• Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
No Result
View All Result
Kannada Latest news | Online Kannada News | Kannada News Live | Karnataka News | ಕನ್ನಡ ನ್ಯೂಸ್ | ವಿಜಯಪ್ರಭ- Vijayaprabha
No Result
View All Result
  • Home
  • ಪ್ರಮುಖ ಸುದ್ದಿ
  • ಆರೋಗ್ಯ
  • ಸಿನೆಮಾ
  • ಲೋಕಲ್ ಸುದ್ದಿ
  • ರಾಜಕೀಯ
  • Dina bhavishya
  • ವೆಬ್ ಸ್ಟೋರಿಸ್
  • Jobs News
Home ಪ್ರಮುಖ ಸುದ್ದಿ

Shakti Smart Card: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್​ ಕಾರ್ಡ್​ ಕಡ್ಡಾಯ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ನೋಡಿ

Shakti Smart Card: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಸಿದ್ದು, ಶಕ್ತಿ ಸ್ಮಾರ್ಟ್​ ಕಾರ್ಡ್​ ಕಡ್ಡಾಯ. ಈ ಬಸ್ಸುಗಳಿಗಿಲ್ಲ ಉಚಿತ ಪ್ರಯಾಣ. ಬಸ್​​ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್. ಈ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಭಾಗ್ಯವಿಲ್ಲ. ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ನೋಡಿ

VijayaprabhabyVijayaprabha
June 6, 2023
inಪ್ರಮುಖ ಸುದ್ದಿ
0
shakti yojane
0
SHARES
0
VIEWS
Share on FacebookShare on Twitter

Shakti Smart Card : ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣದ ಬಹುನಿರೀಕ್ಷಿತ ಗ್ಯಾರಂಟಿ “ಶಕ್ತಿ ಯೋಜನೆಯ” (shakthi yojane) ಕುರಿತು ಅಧಿಕೃತ ಆದೇಶವನ್ನು ಸರ್ಕಾರ ಪ್ರಕಟಿಸಿದ್ದು, ಜೂನ್ 11ರಿಂದ ಜಾರಿಗೆ ಬರಲಿದೆ. ಈ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಾಮಾನ್ಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಒದಗಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ.

shakti yojane
Shakti Smart Card under Shakti Yojana

ಮಹಿಳೆಯರ ಉಚಿತ ಪ್ರಯಾಣಕ್ಕೆ ಸ್ಮಾರ್ಟ್​​ ಕಾರ್ಡ್ ಕಡ್ಡಾಯ: ಅರ್ಜಿ ಸಲ್ಲಿಕೆ ಹೇಗೆ?

  • ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ‘ಶಕ್ತಿ ಸ್ಮಾರ್ಟ್​​ಕಾರ್ಡ್’ (Shakti Smart Card) ಹೊಂದುವುದು ಕಡ್ಡಾಯವಾಗಿದೆ.
  • ಸೇವಾ ಸಿಂಧು ಪೋರ್ಟಲ್ (Seva Sindhu Portal) ಮೂಲಕ ಅರ್ಜಿ ಸಲ್ಲಿಸಿ, ಶಕ್ತಿ ಸ್ಮಾರ್ಟ್‌ ಕಾರ್ಡ್‌ ಪಡೆಯಬಹುದು.
  • ಶಕ್ತಿ ಸ್ಮಾರ್ಟ್‌ಕಾರ್ಡ್‌ ವಿತರಿಸುವವರೆಗೆ ಆಧಾರ್ ಕಾರ್ಡ್/ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರದ ಇಲಾಖೆ/ ಸರ್ಕಾರಿ ಸ್ವಾಮ್ಯದ ಕಛೇರಿಗಳು ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸದ ಯಾವುದೇ ಗುರುತಿನ ಚೀಟಿಗಳನ್ನು ಉಚಿತ ಟಿಕೆಟ್‌ ವಿತರಿಸುವ ಸ೦ದರ್ಭ ಪರಿಗಣಿಸಲಾಗುತ್ತದೆ.

