Pan-Aadhaar Link: ತೆರಿಗೆ ವಂಚನೆ ತಡೆಯಲು ಮತ್ತು ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಪ್ಯಾನ್-ಆಧಾರ್ ಲಿಂಕ್ ಅನ್ನು (Pan-Aadhaar Link) ಕಡ್ಡಾಯಗೊಳಿಸಿದೆ. ಸರಕಾರ ನೀಡುವ ಯೋಜನೆಗಳ ಲಾಭ ಪಡೆಯಲು ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆದರೆ, ಸರ್ಕಾರ ಇದಕ್ಕೆ ಗಡುವು ಕೂಡ ನೀಡಿದೆ. ಜೂನ್ 30 ರೊಳಗೆ ಆಧಾರ್-ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಖಾತೆಯನ್ನು ಅಮಾನತುಗೊಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಸಾಧ್ಯತೆಯಿದೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಈ ಹಿಂದೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಮಾರ್ಚ್ 28 ಕ್ಕೆ ಗಡುವನ್ನು ನಿಗದಿಪಡಿಸಿತ್ತು. ಆದರೆ ಅನೇಕ ಜನರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿಲ್ಲ, ಆದ್ದರಿಂದ ಮತ್ತೊಂದು ಅವಕಾಶವನ್ನು ನೀಡಿದ್ದು, ಈ ಬಾರಿ ಜೂನ್ 30ರವರೆಗೆ ಗಡುವು ವಿಸ್ತರಿಸಲಾಗಿದ್ದು, ಇದು ಕೂಡ ಕೆಲವೇ ವಾರಗಳಲ್ಲಿ ಕೊನೆಗೊಳ್ಳಲಿದೆ.
ಇದನ್ನು ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ನೋಡಿ
ಹಣಕಾಸಿನ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡುಲು ನಿರ್ಣಾಯಕವಾಯಿದೆ
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳು ವಿವಿಧ ಸರ್ಕಾರಿ ಏಜೆನ್ಸಿಗಳು ನೀಡುವ ವಿಭಿನ್ನ ಗುರುತಿನ ಸಂಖ್ಯೆಗಳಾಗಿವೆ. PAN, ಹತ್ತು-ಅಂಕಿಯ ಆಲ್ಫಾನ್ಯೂಮರಿಕ್ ಐಡೆಂಟಿಫೈಯರ್, ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಹನ್ನೆರಡು ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಾದ ಆಧಾರ್ ಅನ್ನು UIDAI ನೀಡುತ್ತದೆ.
ಇದನ್ನು ಓದಿ: ಹಣ ಹಿಂಪಡೆಯಲು ಯಾರು ಅರ್ಹರು? ಯಾವ ದಾಖಲೆಗಳು ಅಗತ್ಯವಿದೆ? ಇಲ್ಲಿದೆ ನೋಡಿ
ಇವೆರಡರಲ್ಲಿ ಬೇರೆ ಬೇರೆ ಲಾಭಗಳಿವೆ. ಇವುಗಳನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದನ್ನು ಮಾಡುವುದರಿಂದ, ಸರ್ಕಾರವು ಹಣಕಾಸಿನ ವಹಿವಾಟಿನ ಮೇಲ್ವಿಚಾರಣಾ ಸಾಮರ್ಥ್ಯವನ್ನು ಹೆಚ್ಚಿಸಲು, ತೆರಿಗೆ ವಂಚನೆಯನ್ನು ಪತ್ತೆಹಚ್ಚಲು ಮತ್ತು ಬಹು ಪಾನ್ ಕಾರ್ಡ್‌ಗಳ ದುರುಪಯೋಗವನ್ನು ತಡೆಯಲು ಸಾಧ್ಯವಾಗುತ್ತದೆ.
