Onion price : ಕಳೆದ ಕೆಲವು ದಿನಗಳಿಂದ ತಟಸ್ಥವಾಗಿದ್ದ ಈರುಳ್ಳಿ ಬೆಲೆ ಇದೀಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದು, ದೆಹಲಿ, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಗಗನಕ್ಕೇರುತ್ತಿದ್ದು, ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ಈರುಳ್ಳಿ ಬೆಲೆ ಏರಿಕೆ ಕಂಡಿರುವುದು ರೈತರ ಮೊಗದಲ್ಲಿ ಸಂಸತ ತಂದರೆ, ಮತ್ತೊಂದೆಡೆ ಜನರಿಗೆ ಕಣ್ಣೀರು ತರಿಸುವಂತಾಗಿದೆ. ₹40 ರಿಂದ ₹50 ನಷ್ಟಿದ್ದ ಈರುಳ್ಳಿ ದರ ಸಗಟು ಮಾರುಕಟ್ಟೆಯಲ್ಲಿ ₹70 ರಿಂದ ₹80ಕ್ಕೆ ಏರಿಕೆಯಾಗಿದೆ. ಹಿಂಗಾರು ಮಳೆಯಿಂದ ಬೆಳೆ ನಾಶವಾಗಿದೆ. ಹೀಗಾಗಿ ಮಾರುಕಟ್ಟೆಗೆ ಗುಣಮಟ್ಟದ ಈರುಳ್ಳಿ ಬರುತ್ತಿಲ್ಲ. ಬೇಡಿಕೆ ಹೆಚ್ಚಾದ ಕಾರಣ ₹100ರ ಗಡಿಯತ್ತ ಸಾಗುತ್ತಿದೆ.
ಇದನ್ನೂ ಓದಿ: BPCL SBI credit card : ಈ ಕಾರ್ಡ್ ಇದ್ದರೆ ರಿಯಾಯಿತಿ ಬೆಲೆಗೆ ಪೆಟ್ರೋಲ್, ಡೀಸೆಲ್
ಬೆಂಗಳೂರಿನಲ್ಲಿ ಚಿಲ್ಲರೆಯಾಗಿ KGಗೆ ₹60 ರಿಂದ ₹80ಕ್ಕೆ ಮಾರಾಟವಾಗುತ್ತಿದ್ದು, ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ, ಪ್ರತಿ ಕೆಜಿ ಈರುಳ್ಳಿ ಬೆಲೆ ನವೆಂಬರ್‌ನಲ್ಲಿ 80 ರೂ.ಗಳಿಗೆ ತಲುಪಿದೆ. ಇದು ಕಳೆದ 5 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದಂತಾಗಿದೆ.