಹ್ಯಾಂಡ್ ಸ್ಯಾನಿಟೈಸರ್ ಕೂಡ ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸಲು ಬಳಸಬಹುದು. ಬೀರುವಿನಲ್ಲಿ ಇಟ್ಟ ಬೆಳ್ಳಿ ಆಭರಣಗಳು ಕಪ್ಪಾಗಿದ್ದರೆ ಅದಕ್ಕೆ ಸ್ಯಾನಿಟೈಸರ್ ಹಾಕಿ ಶುದ್ಧವಾದ ಬಿಳಿ ಬಟ್ಟೆಯಿಂದ ಕೂಡಲೇ ಉಜ್ಜಿ ಒರೆಸಿಕೊಳ್ಳಿ. ಬೆಳ್ಳಿ ಪಾತ್ರೆಗಳು ಮತ್ತೆ ಹೊಳಪು ಪಡೆದುಕೊಳ್ಳುತ್ತವೆ.
ಟೂತ್ ಪೇಸ್ಟ್
ಒ೦ದು ಬಿಳಿ ಶುಚಿಯಾದ ಬಟ್ಟೆಯ ಮೇಲೆ ಟೂತ್‌ಪೇಸ್ಟ್ ಹಾಕಿಕೊ೦ಡು ಬೆಳ್ಳಿ ಪಾತ್ರೆಗಳ ಮೇಲೆ ಉಜ್ಜಿದರೆ ಪಾತ್ರೆಗಳು ಮತ್ತೆ ಹೊಳೆಯುತ್ತವೆ.
ನಿಂಬೆಹಣ್ಣು
ಒ೦ದು ನಿ೦ಬೆ ಹಣ್ಣನ್ನು ಹಿಂಡಿಕೊಳ್ಳಿ, ಅದಕ್ಕೆ ಒ೦ದು ಚಮಚ ಉಪ್ಪು, ಒಂದು ಚಮಚ ಸೋಡಾಪುಡಿ ಹಾಕಿ ಅರ್ಧ ಲೋಟ ನೀರನ್ನು ಹಾಕಿ ಕಲಿಸಿಕೊಳ್ಳಿ. ಎಲ್ಲಾ ಪಾತ್ರೆಗಳನ್ನು ಹೀಗೆ ತೊಳೆದರೆ ಕಲೆಗಳು ಸುಲಭವಾಗಿ ಹೋಗುತ್ತದೆ ಮತ್ತು ಬೆಳ್ಳಿ ಪಾತ್ರೆಗಳನ್ನು ತೊಳೆಯಲು ಹೆಚ್ಚು ಶ್ರಮ ಬೇಕಾಗುವುದಿಲ್ಲ.
silverware ಜೋಡಿಸಿಡುವುದು ಹೇಗೆ?
ಬೆಳ್ಳಿ ಪಾತ್ರೆಗಳನ್ನು ಎತ್ತಿಡಬೇಕಾದರೆ ಶುಭ್ರವಾದ ಬಿಳಿ ಬಟ್ಟೆಯಲ್ಲಿ ಪ್ರತಿಯೊ೦ದು ಬೆಳ್ಳಿ ಪಾತ್ರೆಗಳನ್ನು ಸರಿಯಾಗಿ ಸುತ್ತಿ, ಮತ್ತೊಂದು ರಟ್ಟಿನ ಬಾಕ್ಸ್‌ನಲ್ಲಿ ಹಾಕಿಡಿ. ಗಾಳಿಯಾಡದಂತೆ ಮುಚ್ಚಿ. ಹೀಗೆ ಮಾಡಿದರೆ ಬೀರುವಿನಲ್ಲಿ ಇಟ್ಟ ಬೆಳ್ಳಿ ಪಾತ್ರೆಗಳು ತಮ್ಮ ಹೊಳಪನ್ನು ಕಳೆದುಕೊಳ್ಳುವುದಿಲ್ಲ.