NPS ನೊಂದಿಗೆ ಸ್ಥಿರ ಆದಾಯ
ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಭಾರತ ಸರ್ಕಾರವು ಪರಿಚಯಿಸಿದ ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯು ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಸ್ಥಿರ ಆದಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಆಕರ್ಷಕ ಆದಾಯ ಮತ್ತು ತೆರಿಗೆ ಪ್ರಯೋಜನಗಳೊಂದಿಗೆ ಜನಪ್ರಿಯವಾಗಿದೆ. NPS ಯೋಜನೆಯ ಪ್ರಯೋಜನಗಳನ್ನು ಪಡೆಯಲು ಪ್ಯಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಲಿಂಕ್ ಮಾಡದಿದ್ದರೆ NPS ಯೋಜನೆಗೆ ಸಂಬಂಧಿಸಿದ ನವೀಕರಣಗಳನ್ನು ಪಡೆಯುವಲ್ಲಿ ಅಡಚಣೆ ಉಂಟಾಗಬಹುದು.
ಇದನ್ನು ಓದಿ: ಯಾವುದೇ ಗ್ಯಾರಂಟಿ ಇಲ್ಲದೆ ರೂ.10 ಲಕ್ಷ ಸಾಲ; ಮೋದಿ ಸರ್ಕಾರ ಪರಿಚಯಿಸಿದ ಯೋಜನೆಗೆ ಅರ್ಜಿ ಸಲ್ಲಿಸಿವುದು ಹೇಗೆ?
ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಹೇಗೆ
- ಮೊದಲು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ https://www.incometax.gov.in/iec/foportal/ ಅನ್ನು ತೆರೆಯಿರಿ.
- ಮುಖಪುಟದಲ್ಲಿ ಲಿಂಕ್ ಆಧಾರ್ (Link Aadhaar) ಪ್ಯಾನ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇದು ಹೊಸ ಪುಟವನ್ನು ತೆರೆಯುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಮೂದಿಸಿ.
- ಪೇಮೆಂಟ್‌ಗಾಗಿ ಆಯ್ಕೆ ಬರಲಿದ್ದು, ಅದ್ರಲ್ಲಿ e-pay Tax ಪೇಜ್ ಓಪನ್ ಮಾಡಿ ಅದರಲ್ಲಿ ಪಾನ್ ನಂಬರ್, ಮೊಬೈಲ್ ನಂಬರ್ ನಮೂದಿಸಬೇಕು.
- ಆ ನಂತರ ರೂ 1000 ಪಾವತಿಸುವ ಮೂಲಕ ಪ್ಯಾನ್ ಆಧಾರ್ ಲಿಂಕ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು.
ಪೇಮೆಂಟ್‌ಗಾಗಿ ಆಯ್ಕೆ ಬರುತ್ತದೆ. ಅದನ್ನು ಆರಿಸಬೇಕು. - ಪಾವತಿ ಮಾಡಿದ 4-5 ದಿನಗಳ ನಂತರ ಪಾನ್-ಆಧಾರ್ ಲಿಂಕ್ ಮಾಡಬೇಕು.
- ಇನ್ನು egov-nsdl.co.in ಅಥವಾ utiitsl.com ಸರ್ಕಾರಿ ವೆಬ್‌ಸೈಟ್ ಮೂಲಕವೂ ಸಹ ಪ್ಯಾನ್ ಆಧಾರ್ ಲಿಂಕ್ ಮಾಡಬಹುದು.
English Summary: National Pension System (NPS) account may be suspended or deactivated if Aadhaar-PAN is not linked by June 30
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ ಮಾಡಿ |
ಶೇರ್ ಚಾಟ್ | ಇಲ್ಲಿ ಕ್ಲಿಕ್ ಮಾಡಿ |
ಇದನ್ನು ಓದಿ: ಆಧಾರ್ ಹೊಂದಿರುವವರಿಗೆ ಎಚ್ಚರಿಕೆ; ಈ 2 ಕೆಲಸಗಳು ಈ ತಿಂಗಳಲ್ಲಿಯೇ ಪೂರ್ಣಗೊಳಿಸಿ..ಇಲ್ಲದಿದ್ದರೆ ಸಮಸ್ಯೆ..!