ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಇಂದಿನಿಂದ ‘ಭಾರತೀಯ ಭಾಷಾ ಉತ್ಸವ” ಕಾರ್ಯಕ್ರಮವನ್ನು ಕಡ್ಡಾಯವಾಗಿ ಆಯೋಜಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಭಾರತೀಯ ಭಾಷಾ ಉತ್ಸವ’ವನ್ನು ಸ್ವಾತಂತ್ರ್ಯ ಹೋರಾಟಗಾರ, ಪೂಜ್ಯ ಮಹಾಕವಿ ಸುಬ್ರಮಣ್ಯ ಭಾರತೀ ರವರ ಜನ್ಮದಿನಾಚರಣೆಯ ಅಂಗವಾಗಿ ದಿನಾಂಕ: 04.12.2024 ರಿಂದ ದಿನಾಂಕ: 11.12. 2024 ರವರೆಗೆ ಶಾಲಾ ಹಂತದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು “ಭಾಷೆಗಳ ಮೂಲಕ ಏಕತೆ ” ಎಂಬ ಥೀಮ್ ನೊಂದಿಗೆ ಶಾಲಾ ಮಕ್ಕಳಲ್ಲಿ ಭಾಷಾಭಿಮಾನ ಬೆಳಸಿ, ನಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸಲು ವಿವಿಧ ಭಾಷಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೂಚನೆ ನೀಡಿದೆ.
ಉದ್ದೇಶಗಳು: ಭಾಷೆಗಳ ಮೂಲಕ ನಮ್ಮ ಸಮಾಜವನ್ನು ಶ್ರೀಮಂತಗೊಳಿಸುವುದು. ನಮ್ಮ ನಾಗರಿಕರಲ್ಲಿ, ಶಾಲೆಯ ವಿದ್ಯಾರ್ಥಿಗಳಲ್ಲಿ ಭಾರತೀಯ ಭಾಷೆಗಳು ಮತ್ತು ಸಾಹಿತ್ಯದ ಬಗ್ಗೆ ಆಳವಾದ ಮೆಚ್ಚುಗೆಯನ್ನು ಬೆಳೆಸುವುದು. ನಮ್ಮ ದೇಶದ ಭಾಷಾ ಪರಂಪರೆಯನ್ನು ಸಂರಕ್ಷಿಸಿ. ಅದರ ಬಗ್ಗೆ ಹಮ್ಮೆಯ ಭಾವನ ಮೆಚ್ಚುಗೆಯನ್ನು ಬೆಳೆಸುವುದು. ಹೊಸ ಪೀಳಿಗೆಯ ಭಾಷಾಭಿಮಾನಿಗಳಿಗೆ ಸ್ಪೂರ್ತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ತಮ್ಮ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿರವರು ಸೂಚಿಸಿರುವ ಚಟುವಟಿಕೆಗಳನ್ನು ಹಮ್ಮಿಕೊಂಡು ಎಲ್ಲಾ ಶಾಲೆಗಳಲ್ಲಿ ‘ಭಾರತೀಯ ಭಾಷಾ ಉತ್ಸವ “ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು. ಕಾರ್ಯಕ್ರಮ ಅನುಷ್ಠಾನಗೊಳಿಸಿದ ಬಗ್ಗೆ ಮಾಹಿತಿಯನ್ನು ನೀಡಿರುವ spread sheet ನಲ್ಲಿ ಒದಗಿಸುವುದು ಎಂದು ತಿಳಿಸಲಾಗಿದೆ.