ಇದನ್ನು ಓದಿ: PF ಹಣ ಹಿಂಪಡೆಯಲು ಯಾರು ಅರ್ಹರು? ಯಾವ ದಾಖಲೆಗಳು ಅಗತ್ಯವಿದೆ? ಇಲ್ಲಿದೆ ನೋಡಿ

ಉಚಿತ ಬಸ್ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟ

  • ಈ ಯೋಜನೆಗಾಗಿ ಮಹಿಳೆಯರು ಶಕ್ತಿ ಸ್ಮಾರ್ಟ್​ ಕಾರ್ಡ್ (Shakti Smart Card) ಕಡ್ಡಾಯವಾಗಿ ಪಡೆಯಬೇಕಿದ್ದು, ಈ ಕುರಿತು ಮಾರ್ಗಸೂಚಿ ಪ್ರಕಟಿಸಲಾಗಿದೆ.
  • ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ. ಮಹಿಳೆಯರು ಸೇವಾ ಸಿಂಧ ಮೂಲಕ ಅರ್ಜಿಗಳನ್ನು ಪಡೆಯಬೇಕಾಗುತ್ತದೆ.
  • ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಪ್ರಕ್ರಿಯೆ ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು.
  • ಈ ಯೋಜನೆಯಡಿ ನಾಲ್ಕು, ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್/ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ ಭರಿಸಲಾಗುವುದು.
  • ಮಹಿಳೆಯರ ಜತೆ ಲಿಂಗತ್ವ ಅಲ್ಪಸಂಖ್ಯಾತರಿಗೂ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಿದೆ.
  • ಕರ್ನಾಟಕ ರಾಜ್ಯದ ನಗರ, ಸಾಮಾನ್ಯ ಹಾಗೂ ವೇಗದೂತ (ಐ/65) ಬಸ್ಸುಗಳಲ್ಲಿ ವಿದ್ಯಾರ್ಥಿನಿಯರು ಸೇರಿ ಎಲ್ಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದು.

ಇದನ್ನು ಓದಿ: ಯಾವುದೇ ಗ್ಯಾರಂಟಿ ಇಲ್ಲದೆ ರೂ.10 ಲಕ್ಷ ಸಾಲ; ಮೋದಿ ಸರ್ಕಾರ ಪರಿಚಯಿಸಿದ ಯೋಜನೆಗೆ ಅರ್ಜಿ ಸಲ್ಲಿಸಿವುದು ಹೇಗೆ?

“ಮೂರು ತಿಂಗಳಲ್ಲಿ ಶಕ್ತಿ ಸ್ಮಾರ್ಟ್‌ ಕಾರ್ಡ್‌ ವಿತರಿಸಬೇಕು”

ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು,, ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು ಸಾರ್ವಜನಿಕರು ಸಂಬಂಧಪಟ್ಟ ಸಾರಿಗೆ ಇಲಾಖೆಗೆ ಸಲ್ಲಿಸಬೇಕು. ಅಂತೆಯೇ ನಿಗಮಗಳು ಶಕ್ತಿ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಸರ್ಕಾರವು ಆದೇಶದಲ್ಲಿ ಸಾರಿಗೆ ನಿಗಮಗಳಿಗೆ ಸೂಚಿಸಲಾಗಿದೆ.

Parineeti Chopra Raghav Chadha share wedding photos, Priyanka Chopra blessed
Parineeti Chopra Raghav Chadha share wedding photos, Priyanka Chopra blessed
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರು
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?
ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?

ಈ ಬಸ್ಸುಗಳಿಗಿಲ್ಲ ಉಚಿತ ಪ್ರಯಾಣ

ಎಲ್ಲಾ ವರ್ಗಗಳ ಮಹಿಳೆಯರಿಗೆ ರಾಜ್ಯದೊಳಗೆ ಎಲ್ಲ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರಲಿದೆ. ಆದರೆ, ರಾಜಹಂಸ, ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್‌ ಕ್ಲಾಸ್‌…ಮುಂತಾದ ಐಷಾರಾಮಿ ಬಸ್‌ಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. BMTC ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಪುರುಷರಿಗೆ ಶೇ 50ರಷ್ಟು ಆಸನಗಳನ್ನು ಮೀಸಲಾಗಿಡಲಾಗಿದೆ.

