IPL 2025 Retention List : ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರು ಇವರೇ; ಆರ್‌ಸಿಬಿ ಉಳಿಸಿಕೊಂಡದ್ದು ಯಾರನ್ನು?

IPL 2025 Retention List : ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಸಮಯ ಬಂದಿದೆ. ಫ್ರಾಂಚೈಸಿಗಳು ತಮ್ಮ IPL ರಿಟೆನ್ಶನ್ ಪಟ್ಟಿಯನ್ನು ಸಲ್ಲಿಸಿವೆ. ಈ ಮಟ್ಟಿಗೆ, ಯಾವ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ಉಳಿಸಿಕೊಂಡಿವೆ? ಎಷ್ಟು ಪಾವತಿಸಿ…

IPL 2025 Retention List

IPL 2025 Retention List : ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ಸಮಯ ಬಂದಿದೆ. ಫ್ರಾಂಚೈಸಿಗಳು ತಮ್ಮ IPL ರಿಟೆನ್ಶನ್ ಪಟ್ಟಿಯನ್ನು ಸಲ್ಲಿಸಿವೆ. ಈ ಮಟ್ಟಿಗೆ, ಯಾವ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ಉಳಿಸಿಕೊಂಡಿವೆ? ಎಷ್ಟು ಪಾವತಿಸಿ ಉಳಿಸಿಕೊಂಡಿವೆ? ಎಂಬುದರ ವಿವರಗಳು ಇಲ್ಲಿವೆ

ಹೌದು, ಫ್ರಾಂಚೈಸಿಗಳು ಐಪಿಎಲ್ 2025 ರ ಮೆಗಾ ಹರಾಜಿನ ಮೊದಲು ಯಾವ ಆಟಗಾರರನ್ನು ಉಳಿಸಿಕೊಂಡಿವೆ ಎಂಬುದರ ಸಂಬಂಧಿಸಿದ ಪಟ್ಟಿಯನ್ನು ಫ್ರಾಂಚೈಸಿಗಳು ಬಹಿರಂಗಪಡಿಸಿವೆ. ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಲಾ ಐವರು ಆಟಗಾರರನ್ನು ಉಳಿಸಿಕೊಂಡರೆ, ಬೆಂಗಳೂರು ಮೂರು ಆಟಗಾರರನ್ನು ಉಳಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ ಕೇವಲ ಇಬ್ಬರು ಅನ್‌ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಂಡಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅತ್ಯಧಿಕ ಪರ್ಸ್‌ನೊಂದಿಗೆ ಭಾಗವಹಿಸಲಿದೆ.

ಇದನ್ನೂ ಓದಿ: Bhagyalakshmi yojana : ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯ ಪ್ರಯೋಜನಗಳು

Vijayaprabha Mobile App free

RCB IPL 2025 Retention List  : ಮೂವರನ್ನು ಉಳಿಸಿಕೊಂಡ ಆರ್‌ಸಿಬಿ

RCB IPL 2025 Retention List

2025ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ವಿರಾಟ್‌ ಕೊಹ್ಲಿಯನ್ನು ₹21 ಕೋಟಿ ಮೊತ್ತಕ್ಕೆ ಉಳಿಸಿಕೊಂಡಿದೆ. ವಿರಾಟ್‌ ನಂತರ ಇನಿಬ್ಬರು ತಂಡದ ಸದಸ್ಯರನ್ನು ಉಳಿಸಿಕೊಂಡಿರುವ ಫ್ರಾಂಚೈಸಿ, ₹11 ಕೋಟಿಗೆ ಬ್ಯಾಟ್ಸಮನ್ ರಜತ್‌ ಪಾಟಿದಾರ್‌, ಮತ್ತು ₹5 ಕೋಟಿಗೆ ವೇಗಿ ಯಶ್‌ ದಯಾಳ್‌ರನ್ನು ಉಳಿಸಿಕೊಂಡಿದೆ. ಆದರೆ ನಿರೀಕ್ಷಿತರೆನ್ನಿಸಿಕೊಂಡಿದ್ದ ಮೊಹಮ್ಮದ್‌ ಸಿರಾಜ್‌, ಮ್ಯಾಕ್ಸ್‌ವೆಲ್‌, ಫಾಪ್‌ ಈ ಪಟ್ಟಿಯಲ್ಲಿ ಸ್ಥಾನ ಪಡೆದೆಲ್ಲ.

