Pushya Sankashta Chaturthi : ಪುಷ್ಯ ಸಂಕಷ್ಟ ಚತುರ್ಥಿಯನ್ನು (Pushya Sankashta Chaturthi) ತಿಲಕುಟ ಚತುರ್ಥಿ, ಎಳ್ ಚೌತಿ, ವಕ್ರತುಂಡ ಚತುರ್ಥಿ & ಮಹಿ ಚೌತಿ ಎ೦ದು ಕರೆಯುತ್ತಾರೆ. ಈ ದಿನದಂದು ಗಣೇಶನಿಗೆ ಎಳ್ಳು ಅರ್ಪಿಸಿ, ಉಪವಾಸದ ಕೊನೆಯಲ್ಲಿ ಎಳ್ಳನ್ನು ತಿನ್ನುವುದು ಮತ್ತು ಎಳ್ಳು ದಾನ ಮಾಡುವುದರಿ೦ದ ನಿಮ್ಮೆಲ್ಲ ಆಸೆಗಳು ಈಡೇರುತ್ತವೆ.
ಇದನ್ನೂ ಓದಿ: Rashi bhavishya | ಶುಕ್ರವಾರದ ರಾಶಿ ಭವಿಷ್ಯ, 17 ಜನವರಿ 2025
ಪುಷ್ಯ ಸಂಕಷ್ಟ ಚತುರ್ಥಿ ಮುಹೂರ್ತ (Pushya Sanksha Chaturthi Muhurta)
- ಶುಭ ಮುಹೂರ್ತ: ಜ. 17, ಬೆಳಗ್ಗೆ 2 04:06 ರಿಂದ ಜ.18, ಬೆಳಗ್ಗೆ 5:30 ರವರೆಗೆ
- ಚ೦ದ್ರೋದಯ ಸಮಯ- ರಾತ್ರಿ 09:09ಕ್ಕೆ
- ಅಭಿಜೀತ್ ಮುಹೂರ್ತ – ಮಧ್ಯಾಹ್ನ 12:10 ರಿಂದ 12:52 ರವರೆಗೆ
ಪುಷ್ಯ ಸಂಕಷ್ಟ ಚತುರ್ಥಿ ಪೂಜೆ ವಿಧಾನ (Pushya Sankasha Chaturthi Puja method)
- ಬೆಳಗ್ಗೆ ಬೇಗನೆ ಎದ್ದು, ಸ್ನಾನ ಮಾಡಿ, ಉಪವಾಸ ಪ್ರತಿಜ್ಞೆ ಮಾಡಿ
- ಚ೦ದ್ರೋದಯಕ್ಕೆ ಮುನ್ನ ಸಂಜೆ ಶ್ರೀ ಗಣೇಶನನ್ನು ಪೂಜಿಸಿ
- ಕುಂಕುಮ ತಿಲಕ ಹಚ್ಚಿ, ಹೂವಿನ ಹಾರ ಹಾಕಿ ಹಸುವಿನ ತುಪ್ಪದ ದೀಪ ಹಚ್ಚಿ
- ಪೂಜೆಯ ಸಮಯದಲ್ಲಿ, ಓಂ ಗಣ ಗಣಪತಯೇ ನಮಃ ಮಂತ್ರ ಜಪಿಸಿ
- ಶ್ರೀ ಗಣೇಶನಿಗೆ ಅರಿಶಿನದೊಂದಿಗೆ ಬೆರೆಸಿದ ದುರ್ವಾವನ್ನು ಅರ್ಪಿಸಿ
- ಚ೦ದ್ರ ಉದಯಿಸಿದಾಗ, ಆತನನ್ನು ಪೂಜಿಸಿ & ನೀರನ್ನು ಅರ್ಪಿಸಿ
ಇದನ್ನೂ ಓದಿ: Rashi bhavishya | ರಾಶಿ ಭವಿಷ್ಯ ಗುರುವಾರ 16 ಜನವರಿ 2025
ಪುಷ್ಯ ಸಂಕಷ್ಟ ಚತುರ್ಥಿ ಮಂತ್ರಗಳು (Pushya Sankashta Chaturthi Mantras)
- ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ
- ನಿರ್ವಿಘ್ನಂ ಕುರುಮೇ ದೇವ
- ಸರ್ವ ಕಾರ್ಯೇಷು ಸರ್ವದಾ
- ಓಂ ಗಣ ಗಣಪತಯೇ ನಮಃ
- ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ
- ತನ್ನೋ ದಂತಿಃ ಪ್ರಚೋದಯಾತ್
ಇದನ್ನೂ ಓದಿ: Rashi bhavishya | ಬುಧವಾರದ ರಾಶಿ ಭವಿಷ್ಯ, 15 ಜನವರಿ 2025
ಪುಷ್ಯ ಸಂಕಷ್ಟ ಚತುರ್ಥಿ ನಿಯಮಗಳು (Pushya Sankashta Chaturthi Rules)
- ಸಂಜೆ ಚ೦ದ್ರದೇವನಿಗೆ & ಗಣೇಶನಿಗೆ ಪೂಜೆ ಮಾಡಿ
- ಈ ದಿನ ಎಳ್ಳುಂಡೆಯನ್ನು ತಯಾರಿಸಿ, ಪ್ರಸಾದವಾಗಿ ಹಂಚಿರಿ
- ಗೌರಿ, ಗಣೇಶ, ಚಂದ್ರನಿಗೆ ಎಳ್ಳು, ಕಬ್ಬು, ಪೇರಲ, ಬೆಲ್ಲ, ತುಪ್ಪ ಅರ್ಪಿಸಿ
- ಈ ವಸ್ತುಗಳ ಅರ್ಪಣೆಯಿಂದ ಎಲ್ಲಾ ಕೆಲಸದಲ್ಲೂ ಯಶಸ್ಸು ದೊರೆಯುತ್ತದೆ
- ಈ ದಿನ ಚಂದ್ರನನ್ನು ನೋಡಿದ ಮೇಲೆ ಉಪವಾಸ ಅಂತ್ಯಗೊಳಿಸಿ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.