ಇದನ್ನು ಓದಿ: ಆಧಾರ್ ಹೊಂದಿರುವವರಿಗೆ ಎಚ್ಚರಿಕೆ; ಈ 2 ಕೆಲಸಗಳು ಈ ತಿಂಗಳಲ್ಲಿಯೇ ಪೂರ್ಣಗೊಳಿಸಿ..ಇಲ್ಲದಿದ್ದರೆ ಸಮಸ್ಯೆ..!

ಬಸ್​​ನಲ್ಲಿ ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್..!

ಈ ಯೋಜನೆಗೆ ಕೆಲವೇ ನಿಯಮ ಜಾರಿ ಮಾಡಿದ್ದು, ಬಹುತೇಕ ಎಲ್ಲಾ ಮಹಿಳೆಯರು ಉಚಿತ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ರಾಜ್ಯದ ಮಹಿಳೆಯರು ಮಾತ್ರ ಈ ಸೇವೆ ಪಡೆಯಲಿದ್ದಾರೆ. ಹೀಗಾಗಿ ಗಡಿ ಭಾಗಗಳಲ್ಲಿ ಓಡಾಡುವ ಬಸ್​​ನಲ್ಲಿ ಸೇರಿ ಎಲ್ಲಾ ಬಸ್​ನಲ್ಲೂ ಮಹಿಳೆಯರು ತಮ್ಮ ಆಧಾರ್ ಕಾರ್ಡ್​ (Aadhaar Card) ತೋರಿಸಿ ಟಿಕೆಟ್ ಪಡೆಯಬೇಕಿದೆ. ಮಹಿಳೆಯರು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಅಥವಾ ಇತರ ಯಾವುದೇ ರಾಜ್ಯದವರಾಗಿದ್ದರೂ ಸಹ, ಅವರು ತಮ್ಮ ವಿಳಾಸವನ್ನು ಕರ್ನಾಟಕಕ್ಕೆ ವರ್ಗಾಯಿಸಿದರೆ ಉಚಿತ ಪ್ರಯಾಣಕ್ಕೆ ಅರ್ಹರಾಗಿರಲಿದ್ದಾರೆ. ಆದರೆ ಬೇರೆ ರಾಜ್ಯದವರು ಕರ್ನಾಟಕದಲ್ಲಿ ಓಡಾಡಲು ಹಣ ನೀಡಬೇಕಿದೆ.

ಈ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಭಾಗ್ಯವಿಲ್ಲ!

ರಾಜ್ಯ ಸರ್ಕಾರದ ಉಚಿತ ಬಸ್‌ ಪ್ರಯಾಣ ಕುರಿತು ದ. ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಎಲ್ಲರಿಗೂ ದೊರೆಯುವ ಸಾಧ್ಯತೆ ಕಡಿಮೆ. ಈ 2 ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳದ್ದೇ ದರ್ಬಾರು. ಮಂಗಳೂರು ನಗರ ವ್ಯಾಪ್ತಿಯಲ್ಲಿ 362 ಖಾಸಗಿ ಸಿಟಿ ಬಸ್‌ಗಳಿವೆ. ಮಂಗಳೂರು ನಗರದಲ್ಲಿ ರಾಜ್ಯ ಸರ್ಕಾರದ ಕೇವಲ 30 ಸಾರಿಗೆ ಬಸ್‌ಗಳು ಓಡಾಡುತ್ತಿವೆ. ಉಡುಪಿಯಲ್ಲೂ ಕೂಡ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ. ಇದರಿಂದಾಗಿ ಹೆಚ್ಚಿನ ಮಹಿಳೆಯರು ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.