ಇದನ್ನೂ ಓದಿ: Bhagyalakshmi yojana : ಫಲಾನುಭವಿಗಳಿಗೆ ಸಿಗುವ ಮೊತ್ತ ಎಷ್ಟು? ಭಾಗ್ಯಲಕ್ಷ್ಮೀ ಬಾಂಡ್ ಹಣ ಡ್ರಾ ಮಾಡಲು ನಿಯಮಗಳೇನು?

ಎಂಎಸ್‌ ಧೋನಿ ಉಳಿಸಿಕೊಂಡ ಚೆನ್ನೈ ಸೂಪರ್‌ ಕಿಂಗ್ಸ್ (Chennai Super Kings IPL 2025 Retention List )

Chennai Super Kings IPL 2025 Retention List

2025ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್‌ ಕಿಂಗ್ಸ್‌ ತನ್ನ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರನ್ನು ₹4 ಕೋಟಿಗೆ ಉಳಿಸಿಕೊಂಡಿದೆ. ಐಪಿಎಲ್‌ 2024ರ ಆವೃತ್ತಿಯಲ್ಲಿ 12 ಕೋಟಿ ಗಳಿಸಿದ್ದರಿಂದ ಧೋನಿ ₹8 ಕೋಟಿಯ ವೇತನ ಕಡಿತಗೊಳಿಸಿದ್ದಾರೆ. ಜೊತೆಗೆ ನಾಯಕ ಋತುರಾಜ್‌ ಗಾಯಕ್ವಾಡ್‌ (₹18 ಕೋಟಿ), ರವೀಂದ್ರ ಜಡೇಜಾ (₹18 ಕೋಟಿ), ಶಿವಂ ದುಬೆ (₹12 ಕೋಟಿ), ಮತ್ತು ಮತೀಷಾ ಪತಿರಾನಾ (₹13 ಕೋಟಿ) ಅವರುಗಳನ್ನು ತಂಡದಲ್ಲಿ ಉಳಿಸಿಕೊಂಡಿದೆ.

 5 ಆಟಗಾರರನ್ನು ರಿಟೈನ್ ಮಾಡಿಕೊಂಡ ಗುಜರಾತ್ ಟೈಟಾನ್ಸ್ (Gujarat Titans IPL 2025 Retention List )

Gujarat Titans IPL 2025 Retention List

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೆಗಾ ಹರಾಜಿಗೂ 3+2 ಸೂತ್ರದಲ್ಲಿ ಐವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅಂದರೆ ಮೂವರು ರಾಷ್ಟ್ರೀಯ ತಂಡದ ಆಟಗಾರರು ಹಾಗೂ ಇಬ್ಬರು ದೇಶೀಯ ಆಟಗಾರರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಂಡಿದೆ.ಶುಭ್​ಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಠಿಯಾ, ಶಾರುಖ್ ಖಾನ್ ಅವರನ್ನು ಉಳಿಸಿಕೊಂಡಿದೆ.

ಇದನ್ನೂ ಓದಿ: Bhagyalakshmi yojana : ಸುಲಭಕ್ಕೆ ಸಿಗಲ್ಲ ‘ಭಾಗ್ಯಲಕ್ಷ್ಮೀ’ ಹಣ; ‘ಭಾಗ್ಯಲಕ್ಷ್ಮೀ’ ಹಣ ಪಡೆಯಲು ಷರತ್ತುಗಳೇನು?