ದೆಹಲಿ ಮಾದರಿಯಲ್ಲಿ ಮಹಿಳೆಯರಿಗೆ ಉಚಿತ್ ಬಸ್‌ ಟಿಕೆಟ್‌

ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಟಿಕೆಟ್ ನೀಡಲಾಗುತ್ತದೆ. ಉಚಿತ್‌ ಟಿಕೆಟ್‌ ಈ ವ್ಯವಸ್ಥೆಯನ್ನು ದೆಹಲಿಯ ಸರ್ಕಾರ ಕೂಡ ನೀಡಿತ್ತು. ಪಿಂಕ್‌ ಬಣ್ಣದ ಟಿಕೆಟ್‌ಗಳನ್ನು ಮಹಿಳೆರಿಗೆ ಪ್ರಯಾಣಿಸಿರುವ ಗುರುತಿಗೆ ಆಧಾರಕ್ಕಾಗಿ ನೀಡಲಾಗುತ್ತಿತ್ತು. ಉಚಿತ ಟಿಕೆಟ್ ನಡಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಟಿಕೆಟ್ ಪಡೆಯುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಹೇಳಿದೆ.

ಖಾಸಗಿ ಬಸ್‌ಗಳಲ್ಲಿಯೂ ಉಚಿತ ಪ್ರಯಾಣ?

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಘೋಷಣೆ ಬೆನ್ನಲ್ಲೇ ಸರ್ಕಾರದ ಮುಂದೆ ಹೊಸ ಪ್ರಸ್ತಾಪ ಬಂದಿದೆ. ಈಗಿರುವ ಸರ್ಕಾರದ 11000 ಬಸ್‌ಗಳಿಂದ ಈ ಯೋಜನೆ ಯಶಸ್ವಿ ಅಸಾಧ್ಯವಾಗಿದೆ. ಪ್ರತಿದಿನ 80ಲಕ್ಷ ಪ್ರಯಾಣಿಕರು ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದು ಅರ್ಧಕ್ಕರ್ಧ ಮಂದಿ ಮಹಿಳೆಯರೇ ಇದ್ದಾರೆ. ಹೀಗಾಗಿ ರಾಜ್ಯದ ಖಾಸಗಿ ಬಸ್‌ಗಳನ್ನೂ ಗ್ಯಾರಂಟಿ ಯೋಜನೆಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಖಾಸಗಿ ಬಸ್‌ ಫೆಡರೇಷನ್‌ ಮನವಿ ಮಾಡಿದೆ. ಈ ಕುರಿತು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದುನೋಡಬೇಕು.

English Summary: Guidelines for free bus travel for women have been published, Shakti Smart Card is mandatory. These buses do not have free travel. Aadhaar card for free bus travel. These women are not lucky enough to get free bus travel. How to apply? See here

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ಇಲ್ಲಿ ಕ್ಲಿಕ್ ಮಾಡಿ

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ರೂ.37ಕ್ಕಿಂತ ಕಡಿಮೆ ಬೆಲೆಗೆ ಅಡುಗೆ ಎಣ್ಣೆ.. ಸರ್ಕಾರದ ಮಹತ್ವದ ನಿರ್ಧಾರ!

Tags: Aadhaar cardApplication for Shakti Smart CardApplication for Shakti YojanaFree Bus Travel for WomenGuarantee YojanaSeva Sindhu PortalShakti Smart CardShakti Smart Card for free bus travel for womenShakti Yojanaಆಧಾರ್ ಕಾರ್ಡ್ಗ್ಯಾರಂಟಿ ಯೋಜನೆಮಹಿಳೆಯರ ಉಚಿತ ಬಸ್ ಪ್ರಯಾಣಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಶಕ್ತಿ ಸ್ಮಾರ್ಟ್​ ಕಾರ್ಡ್​ಶಕ್ತಿ ಯೋಜನೆಶಕ್ತಿ ಯೋಜನೆಗೆ ಅರ್ಜಿಶಕ್ತಿ ಸ್ಮಾರ್ಟ್​ ಕಾರ್ಡ್​ಶಕ್ತಿ ಸ್ಮಾರ್ಟ್​ ಕಾರ್ಡ್ಗೆ ಅರ್ಜಿಸೇವಾ ಸಿಂಧು ಪೋರ್ಟಲ್‌
Previous Post

Today panchanga: 06 ಜೂನ್ 2023 ಈ ದಿನ ವಿಜಯ ಮುಹೂರ್ತ, ರಾಹುಕಾಲ ಯಾವಾಗ ಬರಲಿವೆ..!

Next Post

Dina bhavishya: ಇಂದು ವೃಷಭ ರಾಶಿಗೆ ಬುಧ ಪ್ರವೇಶ.. ಯಾವ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ..!?

Next Post
Dina bhavishya

Dina bhavishya: ಇಂದು ವೃಷಭ ರಾಶಿಗೆ ಬುಧ ಪ್ರವೇಶ.. ಯಾವ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ..!?

Leave a Reply Cancel reply

Your email address will not be published. Required fields are marked *

No Result
View All Result

Recent Posts

  • Bengaluru Bandh: ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ಬಂದ್; ಏನಿರುತ್ತೆ, ಏನಿರಲ್ಲ?
  • saffron water: ಆರೋಗ್ಯವೇ ಭಾಗ್ಯ, ಕೇಸರಿ ನೀರಿನ ಅದ್ಬುತ ಪ್ರಯೋಜನಗಳು
  • Dina bhavishya: ಇಂದಿನ ಸುಕರ್ಮ ಯೋಗದಿಂದ ಈ ರಾಶಿಯವರಿಗೆ ಕೆಲಸದಲ್ಲಿ ಉತ್ತಮ ಯಶಸ್ಸು, ಜೀವನದಲ್ಲಿ ಪ್ರಗತಿ..!
  • KPSC Recruitment 2023: 230 ವಾಣಿಜ್ಯ ತೆರಿಗೆ ನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ; ಸೆಪ್ಟೆಂಬರ್ 30 ಕೊನೆ ದಿನ
  • ಅಕ್ಟೋಬರ್ 1ರಿಂದ ಈ ನಿಯಮಗಳಲ್ಲಿ ಬದಲು; ಈಗಲೇ ಈ ಕೆಲಸ ಪೂರ್ಣಗೊಳಿಸಿ

Recent Comments

    Categories

    • Dina bhavishya
    • Home
    • Jobs News
    • ಆರೋಗ್ಯ
    • ಪ್ರಮುಖ ಸುದ್ದಿ
    • ರಾಜಕೀಯ
    • ಲೋಕಲ್ ಸುದ್ದಿ
    • ಸಿನೆಮಾ
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    ahomescontents
    No Result
    View All Result
    • Home
    • ಪ್ರಮುಖ ಸುದ್ದಿ
    • ಆರೋಗ್ಯ
    • ಸಿನೆಮಾ
    • ಲೋಕಲ್ ಸುದ್ದಿ
    • ರಾಜಕೀಯ
    • Dina bhavishya
    • ವೆಬ್ ಸ್ಟೋರಿಸ್
    • Jobs News

    © 2023 vijayaprabha - Kannada News by Newbie Techy.

    Are you sure want to unlock this post?
    Unlock left : 0
    Are you sure want to cancel subscription?
    Parineeti Chopra Raghav Chadha share wedding photos, Priyanka Chopra blessedಸೌಂದರ್ಯ ಇದ್ದರೂ ಅವಕಾಶ ಸಿಗದ ನಟಿಯರುಖ್ಯಾತ ನಟಿ ಪವಿತ್ರಾ ಲೋಕೇಶ್ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿನಟಿ ಸಾರಾ ಅಲಿ ಖಾನ್​​ ಜೊತೆ ಕ್ರಿಕೆಟರ್ ಶುಭ್​ಮನ್ ಗಿಲ್ ​ಬ್ರೇಕಪ್‌? ಇಲ್ಲಿದೆ ಸಾಕ್ಷಿ!ನಟಿ ಮಹಾಲಕ್ಷ್ಮಿ ಗೆ ರವೀಂದರ್​ ಡಿವೋರ್ಸ್​ ಕೊಡ್ತಿದ್ದಾರಾ? ಈ ಬಗ್ಗೆ ನಟಿ ಹೇಳಿದ್ದೇನು?