 ಲಕ್ನೋ ಸೂಪರ್ ಜೈಂಟ್ಸ್ (Lucknow Supergiants IPL 2025 Retention List)

Lucknow Supergiants IPL 2025 Retention List

2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 3+2 ಸೂತ್ರದಡಿಯಲ್ಲಿ 5 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಹೀಗೆ ರಿಟೈನ್ ಮಾಡಿಕೊಳ್ಳಲಾದ ಆಟಗಾರರಲ್ಲಿ ನಿಕೋಲಸ್ ಪೂರನ್, ಮಯಾಂಕ್ ಯಾದವ್, ರವಿ ಬಿಷ್ಣೋಯ್ ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ, ಆಯುಷ್ ಬದೋನಿ & ಮೊಹ್ಸಿನ್ ಖಾನ್‌ರನ್ನು ಅನ್​ಕ್ಯಾಪ್ಡ್​ ಆಟಗಾರರ ಪಟ್ಟಿಯಲ್ಲಿ ಉಳಿಸಿಕೊಂಡಿದೆ. ಇನ್ನು ಎಲ್‌ಎಸ್‌ಜಿ ತಂಡದ ನಾಯಕ ಕೆಎಲ್‌ ರಾಹುಲ್‌ರನ್ನು ತಂಡದಿಂದ ಬಿಡುಗಡೆಮಾಡಿದೆ.

 6 ಆಟಗಾರರನ್ನು ರಿಟೈನ್ ಮಾಡಿಕೊಂಡ ಮುಂಬೈ ಇಂಡಿಯನ್ಸ್ (Mumbai IndiansIPL 2025 Retention List)

Mumbai IndiansIPL 2025 Retention List

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಐವರು ಕ್ಯಾಪ್ಟ್ ಪ್ಲೇಯರ್ಸ್ ಇದ್ದರೆ, ಓರ್ವ ಅನ್​ಕ್ಯಾಪ್ಡ್​ ಆಟಗಾರ ಸೇರಿದಂತೆ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಜಸ್​ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಕ್ಯಾಪ್ಟ್ ಪ್ಲೇಯರ್ಸ್ ಆದರೆ, ಅನ್​ಕ್ಯಾಪ್ಡ್​ ಆಟಗಾರ ಪಟ್ಟಿಯಲ್ಲಿ ನಮನ್ ಧಿರ್ ಅವರನ್ನು ಉಳಿಸಿಕೊಂಡಿದೆ.

ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad IPL 2025 Retention List)

Sunrisers Hyderabad IPL 2025 Retention List

ನಿರೀಕ್ಷೆಯಂತೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಐವರು ಆಟಗಾರರನ್ನು ಉಳಿಸಿಕೊಂಡಿದೆ. ಹೆನ್ರಿಕ್ ಕ್ಲಾಸೆನ್ (ರೂ. 23 ಕೋಟಿ) ಅತಿ ಹೆಚ್ಚು ಬಿಡ್ ಆಗಿದ್ದಾರೆ. ಸನ್ ರೈಸರ್ಸ್ ತಂಡ ಪ್ಯಾಟ್ ಕಮಿನ್ಸ್ (18 ಕೋಟಿ ರೂ.), ಅಭಿಷೇಕ್ ಶರ್ಮಾ (14 ಕೋಟಿ ರೂ.), ಟ್ರಾವಿಸ್ ಹೆಡ್ (14 ಕೋಟಿ ರೂ.), ನಿತೀಶ್ ರೆಡ್ಡಿ (ರೂ. 6 ಕೋಟಿ) ಕೊಟ್ಟು ಉಳಿಸಿಕೊಂಡಿದೆ. ಭುವನೇಶ್ವರ್ ಕುಮಾರ್, ಏಡೆನ್ ಮರ್ಕ್ರಾಮ್, ನಟರಾಜನ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್ ಮತ್ತಿತರರನ್ನು ಹರಾಜಿಗೆ ಬಿಡಲಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders IPL 2025 Retention List)

Kolkata Knight Riders IPL 2025 Retention List

ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿದ್ದು, ಒಟ್ಟು ಆರು ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ರಿಂಕು ಸಿಂಗ್ ಅವರು ಅತಿ ಹೆಚ್ಚು (13 ಕೋಟಿ ರೂ.) ಪಾವತಿಸಲಿದ್ದು, ವರುಣ್ ಚಕ್ರವರ್ತಿ 12 ಕೋಟಿ ರೂ., ಸುನೀಲ್ ನರೈನ್ 12 ಕೋಟಿ ರೂ., ಆಂಡ್ರೆ ರಸೆಲ್ 12 ಕೋಟಿ ರೂ., ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ತಲಾ 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ (Delhi Capitals IPL 2025 Retention List)

Delhi Capitals IPL 2025 Retention List

ಈ ಹಿಂದೆ ವರದಿ ಮಾಡಿದಂತೆ ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಅವರನ್ನು ಹರಾಜಿಗೆ ಬಿಟ್ಟಿದ್ದು, ನಾಲ್ವರು ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಅವರಲ್ಲಿ ಅಕ್ಷರ್ ಪಟೇಲ್ ರೂ.16.5 ಕೋಟಿ, ಕುಲದೀಪ್ ಯಾದವ್ ರೂ.13.25 ಕೋಟಿ, ಟ್ರಿಸ್ಟಾನ್ ಸ್ಟಬ್ಸ್ ರೂ.10 ಕೋಟಿ, ಅಭಿಷೇಕ್ ಪೊರೆಲ್ ರೂ.4 ಕೋಟಿ ಕೊಟ್ಟು ಉಳಿಸಿಕೊಂಡಿದೆ.

ಪಂಜಾಬ್ ಕಿಂಗ್ಸ್ (Punjab Kings IPL 2025 Retention List)

Punjab Kings IPL 2025 Retention List

ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಅತ್ಯಧಿಕ ಪರ್ಸ್ ಉಳಿಸಿಕೊಂಡ ತಂಡವಾಗಿದ್ದು, ಇಬ್ಬರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಇವರಿಬ್ಬರೂ ಅನ್ ಕ್ಯಾಪ್ಡ್ ಆಟಗಾರರು ಎಂಬುದು ಗಮನಾರ್ಹ. ಇದರಲ್ಲಿ ಶಶಾಂಕ್ ಸಿಂಗ್ 5.5 ಕೋಟಿ ರೂ., ಪ್ರಭುಸಿಮ್ರಾನ್ ಸಿಂಗ್ 4 ಕೋಟಿ ರೂಗೆ ಉಳಿಸಿಕೊಳ್ಳಲಾಗಿದೆ.

ರಾಜಸ್ಥಾನ್ ರಾಯಲ್ಸ್ (Rajasthan Royals IPL 2025 Retention List)

Rajasthan Royals IPL 2025 Retention List

ರಾಜಸ್ಥಾನ್ ರಾಯಲ್ಸ್ ಆರು ಆಟಗಾರರನ್ನು ಉಳಿಸಿಕೊಂಡಿದ್ದು, ಆದರೆ ಕಳೆದ ಕೆಲವು ವರ್ಷಗಳಲ್ಲಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೋಸ್ ಬಟ್ಲರ್ ಹೊರಗುಳಿದಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಯಶಸ್ವಿ ಜೈಶ್ವಾಲ್ ಗೆ 18 ಕೋಟಿ ರೂ. ಕೊಟ್ಟು ಉಳಿಸಿಕೊಳ್ಳಲಾಗಿದೆ. ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ತಲಾ 14 ಕೋಟಿ ರೂ., ಶಿಮ್ರಾನ್ ಹಿಟ್ಮೆಯರ್ 11 ಕೋಟಿ ರೂ. ಮತ್ತು ಸಂದೀಪ್ ಶರ್ಮಾ 4 ಕೋಟಿ ರೂ. ಕೊಟ್ಟು ಉಳಿಸಿಕೊಳ್ಳಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದ ಸಂದೀಪ್ ಶರ್ಮಾ ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿದುಕೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.